ಮನೆ ರಾಜ್ಯ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕನ್ನು ವಂಚಿಸಿರುವ ಆರೋಪದಲ್ಲಿ ರಾಕ್​ಲೈನ್ ವೆಂಕಟೇಶ್ ಮಗನ ವಿಚಾರಣೆ

ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕನ್ನು ವಂಚಿಸಿರುವ ಆರೋಪದಲ್ಲಿ ರಾಕ್​ಲೈನ್ ವೆಂಕಟೇಶ್ ಮಗನ ವಿಚಾರಣೆ

0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರಾಕ್​ಲೈನ್ ವೆಂಕಟೇಶ್ ನಿಸ್ಸಂದೇಹವಾಗಿ ದೊಡ್ಡ ಹೆಸರು. 60-ವರ್ಷ ವಯಸ್ಸಿನ ವೆಂಕಟೇಶ್ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಹಲವಾರು ಚಿತ್ರಗಳನನ್ನು ನಿರ್ಮಿಸಿ ಒಬ್ಬ ಯಶಸ್ವೀ ನಿರ್ಮಾಪಕ ಅನಿಸಿಕೊಂಡಿದ್ದ್ದಾರೆ.

ಹಾಗೆ ನೋಡಿದರೆ, ರಾಕ್ ಲೈನ್ ಬೇಕಾದಷ್ಟು ಸಂಪಾದನೆ ಮಾಡಿದ್ದಾರೆ. ಅವರನ್ನು ಕುಬೇರರ ಪಟ್ಟಿಯಲ್ಲಿ ಸೇರಿಸಲು ಅಡ್ಡಿಯಿಲ್ಲ. ಹತ್ತು ತಲೆಮಾರುಗಳು ಕುಳಿತು ತಿನ್ನುವಷ್ಟು ಸಂಪಾದನೆ ಮಾಡಿದ್ದಾರೆಂದು ಅವರ ಆಪ್ತರು ಹೇಳುತ್ತಾರೆ. ವಿಷಯ ಹೀಗಿರುವಾಗ ಅವರ ಮಗ ವೆಂಕಟೇಶ್ ಅಭಿಲಾಷ್ ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ನಿಂದ ಸಾಲ ಪಡೆಯುವ ಕೇಡು ಯಾಕೆ ಎದುರಾಯಿತೋ ಗೊತ್ತಾಗುತ್ತಿಲ್ಲ.

ವಿಷಯವೇನೆಂದರೆ, ಫೇಕ್ ಕಾಗದ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕೊಂದನ್ನು ವಂಚಿಸಿದ ಆರೋಪದಲ್ಲಿ ನಗರದ ಸಿಸಿಬಿ ಪೊಲೀಸ್ 5-ಜನರ ತಂಡವೊಂದನ್ನು ಬಂಧಿಸಿದ್ದು ಅವರ ಪೈಕಿ ಅಭಿಲಾಷ್ ಒಬ್ಬರೆಂದು ಆರೋಪಿಸಲಾಗಿದೆ. ಪೊಲೀಸರು ಅಭಿಲಾಷ್ ವಿಚಾರಣೆ ನಡೆಸುವಾಗ ಹಣ ವರ್ಗಾವಣೆ ಆಗಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಇದೇ ಹಿನ್ನೆಲೆಯಲ್ಲಿ ಅಭಿಲಾಷ್ ರನ್ನು ಸಿಸಿಬಿ ಅಧಿಕಾರಿಗಳು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

ಹಿಂದಿನ ಲೇಖನಪ್ರವಾಸಿಗರ ತಾಣ ನಂದಿ ಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭ
ಮುಂದಿನ ಲೇಖನಮಕ್ಕಳಿಗೆ ಸಾಂತಾಕ್ಲಾಸ್ ವೇಷಭೂಷಣ ಧರಿಸುವ ಮುನ್ನ ಪೋಷಕರ ಲಿಖಿತ ಅನುಮತಿ ಪಡೆಯಬೇಕು: ಶಿಕ್ಷಣ ಇಲಾಖೆ ಆದೇಶ