ಹೊಸದಿಲ್ಲಿ: ದೇಶದಲ್ಲಿ ನಿರುದ್ಯೋಗಿ ಯುವಜನತೆ, ಗೃಹಿಣಿಯರನ್ನು ಗುರಿಯಾಗಿಸಿ “ಪಿಗ್ ಬುಚ್ಚರಿಂಗ್ ಸ್ಕ್ಯಾಮ್’ ಅಥವಾ “ಹೂಡಿಕೆ ವಂಚನೆ’ ಎನ್ನುವಂಥ ಸೈಬರ್ ವಂಚನೆ ತಲೆ ಎತ್ತಿದೆ. ಇದರಿಂದ ದಿನಂಪ್ರತಿ ಜನರು ಭಾರೀ ಹಣ ಕಳೆದುಕೊಳ್ಳುವಂತಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.
ಈ ಬಗ್ಗೆ ಜಾಗರೂಕ ರಾಗುವಂತೆ ಎಚ್ಚರಿಕೆ ನೀಡಿದೆ. ಸಚಿವಾಲಯದ ಇತ್ತೀಚೆಗಿನ ವಾರ್ಷಿಕ ವರದಿಯಲ್ಲಿ ಪಿಗ್ ಬುಚ್ಚರಿಂಗ್ ಸ್ಕ್ಯಾಮ್ ಬಗ್ಗೆ ಉಲ್ಲೇಖಿಸಲಾಗಿದೆ. ವಂಚಕರು ಗೂಗಲ್ ಸೇವೆ ಬಳಸಿಕೊಂಡು, ಫೇಸ್‌ಬುಕ್, ವಾಟ್ಸ್ ಆ್ಯಪ್, ಟೆಲಿಗ್ರಾಂ ಮೂಲಕವೂ ಜಾಹೀರಾತುಗಳಿಂದ ಜನರನ್ನು ಜಾಲಕ್ಕೆ ಕೆಡವುತ್ತಿದ್ದಾರೆ. 2016ರಲ್ಲಿ ಚೀನದಲ್ಲಿ ಮೊದಲಿಗೆ ಈ ವಂಚನೆ ಶುರುವಾಗಿದ್ದು, ಮೊದಲಿಗೆ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ನಂಬಿಸಿ ವಂಚಿಸುತ್ತಿದ್ದಾರೆ ಎಂದಿದೆ.















