ಸರ್ವಾಂತರ್ಯಾಮಿ ನುಗ್ಗೆಯನ್ನು ಪರಿಶ್ರಮವಿಲ್ಲದೇ ಬೆಳೆಯಬಹುದಾಗಿದೆ ಎಲೆ, ಹೂ, ಕಾಯಿ ಎಲ್ಲವೂ ಆಹಾರ ಮತ್ತು ಔಷಧಿಯಲ್ಲಿ ಎರಡು ಸಾವಿರ ವರ್ಷದನ್ನು ಪುರಾತನಕಾಲದಲ್ಲಿಯೇ ಬಳಕೆಯಾಗುತ್ತಿತ್ತಾದ್ದರಿಂದ ನುಗ್ಗೆ ಯನ್ನು ಔಷಧಿ ಖನಿಜ ಎಂದು ಪೂರ್ವಿಕರು ಕರೆದಿದ್ದಾರೆ. ಋಗ್ವದದಲ್ಲಿ ನುಗ್ಗೆಯನ್ನು ಅಂದು ಹಿತ್ತಲಗಿಡವಾಗಿ ಬೆಳೆಸುತ್ತಿದ್ದರೆಂದು ಉಲ್ಲೇಖವಿದೆ ಮರಕ್ಕೆ ಶೋಭೆ ತರುವ ಹೂಗಳ ದೆಸೆಯಿಂದ ಶೋಭಾಂಜನವೆಂಬ ಹೆಸರೂ ಇದೆ ನೀಲಿ ಹೂಗಳ ಬಣ್ಣದಿಂದ ನೀಲಿ, ಕೆಂಪು, ಬಿಳಿ ಎಂದು ಮೂರು ಜಾತಿಗಳನ್ನು ಗುರುತಿಸಿವೆಯಾದರೂ ಕಾಡುನುಗ್ಗೆಯೆಂಬ ಇನ್ನೊಂದು ಮರದ ಬಗ್ಗೆಯೂ ವಿವರಣೆ ದೊರೆಯುತ್ತದೆ. ನುಗ್ಗೆಕಾಯಿಗಳನ್ನು ಮನಾಲೆ ಹೆಚ್ಚು ಬಳಸಿ ಅಡುಗೆ ತಯಾರಿಸಿದರೆ ಹಳ್ಳಿಗಾಡಿನಲ್ಲಿ ‘ಎಲುಬಿಲ್ಲದ ಮಾಂಸ’ ಎಂದೇ ಕರೆಯುತ್ತಾರೆ.
ಸಸ್ಯವರ್ಣನೆ
ನುಗ್ಗೆಯ ಸಸ್ಯನಾಮ ಮೊರಿಂಗಾ ಟೆರಿಗೊಸ್ಪರ್ಮ ಎಂದಿದ್ದು ಮೊರಿಂಗೇಸಿ ಕುಟುಂಬಕ್ಕೆ ಸೇರುವ ಇದು ಬಹುವಾರ್ಷಿಕ ಮರವಾಗಿದ್ದು ಹೆಮ್ಮರವಾಗಿ ಬೆಳೆಯುತ್ತದೆ. ಇದು ಸಂಯುಕ್ತ ಜೋಡಣೆಯ ಎಲೆಗಳನ್ನು ಹೊಂದಿರುತ್ತದೆ. ಹೂಗಳು ಬಿಳಿಯಾಗಿದ್ದು ಗೊಂಚಲುಗಳಲ್ಲಿ ಬಿಡುತ್ತವೆ. ಕಾಯಿಗಳು ತೆಳು ಹಾಗೂ ಉದ್ದವಾಗಿ ಇರುತ್ತವೆ
ಮಣ್ಣು
ನುಗ್ಗೆಯನ್ನು ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಮರಳುಗೋಡು ಅತ್ಯುತ್ತಮ. ಕರಾವಳಿ ತೀರ ಮತ್ತು ನೀರು ನಿಲ್ಲದೇ ಹರಿದು ಹೋಗುವ ಭೂಮಿ ಒಳ್ಳೆಯದು. ಮಣ್ಣಿನಲ್ಲಿ ಸ್ವಲ್ಪ ಸುಣ್ಣವಿದ್ದರೂ ಅಡ್ಡಿಯಿಲ್ಲ.
ಹವಾಗುಣ
ಉಷ್ಣವಲಯದ ಮರ ಒಣ ಹಾಗೂ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿಯೇ ಚೆನ್ನಾಗಿ ಕಾಯಿ ಬಿಡುತ್ತದೆ. ನಾಟಿ ಮಾಡಲು ಜೂನ್ ಜುಲೈ ಸೂಕ್ತ
ತಳಿಗಳು :
ಜಾಫ್ರಾ ತಳಿ ಹೆಚ್ಚು ಬೇಸಾಯದಲ್ಲಿದೆ. ಕಾಡು ಮುರುಂಗಾಯ್, ಪಾಲು ಮುರುಂಗಾಯ್, ಪುನಾ ಮುಂಗಯ್ ಎಂಬ ವಿಧಗಳು ಇವೆ ಚಾವಕುಬೇರಿ ಮುರುಂಗಾ ಮತ್ತು ಚಿಮೆ ಮುರುಂಗಾ ಎಂಬ ತಮಿಳುನಾಡಿನ ವಿಧಗಳಿವೆ ಸಿ.ಓ-1, ಪರಿಯಾಕುಲಮ್ 1 ಎಂಬ ತಳಿಗಳೂ ಇವೆ. ಹಿತ್ತಲಲ್ಲಿ ಬೆಳೆಯಲು ಈ ತಳಿಗಳು ಸೂಕ್ತ ಕೇವಲ 3-4 ಅಡಿ ಎತ್ತರದಲ್ಲೇ ಕಾಯಿ ಬಿಡುವಂತಹ ತಳಿಗಳು ಇವು.
