ಮನೆ ಸುದ್ದಿ ಜಾಲ ಉಚಿತ ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನ

ಉಚಿತ ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನ

0

ಮಂಡ್ಯ: ಆಶ್ರಯ ಯೋಜನೆಯಡಿ ಶ್ರೀರಂಗಪಟ್ಟಣ ಟೌನ್ ಪುರಸಭಾ ವ್ಯಾಪ್ತಿಯಲ್ಲಿ ವಾಸವಾಗಿರುವ ನಿವೇಶನ ರಹಿತ ಬಡಕುಟುಂಬಗಳಿಗೆ ಉಚಿತ ನಿವೇಶನ ಹಂಚಿಕೆ ಮಾಡುವ ಸಂಬAದ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿ 15 ವರ್ಷದಿಂದ ವಾಸವಾಗಿರುವ ನಿವೇಶನ ರಹಿತ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹ ಫಲಾನುಭವಿಗಳು ಜುಲೈ 15 ರೊಳಗೆ ಪುರಸಭಾ ಕಛೇರಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08236-252229 / 08236-253030 ಅನ್ನು ಸಂಪರ್ಕಿಸಹುದಾಗಿದೆ.

ಅರ್ಜಿಯೊಂದಿಗೆ ಫಲಾನುಭವಿಯ ಭಾವಚಿತ್ರ, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಬಿ.ಪಿ.ಎಲ್ ರೇಷನ್ ಕಾರ್ಡ್ ನಕಲು ಪ್ರತಿ, ಪಾನ್ ಕಾರ್ಡ್ ನಕಲು ಪ್ರತಿ. ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನಕಲು ಪ್ರತಿ, ಕುಟುಂಬ ಸದಸ್ಯರ ಹೆಸರಿನಲ್ಲಿ ಯಾವುದೇ ಭಾಗದಲ್ಲಿ ನಿವೇಶನ/ವಸತಿ ಇಲ್ಲದಿರುವ ಬಗ್ಗೆ ರೂ.100/-ಗಳ ಛಾಪಾ ಕಾಗದಲ್ಲಿ ದೃಢೀಕರಿಸಿರುವ ನೋಟರಿ ಪ್ರಮಾಣ ಪತ್ರ, ವಾಸ ಸ್ಥಳ ದೃಢೀಕರಣ ಪತ್ರ (ತಾಲ್ಲೂಕು ಕಛೇರಿಯಿಂದ) ಹಾಗೂ ಅಂಗವಿಕಲರು ಕಡ್ಡಾಯವಾಗಿ ಅಂಗವಿಕಲತೆಯ ಬಗ್ಗೆ ಪಡೆದಿರುವ ಗುರುತಿನ ಚೀಟಿಯನ್ನು ಲಗತ್ತಿಸಿ ಸಲ್ಲಿಸಲು ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.