“ಪ್ರಕರಣ ಇತ್ಯರ್ಥಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೆಚ್ಚು ಸಮಯ ಬೇಕಾದರೆ ನಾವು ಮಧ್ಯಂತರ ಜಾಮೀನು ಪ್ರಶ್ನೆ ಪರಿಗಣಿಸಬಹುದು. ಈ ವಿಚಾರದಲ್ಲಿ ಸ್ಪಷ್ಟತೆ ಇರಲಿ… ಉಭಯ ಪಕ್ಷಕಾರರು ಈ ವಿಚಾರವನ್ನು ಪರಿಗಣಿಸಬೇಕು” ಎಂದು ಪೀಠವು ಮೌಖಿಕವಾಗಿ ಹೇಳಿದೆ.
ನ್ಯಾ. ಖನ್ನಾ ಅವರು ವಿಚಾರಣೆ ವೇಳೆ, “ಜಾಮೀನು ವಿಚಾರದಲ್ಲಿ ಸೂಚನೆ ಪಡೆಯಿರಿ. ಹಾಗೆಂದು ನಾವೇನು ಹೇಳುತ್ತಿಲ್ಲ (ಜಾಮೀನು ನೀಡಲಾಗುತ್ತದೆಯೇ, ಇಲ್ಲವೇ ಎಂದು). ಚುನಾವಣೆಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡುವುದನ್ನು ನಾವು ಪರಿಗಣಿಸಲು ಬಯಸುತ್ತೇವೆ. ಡಾ. ಸಿಂಘ್ವಿ (ಕೇಜ್ರಿವಾಲ್ ವಕೀಲ) ನಮ್ಮ ಮಾತನ್ನು ಆಲಿಸದೇ ನೀವು ಆರಂಭಿಸಬೇಡಿ- ನಾವು ಜಾಮೀನು ನೀಡಬಹುದು ಅಥವಾ ನೀಡದೇ ಇರಬಹುದು. ನಾವು ನಿಮ್ಮನ್ನು ಆಲಿಸುತ್ತೇವೆ. ನಾವು ನಿಮಗೆ ಮುಕ್ತವಾಗಿರಲಿದ್ದೇವೆ. ಉಭಯ ಪಕ್ಷಕಾರರು ಅಚ್ಚರಿ ಹೊಂದಬಾರದು ಎಂದು ನಾವು ಮೊದಲೇ ಹೇಳುತ್ತಿದ್ದೇವೆ. ಎರಡನೆಯದಾಗಿ… ನೀವು (ಕೇಜ್ರಿವಾಲ್) ಹೊಂದಿರುವ ಸ್ಥಾನಮಾನದ ಹಿನ್ನೆಲೆಯಲ್ಲಿ ನೀವು ಯಾವುದಾದರೂ ಕಡತಗಳಿಗೆ ಸಹಿ ಹಾಕಬೇಕಿದೆಯೇ? ನಾವು ಮುಕ್ತವಾಗಿದ್ದೇವೆ. ಹಾಗೆಂದು, ಏನೇನೊ ಕಲ್ಪಿಸಿಕೊಳ್ಳಬೇಡಿ… ಈ ವಿಚಾರದಲ್ಲಿ ಹೆಚ್ಚಾಗಿ ಏನೂ ಅರ್ಥೈಸಬೇಡಿ” ಎಂದರು.
ಅAತಿಮವಾಗಿ ಪೀಠವು ವಿಚಾರಣೆಯನ್ನು ಮೇ ೭ಕ್ಕೆ ಮುಂದೂಡಿತು.