ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಸ್ಕೂಲ್ ಆಫ್ ಇಂಜಿನಿಯರಿoಗ್ ನಲ್ಲಿನ ತಾತ್ಕಾಲಿಕ ಸಹಾಯಕ ಪ್ರಾಧ್ಯಾಕರ ಹುದ್ದೆಯ ನೇಮಕಾತಿ ಮಾಡುವ ಸಂಬoಧ ಅರ್ಹ ಅಭ್ಯರ್ಥಿಗಳನ್ನು ತಮ್ಮ ಅರ್ಜಿಗಳೊಂದಿಗೆ ಡಿಸೆಂಬರ್ 07 ನಡೆಯಲಿರುವ Walk-in-Interview ನಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ www.uni-mysore.ac.in ನಲ್ಲಿ ಪಡೆಯಬಹುದಾಗಿದ್ದು, ನಿಗದಿಪಡಿಸಲಾದ ದಿನಾಂಕದಲ್ಲಿ ವ್ಯತ್ಯಾಸವಾದಲ್ಲಿ ಬದಲಾವಣೆಯ ದಿನಾಂಕದ ಬಗ್ಗೆ ಮಾಹಿತಿಯನ್ನು ವಿಶ್ವವಿದ್ಯಾನಿಲಯ ವೆಬ್‌ಸೈಟ್ www.uni-mysore.ac.in ನಲ್ಲಿ ಹೊರಡಿಸಲಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಹಾಯಕ ಕುಲ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.