ಮನೆ ಕಾನೂನು ಪಾವತಿ ತಡೆ ಕಾರಣಕ್ಕೆ ಚೆಕ್ ಅಮಾನ್ಯ ಪ್ರಕರಣ – ಎರಡು ಹೈಕೋರ್ಟ್ ತೀರ್ಪುಗಳ ಮಾಹಿತಿ

ಪಾವತಿ ತಡೆ ಕಾರಣಕ್ಕೆ ಚೆಕ್ ಅಮಾನ್ಯ ಪ್ರಕರಣ – ಎರಡು ಹೈಕೋರ್ಟ್ ತೀರ್ಪುಗಳ ಮಾಹಿತಿ

0

ಚೆಕ್ ಅಮಾನ್ಯ ಪ್ರಕರಣದಲ್ಲಿ ಪಾವತಿ ತಡೆ (Stop Payment)  ಸೂಚನೆಯನ್ನು ಚೆಕ್ ನೀಡಿದಾತ ನೀಡಿದರೂ  Negotiable Instruments Act ನಡಿ ದೂರು ದಾಖಲಿಸಬಹುದೇ ?

ಅದೇ ರೀತಿ ಹಲವು ಚೆಕ್ ಗಳ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸದಂತೆ ಒಂದೇ ಲೀಗಲ್ ನೋಟೀಸ್ ಮತ್ತು ಖಾಸಗಿ ದೂರನ್ನು ದಾಖಲಿಸಬಹುದೇ ?

ಈ ಮೇಲಿನ ಎರಡು ಪ್ರಕರಣಕ್ಕೆ ಸಂಬಂಧಿಸಿದ ಎರಡು ಮಹತ್ವದ ಪ್ರಕರಣಗಳನ್ನು ಎರಡು ಹೈಕೋರ್ಟ್ ಗಳು ಇತ್ಯರ್ಥಪಡಿಸಿವೆ.

  1. ಗೋವಿಂದರಾಜ್ Vs ಅಶ್ವಿನಿ ಬರೈ ಮದ್ರಾಸ್ ಹೈಕೋರ್ಟ್ (ದಿನಾಂಕ: 19-08-1997) 1998 CriLJ 11
  2. ಯುನಿಕ್ ಇನ್ ಪೊವೇಸ್ ಪ್ರೈ ಲಿ. Vs ಎಂ.ಪಿ.ಎಸ್.ಟೆಲಿಕಾಂ ಪ್ರೈ.ಲಿ ದಿಲ್ಲಿ ಹೈಕೋರ್ಟ್ (19ನೇ ಮಾರ್ಚ್, 2019)

ಈ ಎರಡು ಪ್ರಕರಣಗಳಲ್ಲಿ ಆರೋಪಿ/ ಪ್ರತಿವಾದಿಯ ಚೆಕ್ ಮಾನ್ಯ ಮಾಡದಂತೆ ತನ್ನ ಬ್ಯಾಂಕ್ ಗೆ ಸೂಚನೆ ನೀಡಿದ ಹಿನ್ನಲೆಯಲ್ಲಿ Payment Stopped by Drawer  ಎಂಬ ಷರಾದೊಂದಿಗೆ ಚೆಕ್ ಅಮಾನ್ಯಗೊಂಡಿತು.

ಇನ್ನೊಂದು ಪ್ರಮುಖ ವಿಚಾರ ಎಂದರೆ ಈ ಮೇಲಿನ ಎರಡೂ ಪ್ರಕರಣಗಳು ತಲಾ ಆರು ಚೆಕ್ ಗಳ ಅಮಾನ್ಯ ಪ್ರಕರಣವಾಗಿದ್ದು, ಒಂದೇ ಲೀಗಲ್ ನೋಟೀಸ್ ಮತ್ತು ಒಂದೇ ಖಾಸಗಿ ದೂರನ್ನು ದಾಖಲಿಸಲಾಗಿತ್ತು.

ಎರಡೂ ಪ್ರಕರಣಗಳಲ್ಲೂ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಅಲ್ಲದೇ ದೂರುದಾರರ ಪರ ತೀರ್ಪು  ನೀಡಿತ್ತು.