ಭಾವಾತ್ಮಕ ಸ್ಥಿರತೆ ಎಂಬುದು ಒಂದು ಒಳ್ಳೆಯ ವ್ಯಕ್ತಿತ್ವದ ಲಕ್ಷಣವಾಗಿರುತ್ತದೆ.ಆದರೆ ಮನುಷ್ಯ ಮೂಲತಃ ಭಾವಜೀವಿ. ತನ್ನ ಪರಿಸರಕ್ಕೆ ಮನುಷ್ಯ ತಕ್ಷಣ ಸ್ಪಂದಿಸುವುದು ಭಾವನಾತ್ಮಕವಾಗಿಯೇ.
ಉದಾಹರಣೆಗೆ ಹಾವಿನಂತೆ ಹರಿದಾಡುವ ಒಂದು ವಸ್ತುವಿನ ಮೇಲೆ ಕಾಲಿಟ್ಟರೆ ತಕ್ಷಣ ಅನೈಚ್ಛಿಕವಾಗಿ ಹೌಹಾರಿಬಿಡುತ್ತೇವೆ.ಯಾರು ಕೂಡ ತಾನು ಕಾಲಿಟ್ಟಿರುವುದು ಹಾವಿನ ಮೇಲೆಯೂ, ಹಾವಿನಂತೆ ಇರುವ ಮೇಲೆ ಎಂದು ಆಲೋಚಿಸಿ ಪರಿಶೀಲಿಸಿ ನಂತರ ಹೌಹಾ ರುವುದಿಲ್ಲ. ಆಂದರೆ ಮನುಷ್ಯನ ಮೊದಲ ಸ್ಪಂದಿಸುವಿಕೆ ಭಾವನಾತ್ಮಕವಾಗಿಯೇ ಇರುತ್ತದೆ.ನಂತರ ವಿಚಾರ ಮಾಡಿ ಪ್ರತಿಕ್ರಿಸುತ್ತಾನೆ. ವೈಚಾರಿಕತೆಯ ಸಹಜ ಸ್ವಭಾವವಲ್ಲ. ನಾವು ಗಳಿಸಿಕೊಂಡ ಸ್ವಭಾವ ನಾವು ವಿಚಾರವಂತರಾಗಿ ಆಲೋಚಿಸುವ ಸ್ವಭಾವವನ್ನು ಗಳಿಸಿಕೊಂಡ ದಕ್ಷತೆ ಸ್ವಲ್ಪ ಕಡಿಮೆ ಇದ್ದರೂ ವ್ಯಕ್ತಿತ್ವದಲ್ಲಿ ಭಾವನಾತ್ಮಕ ಅಸ್ಥಿರತೆ ಉಂಟಾಗುತ್ತದೆ. ಪ್ರೌಢ ಹಂತದ ವಿದ್ಯಾರ್ಥಿಗಳಲ್ಲಂತೂ ಭಾವನಾತ್ಮಕ ಅಸ್ಥಿರತೆಯು ಸ್ವಾಭಾವಿಕವಾದ ಗುಣವಾಗಿರುತ್ತದೆ. ಯಾಕೆಂದರೆ ವೈಚಾರಿಕ ದಕ್ಷತೆಯನ್ನು ಸಾಧಿಸಿಕೊಳ್ಳಲು ಮಟ್ಟಿಗೆ ಅವರಿನ್ನು ಬೆಳೆದಿರುವುದಿಲ್ಲ.
