ನವದೆಹಲಿ (New Delhi): ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಯೋಗಾಭ್ಯಾಸದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಭಾರತೀಯ ಸೇನೆಯ ಯೋಧರು ಹಿಮಾವೃತ ಗಿರಿ ಶಿಖರಗಳಲ್ಲೂ ಯೋಗ ಮಾಡಿ ಗಮನ ಸೆಳೆದಿದ್ದಾರೆ.
ಇಂಡೋ – ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಹಿಮವೀರರು ಸಿಕ್ಕಿಂನಲ್ಲಿ 17 ಸಾವಿರ ಅಡಿ ಎತ್ತರ ಹಿಮ ಶಿಖರದ ಮೇಲೆ ಯೋಗ ಮಾಡಿದ್ದಾರೆ.
ಉತ್ತರಾಖಂಡದಲ್ಲೂ ಇಂಡೋ – ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಹಿಮ ವೀರರು 16 ಸಾವಿರ ಅಡಿ ಎತ್ತರದ ಹಿಮಾವೃತ ಶಿಖರದ ಮೇಲೆ ಯೋಗ ಮಾಡಿದರು.
ಅದೇ ರೀತಿ ಹಿಮಾಚಲ ಪ್ರದೇಶದ 16 ಸಾವಿರದ 500 ಅಡಿ ಎತ್ತರದ ಶಿಖರದ ಮೇಲೆ ಇಂಡೋ – ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಯೋಗ ಮಾಡಿದ್ದಾರೆ.
ಲಡಾಖ್‌ನಲ್ಲೂ ಇಂಡೋ – ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಹಿಮ ವೀರರು 17 ಸಾವಿರ ಅಡಿ ಎತ್ತರದ ಹಿಮಾವೃತ ಶಿಖರದ ಮೇಲೆ ಯೋಗ ಮಾಡಿ ಗಮನ ಸೆಳೆದರು.
ಅರುಣಾಚಲ ಪ್ರದೇಶದ ಲೋಹಿತ್ ಪುರ, ಅಸ್ಸಾಂನ ಲಚಿತ್ ಘಾಟ್ ಸೇರಿದಂತೆ ಎಲ್ಲೆಡೆ ಐಟಿಬಿಪಿ ಹಿಮ ವೀರರು ಕೊರೆವ ಚಳಿಯಲ್ಲೂ ಯೋಗ ಮಾಡಿದರು.
ಯೋಗ ಗುರು ಬಾಬಾ ರಾಮ್ ದೇವ್ ಅವರು ಉತ್ತರಾಖಂಡ ರಾಜ್ಯದ ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ನೂರಾರು ಅನುಯಾಯಿಗಳ ಜೊತೆಗೆ ಯೋಗಾಭ್ಯಾಸ ಮಾಡಿದರು. ಮಕ್ಕಳೂ ಕೂಡಾ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಯೋಗ ದಿನವನ್ನು ಪತಂಜಲಿ ಯೋಗ ಪೀಠ ವಿಶಿಷ್ಠವಾಗಿ ಆಚರಿಸಿತು.
ಪಂಜಾಬ್‌ನ ಅಮೃತಸರದ ದುರ್ಗಿಯಾನಾ ತಿರಥ್‌ನಲ್ಲಿ ನೂರಾರು ಮಂದಿ ಯೋಗಾಭ್ಯಾಸ ಮಾಡಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮಿಸಿದರು.
ಗುಜರಾತ್ ರಾಜ್ಯದ ವಡೋದರಾದಲ್ಲಿ ಇರುವ ಸಹಜ್ ರಂಗೋಲಿ ಸಮೂಹವು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಗುಜರಾತ್ ಪಬ್ಲಿಕ್ ಸ್ಕೂಲ್‌ನಲ್ಲಿ 40 ಅಡಿ ವಿಸ್ತೀರ್ಣದ ರಂಗೋಲಿ ರಚಿಸಿ ಗಮನ ಸೆಳೆದರು.