1. ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಕರುಳು ಬೇನೆ ಕಡಿಮೆ ಆಗುವುದು.
2. ಬಾಳೆದಿಂಡಿನ ಪಲ್ಯವನ್ನು ಆಗಾಗ ಸೇವಿಸುತ್ತಿದ್ದರೆ ಕರುಳಿನಲ್ಲಿರುವ ವಿಷ ಕ್ರಿಮಿಗಳು ಸತ್ತು, ಕರುಳಬೇನೆ ಕನಿಷ್ಠ ಗೊಳ್ಳುವುದು.
3. ಬಾಳೆದಿಂಡಿನ ಪಲ್ಯವನ್ನು ಆಗಾಗ ಸೇವಿಸುವುದರಿಂದ ರಕ್ತಾತಿಸಾರದಲ್ಲಿ ಗುಣ ಕಂಡು ಬರುವುದರ ಜೊತೆಗೆ ಕರುಳಿನಲ್ಲಿ ಇರಬಹುದಾದ ವಿಷ ಕ್ರೀಮಿಗಳು ನಾಶ ಹೊಂದುವುದು.
4. ಪರಂಗಿ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ತಿನ್ನುವುದರಿಂದ ಕರುಳಿನಲ್ಲಿ ವಾಸಿಸುವ ಕ್ರಿಮಿಗಳು ನಾಶ ಆಗುವುದರ ಮೂಲಕ ಕರುಳು ಬೇನೆ ನಿವಾರಣೆ ಆಗುವುದು.
5. ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ, ಕುಡಿದರೆ ಆಸನಾಗ್ರದಲ್ಲಿ ಆಗುವ ಉರಿ ನಿಲ್ಲುವುದು.
6. ನೆಲ್ಲಿಕಾಯಿಯ ಚೂರ್ಣವನ್ನು ಬಿಸಿ ನೀರಿನಲ್ಲಿ ಕಿವುಚಿ, ಸಕ್ಕರೆ ಸೇರಿಸಿ, ಶೋಧಿಸಿದ ನಂತರ ಕುಡಿದರೆ ಬಾಯಿ ಮೂಗು, ಗುದದ್ವಾರದಿಂದ ಹೊರ ಬರುವ ರಕ್ತ ನಿಲ್ಲುವುದರ ಮೂಲಕ ಕರುಳು ಬೇನೆ ಕಡಿಮೆ ಆಗುವುದು.
7. ಎಲೆಯ ಕೋಸನ್ನು ಹಸಿಯಾಗಿಯೇ ತಿನ್ನುತ್ತಿದ್ದರೆ ಹೊಟ್ಟೆಯ ಹುಣ್ಣು ವಾಸಿ ಆಗುವುದರೋಂದಿಗೆ ಕರುಳ ಬೇನೆಯೂ ಕಡಿಮೆ ಆಗುವುದು.
8. ಹಾಗಲಕಾಯಿ ಗೊಜ್ಜು ವಾರಕ್ಕೊಮ್ಮೆ ಆದರೆ ಸೇವಿಸುತ್ತಿದ್ದರೆ ಕರುಳು ಹುಣ್ಣು ಗುಣವಾಗಿ ರಕ್ತ ಶುದ್ಧ ಹೊಂದುವುದು.
9. ಆರೋರೂಟ್ ಗಂಜಿ ಮಾಡಿ ಸೇವಿಸಿದರೆ ಕರುಳ ಬೆಣ್ಣೆ ಕಡಿಮೆ ಆಗುವುದು.
10. ಬಾರ್ಲಿ ಗಂಜಿ ಕುಡಿಯುವುದರಿಂದಲೂ ಕರುಳ ಬೇನೆ ನಿವಾರಣೆ ಆಗುವುದು.
ಕಿವಿನೋವು:-
1. ಬೆಳ್ಳುಳ್ಳಿಯ ತೋಳೆಯನ್ನು ಹರಳೆಣ್ಣೆಯಲ್ಲಿ ಹುರಿದು, ಆರಿದ ನಂತರ ಕಿವಿಗೆ ಒಂದೊಂದು ತೊಟ್ಟು ಬಿಡುತ್ತಿದ್ದರೆ ಕಿವಿ ನೋವು ಕಡಿಮೆ ಆಗುವುದು.
2. ಬಾಣಂತಿಯರು ಬೆಳ್ಳುಳ್ಳಿಯ ಚಿರುಗಳನ್ನು ಅತ್ತಿರಿ ಹತ್ತಿಯಲ್ಲಿ ಹೊರಬರದಂತೆ ಸುತ್ತಿ ಕಿವಿಯಲ್ಲಿ ಇಟ್ಟುಕೊಂಡರೆ ಶೀತದಿಂದ ಕಿವುಡಾಗುವ ಕಷ್ಟದಿಂದ ಪಾರಾಗುವರು.
3. ಕಿವಿಯೊಳಗೆ ಸಣ್ಣ ಕ್ರಿಮಿಗಳು ಸೇರಿದಾಗ, ಅಡಿಗೆಯ ಉಪ್ಪನ್ನು ಸ್ವಲ್ಪ ನೀರಿಗೆ ಬೆರೆಸಿ, ಕಿವಿಯೊಳಗೆ ತೋಟಕಿ ಸುತ್ತಿದ್ದರೆ ಕ್ರಿಮಿಗಳು ಹೊರಬರುವವು ಇಲ್ಲವೇ ಇದ್ದಲ್ಲಿಯೇ ಸಾಯುವವು
4. ಹಸಿ ಮೂಲಂಗಿಯ ಸೇವನೆಯಿಂದ ಕಿವಿ ನೋವು ನಿವಾರಣೆ ಆಗುವುದು.
5. ಕಿವಿ ಹುಣ್ಣಾದಾಗ, ಸೋರುತ್ತಿರುವಾಗ ತುಳಸಿ ಎಲೆಯ ರಸವನ್ನು ತೆಗೆದು, ಕಿವಿಯೊಳಗೆ ಹಿಂದುತ್ತಿದ್ದರೆ ಕಿವಿ ನೋವು ಕಡಿಮೆ ಆಗುವುದು.
6. ಬೇವಿನ ಸೊಪ್ಪನ್ನು ನೀರಿನಲ್ಲಿ ಬೇಯಿಸಿ, ಜಾರುವ ಹಬೆಯನ್ನು ಕಿವಿಗೆ ಹಾಯಿಸುತ್ತಿದ್ದರೆ ಕಿವಿನೋವು ಕಡಿಮೆ ಆಗುವುದು.
7. ಯಾವುದಾದರೂ ಕ್ರಿಮಿಕೀಟ ಅರಿವಿಲ್ಲದೆ ಕಿವಿಯೊಳಗೆ ಹೋಗಿ, ಹೊರಕ್ಕೆ ಬರಲಾರದೆ ಬಾಧೆಪಡುವಾಗ,ಬೇವಿನ ಸೊಪ್ಪಿನ ಒಂದು ಚಮಚ ರಸಕ್ಕೆ ಒಂದು ಚಿಟಿಕಿ ಚಿಟಿಕೆಯಷ್ಟು ಉಪ್ಪಿನ ಪುಡಿ ಸೇರಿಸಿ,ಕಿವಿಗೆ ಬಿಡುವುದರಿಂದ ಕ್ರಿಮಿಗಳು ನಾಶ ಆಗುವುದರ ಮೂಲಕ ಕಿವಿ ನೋವು ಕಡಿಮೆ ಆಗುವುದು.