ಭಾವನಾತ್ಮಕ ಅಸ್ಥಿರತೆಯೂ ನೋವು, ಸಂಕಟ, ಹತಾಶೆಗಳನ್ನು ಬಹಳ ಆಳವಾಗಿ ಮನಸ್ಸಿನಲ್ಲಿ ಹುದುಕಿ ಹಾಕಿ ಬಿಡುತ್ತದೆ. ಇಲ್ಲಿ ನೋವು, ಸಂಕಟ, ಹತಾಶೆಗಳೆಲ್ಲವೂ ಬಹಳ ಸಾಪೇಕ್ಷವಾಗಿದ್ದಿದ್ದು ಎಂದು ಅರ್ಥ ಮಾಡಿಕೊಳ್ಳಬೇಕು. ಯಾರೂ ಒಬ್ಬನಿಗೆ ಹುಚ್ಚನಾಗಲು ಸೂಕ್ತವಾದ ಹತಾಶೆಯು ಮತ್ತೊಬ್ಬನಿಗೆ ನಕ್ಕು ಬಿಟ್ಟುಬಿಡುವಷ್ಟು ಹಗುರವಾದ ಸಂಗತಿಯಾಗಿರಬಹುದು. ಅಂದರೆ ಘಟನೆಯ ತೀಕ್ಷಣತೆ ಇಲ್ಲಿ ಮುಖ್ಯವಲ್ಲ. ಘಟನೆಯನ್ನು ಎಷ್ಟು ತೀಕ್ಷ್ಣವಾಗಿ ವ್ಯಕ್ತಿಯು ಅನುಭವಿಸಿದ್ದಾನೆ ಎನ್ನುವುದಷ್ಟೇ ಮುಖ್ಯ.ಅನೇಕ ಸಂದರ್ಭಗಳಲ್ಲಿ ಇಂತಹ ಘಟನೆಗಳು ಎಷ್ಟು ಆಳವಾಗಿ ಮನಸ್ಸಿನೊಳಗೆ ಕುಳಿತುಬಿಡುತ್ತದೆ ಎಂದರೆ ತಾನು ಯಾಕಾಗಿ ಹೀಗಾಗಿದ್ದೇನೆ ಎನ್ನುವುದು ಸಂಬಂಧಪಟ್ಟ ವ್ಯಕ್ತಿಗೇ ಗೊತ್ತಿರುವುದಿಲ್ಲ! ಆದರೆ ಸಾಮಾನ್ಯ ಹಾಗೆ ಇರಲು ಸಾಧ್ಯವಾಗದೆ ಇದ್ದರೆ ಅವರಲ್ಲಿ ಏನೋ ಒಂದು ಸಮಸ್ಯೆ ಇದೆ ಎಂದೇ ಅರ್ಥ. ಇಂತಹ ಸಂದರ್ಭಗಳಲ್ಲಿ ಆಪ್ತ ಸಮಾಲೋಚನೆಯ ಅಗತ್ಯವಿರುತ್ತದೆ. ಆಪ್ತ ಸಮಾಲೋಚನೆಗೆ ಹಾಜರಾದ ಕೂಡಲೇ ತಾನು ಮನೆ ಮನೋರೋಗಿ ಎಂದು ಅನಿಸಿಕೊಂಡು ಬಿಡುತ್ತೇನೆ ಎಂಬ ಭಯ ಬೇಡ. ಮೇಲಾಗಿ ಎಲ್ಲ ಆಪ್ತ ಸಮಾಲೋಚನೆಗೂ ಮನೋ ವೈದ್ಯರೇ ಬೇಕೆಂದೇನೂ ಇಲ್ಲ.ನಂಬಿಕೆ ಅಹ್ರರಾದ ಅನುಭವಿ ಶಿಗಳು ಹಿತೈಷಿಗಳು ಯಾರೂ ಆಗಬಹುದು. ಎಷ್ಟೋ ಸಂದರ್ಭದಲ್ಲಿ ನಮ್ಮ ತಾಯಿ ತಂದೆ,ಅಧ್ಯಾಪಕರುಗಳೇ ಒಳ್ಳೆಯ ಆಪ್ತ ಸಮಾಲೋಚಕರಾಗಿರುತ್ತಾರೆ.ಆದರೆ ಆಪ್ತ ಸಮಾಲೋಚಕರಿಗೆ ನಮಗೆ ಮಾರ್ಗದರ್ಶನ ಮಾಡಲು ಬೇಕಾದಷ್ಟು ವಿಷಯಗಳು ಅರ್ಥವಾಗಬೇಕಾಗಿರುವುದರಿಂದ ಅವರೊಂದಿಗೆ ನಾವು ಬಿಗುಮಾನ ಮತ್ತು ಭಯವನ್ನು ಬಿಟ್ಟು ಮುಕ್ತವಾಗಿ ಮಾತನಾಡಬೇಕು.