ಬೇಸಾಯ ಕ್ರಮಗಳು
ಬೀಜದಿಂದ ಅಥವಾ ಕಾಂಡದ ತುಂಡುಗಳನ್ನು ಉಪಯೋಗಿಸಿ ನುಗ್ಗೆಯ ಸಸ್ಯಾಭಿವೃದ್ಧಿ ಯನ್ನು ಮಾಡಬಹುದು ಬೀಜ ಉಪಯೋಗಿಸಿದರೆ ಸಸ್ಯ ನಿಧಾನವಾಗಿ ಬೆಳೆಯುತ್ತದೆ.
ರೆಂಬೆಯ ತುಂಡುಗಳಿಂದ ಸುಲಭವಾಗಿ ಸಸ್ಯಾಭಿವೃದ್ಧಿ ಮಾಡಬಹುದು. 90 ಸೆಂ.ಮೀ. ಘನ ಗಾತ್ರದ ಗುಂಡಿಗಳನ್ನು ಮಾಡಿ 7.5 ಕೆ.ಜಿ. ತಿಪ್ಪೆಗೊಬ್ಬರ ಮತ್ತು ಮೇಲ್ಮಣ್ಣುಗಳಿಂದ ತುಂಬಿ 15 ಸೆಂ.ಮೀ ಉದ್ದದ ಕಾಂಡದ ತುಂಡುಗಳನ್ನು ನಾಟಿಮಾಡಬೇಕು.
ನೀರಾವರಿ
ಸಸಿಯನ್ನು ನಾಟಿ ಮಾಡಿದ ನಂತರ ಮೊದಲ ದಿನಗಳಲ್ಲಿ ನೀರು ಒದಗಿಸುವುದು ಅನಿವಾರ್ಯ ಬೇಸಿಗೆಯಲ್ಲಿ 15 ದಿನಗಳಿಗೊಮ್ಮೆಯಾದರೂ ನೀರಾವರಿ ಅಗತ್ಯವಿದೆ. ಕಳೆ ಬಂದಾಗ ತೆಗೆಯುತ್ತಿರಬೇಕು.
ಕೀಟ ಮತ್ತು ರೋಗಗಳು
ಕಪ್ಪು ಕಂಬಳಿ ಹುಳು, ಕಂದು ಬಣ್ಣದ ಪತಂಗ, ಮೊಗ್ಗು ಕೊರೆಯುವ ಹುಳು. ನುಸಿ ಮತ್ತು ಹೇನು ಇದನ್ನು ಬಾಧಿಸುವ ಕೀಟಗಳು ಬೇರು ಕೊಳೆಯುವ ರೋಗ ಎಲ್ಲಾ ಹಂತದಲ್ಲೂ ಗಿಡವನ್ನು ಕಾಡುವ ರೋಗ
ಕೊಯ್ದು ಮತ್ತು ಇಳುವರಿ
ಬೀಜದಿಂದ ಸಸ್ಯಾಭಿವೃದ್ಧಿ ಮಾಡಿದಾಗ ಮೊದಲ ಕೊಯ್ದನ್ನು ಪಡೆಯಲು 2-3 ವರ್ಷ ಬೇಕಾದರೆ, ಇನ್ನಿತರ ಸಸ್ಯಾಭಿವೃದ್ಧಿ ವಿಧಾನಗಳನ್ನು ಅನುಸರಿಸಿದ್ದಲ್ಲಿ ಕೇವಲ 6 ತಿಂಗಳಲ್ಲಿ ಕಾಯಿ ಪಡೆಯಲು ಸಾಧ್ಯ ನುಗ್ಗೆ ಮರಗಳ ಆಯಸ್ಸು 15ರಿಂದ 20 ವರ್ಷಗಳು, ಮರದ ರೆಂಬೆಗಳು ಮೃದುವಾಗಿ ಇರುವುದರಿಂದ ನೆಲದ ಮೇಲೆಯೇ ನಿಂತು ಅಥವಾ ದೋಟಿಯ ಸಹಾಯದಿಂದ ಕೊಯ್ದು ಮಾಡುವುದು ಹೆಚ್ಚು ರೂಢಿಯಲ್ಲಿದೆ.
ಉಪಯುಕ್ತ ಭಾಗಗಳು
ಬೇರು, ತೊಗಟೆ, ಕಾಯಿ, ಹೂ, ಎಲೆ, ಬೀಜ ಹಾಗೂ ಅಂಟು.
ರಾಸಾಯನಿಕ ಘಟಕಗಳು
ಎಲೆ — ಅಮೈನೋ ಆಮ್ಲಗಳು, ಆಸ್ಪಾರ್ಟಿಕ್, ಗ್ಲುಟಾಮಿಕ್, ಸಿರಿನ್ ಸ್ಟೈಸಿನ್
ಹೂ—ಔರ್ ಟಿನ್, ಕಂಫೆರಾಲ್
ಸಮಗ್ರ ಗಿಡ—ಮೊರಿಂಗಿನ್, ಮೊರಿಂಗಿನಿನ್, ಬೈರೆನಾಲ್, ಇಂಡೋಲ್ ಅಸಿಟಿಕ್ ಅಮ್ಲ, ಟಿರ್ಗೊಸ್ವರ್ಮಿನ್, ಕ್ಯಾರೊಟಿನ್
ತೊಗಟೆ — ಸ್ಟಿರಾಲ್, ಬೈರೆನಾಲ್,