ಪುಸ್ತಕದ ಒಂದು ಬಹಳ ಒಳ್ಳೆಯದೆಂದು ಗೊತ್ತಿಲ್ಲದವರು ಯಾರು ಇಲ್ಲ.ತಂತ್ರಜ್ಞಾವು ಆಧುನಿಕ ಜೀವನವನ್ನು ಬಹುವಾಗಿ ಬದಲಾಯಿಸಿರುವ ಸಂದರ್ಭದಲ್ಲಿಯೂ ಕೂಡ ಪುಸ್ತಕಕ್ಕೆ ಮಹತ್ವ ಇದ್ದೇ ಇದೆ ಆದರೆ ಬಹುತೇಕ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ.ಅದಕ್ಕೆ ಪ್ರಮುಖವಾದ ಕಾರಣವೆಂದರೆ ಓದುವುದಕ್ಕಿಂತ ಹೆಚ್ಚು ಆಕರ್ಷವಾದ ಇತರ ಮಾಧ್ಯಮಗಳು ಮಕ್ಕಳಿಗೆ ಪ್ರಿಯವಾಗಿರುವುದು ಮತ್ತು ಓದಿನಿಂದ ಪಡೆಯುವ ಅನುಭವವನ್ನು ಬೇರೆ ಮೂಲಗಳಿಂದ ಪಡೆಯುವ ಸಾಧ್ಯವಿಲ್ಲ ಎನ್ನುವುದು ಅರಿವಾಗದೆ ಇರುವುದು.
ಇಂಥ ಸನ್ನಿವೇಶದಲ್ಲಿ ‘ಓದು’ ಎನ್ನುವುದು ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಪಠ್ಯಪುಸ್ತಕದ ಓದು ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳಿಗೂ ನಿರಾಶಕ್ತಿದಾಯಕವಾಗಿರುತ್ತದೆ.ಈ ನಿರಾಶಕ್ತಿಗೆ ಕಾರಣವೇನು ಎನ್ನುವುದು ಈಗಾಗಲೇ ಸ್ಥಾಪಿತವಾದ ಓದಿನ ಸ್ಥಿದ್ಧಾತದಿಂದ ನಿರ್ಧಾರವಾಗಿದೆ.ಅದೇನೆಂದರೆ ಪಠ್ಯಪುಸ್ತಕವನ್ನು ಓದುವುದರ ಏಕೈಕ ಉದ್ದೇಶ ಪರೀಕ್ಷೆಗೆ ಚೆನ್ನಾಗಿ ಬರೆಯುವುದು. ಪಠ್ಯಪುಸ್ತಕವನ್ನು ಓದುವುದರ ನಿಜವಾದ ಉದ್ದೇಶ ಕೇವಲ ಪರೀಕ್ಷೆಗೆ ಬರೆಯುವುದಷ್ಟೇ ಆಗಿರುವುದಿಲ್ಲ ಆದರೆ ಶೈಕ್ಷಣಿಕ ಸನ್ನಿವೇಶ ಆ ರೀತಿ ಮಾಡಿಬಿಟ್ಟಿದೆ.ಆದ್ದರಿಂದ ವಿದ್ಯಾರ್ಥಿಗಳು ವಿಚಾರವನ್ನು ತಿಳಿದುಕೊಳ್ಳುವುದಕ್ಕಾಗಿ ಪಾಠ ಪುಸ್ತಕವನ್ನು ಓದುವುದಿಲ್ಲ. ಪರೀಕ್ಷೆಗಾಗಿಯಷ್ಟೇ ಓದುತ್ತಾರೆ.ಪರೀಕ್ಷೆ ಎಂದರೇನು ವಿದ್ಯಾರ್ಥಿಗಳಿಗೆ ನಿರುತ್ಸಾಹ ಮತ್ತು ಬೇಜಾರು.ಆದ್ದರಿಂದ ಏನಾಗುತ್ತದೆ ಎಂದರೆ ಪರೀಕ್ಷೆಯ ಬಗ್ಗೆ ಇರುವ ನಿರುತ್ಸಾಹವೆಲ್ಲವೂ ಪಾಠ ಪುಸ್ತಕಕ್ಕೂ ವರ್ಗಾವಣೆ ಆಗಿ ಬಿಡುತ್ತದೆ.ಪಾಠ ಪುಸ್ತಕವನ್ನು ಕೈಗೆತ್ತಿಗೊಂಡಾಗಲಿಲ್ಲ “ಇವತ್ತು ಓದುವುದು ಬೇಡ ”ಎಂದು ಮನಸ್ಸಿಗೆ ಅನಿಸಲು ಶುರುವಾಗುತ್ತದೆ ನಂತರ ಪರೀಕ್ಷೆ ಯೋಂದು ಉಂಟಲ್ಲ ಎಂಬ ಕಾರಣಕ್ಕಾಗಿ ಕಷ್ಟಪಟ್ಟುಕೊಂಡೇ ಓದುತ್ತಾರೆ.
ಈ ಜಿಡ್ಡು ಕಟ್ಟಿದ ಮನಃಸ್ಥಿತಿಯಿಂದಾಗಿ ಪಠ್ಯಪುಸ್ತಕಗಳಲ್ಲಿ ತಾವು ತಿಳಿದುಕೊಳ್ಳಬೇಕಾದ ಅನೇಕ ಒಳ್ಳೊಳ್ಳೆಯ ವಿಷಯಗಳಿವೆ ಎಂಬ ಆಸಕ್ತಿ ಮತ್ತು ಕುತೂಹಲಗಳು ಮಕ್ಕಳಲ್ಲಿ ಮೂಡಿ ಬರುವುದಿಲ್ಲ ಪಠ್ಯಪುಸ್ತಕದ ಕುರಿತಾಗಿ ಬೆಳೆದ ನಿರಾಶಕ್ತಿಯು ಕ್ರಮೇಣ ಇಡೀ ಓದುವ ವ್ಯವಸ್ಥೆಗೆ ಅನ್ವಯಗೊಂಡು ಯಾವುದನ್ನೂ ಓದುವುದಿಲ್ಲ ಎಂಬ ಮನಸ್ಥಿತಿ ನಿರ್ಮಾಣವಾಗುತ್ತದೆ. ಈ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ಒಂದು ಕಥೆ ಪುಸ್ತಕದ ಒಂದು ಕಥೆಯ ಅರ್ಧ ಭಾಗ ಓದಿ.ನಂತರ ಕಥೆ ಹೇಗೆ ಮುಂದುವರಿಸಬಹುದೆಂದು ನೀವೇ ಯೋಚಿಸಿ.ಆಮೇಲೆ ಕಥೆ ಹೇಗೆ ಮುಗಿದಿದೆ ಎಂದು ಓದಿ ನೋಡಿ ನಂತರ ತಿಳಿಯುವ ಕುತೂಹಲದಿಂದ ಪಠ್ಯವನ್ನು ಓದಿ.ಕ್ರಮೇಣ ಓದಿನ ಆಸಕ್ತಿ ಬೆಳೆಯುತ್ತದೆ.