ಮನೆ ಉದ್ಯೋಗ ಅರ್ಜಿ ಆಹ್ವಾನ

ಅರ್ಜಿ ಆಹ್ವಾನ

0

ಮಂಡ್ಯ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ( KaBHI) ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ನ್ಯೂರಾಲಜಿಸ್ಟ್/ಫಿಜಿಷಿಯನ್,/ ವೈದ್ಯಕೀಯ ಅಧಿಕಾರಿ-01, ಶುಶ್ರೂಷಕರು-01, ಫಿಜಿಯೋಥೆರಪಿಸ್ಟ್-01, ಸ್ವಿಚ್ ಥೆರಪಿಸ್ಟ್ -01, ಕ್ಲಿನಿಕಲ್ ಸೈಕಾಲಜಿಸ್ಟ್-01, ಜಿಲ್ಲಾ ಸಂಯೋಜಕರು- 01 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿ ಅಭ್ಯರ್ಥಿಗಳು ಜೂನ್ 27 ರಂದು ಬೆಳಿಗ್ಗೆ 10:30 ಗಂಟೆಗೆ ಜಿಲ್ಲಾ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಛೇರಿ, ಮಿಮ್ಸ್ ಮುಂಭಾಗ, ಮೈಸೂರು ಬೆಂಗಳೂರು ಮುಖ್ಯ ರಸ್ತೆ, ಮಂಡ್ಯ ಇಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿಗಳು ಕಚೇರಿ, ಮಾನಸಿಕ ಆರೋಗ್ಯ ವಿಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ ಮಂಡ್ಯ ಇಲ್ಲಿಗೆ ಸಂಪರ್ಕಿಸಬಹುದು ಹಾಗೂ ದೂ.ಸಂ. 8277895725 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.