ಮನೆ ಸುದ್ದಿ ಜಾಲ ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ವಿವಿಧ ತರಬೇತಿಗೆ ಅರ್ಜಿ ಆಹ್ವಾನ

0

ಕೊಪ್ಪಳ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಲಯದಡಿ ಕೆನರಾ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಅರ್ಹ ಬಿಪಿಎಲ್ ಕುಟುಂಬದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಿಪಿಎಲ್ ಕುಟುಂಬದ 18 ರಿಂದ 45 ವರ್ಷದೊಳಗಿನ ವಾಣಿಜ್ಯ ವಿಷಯವನ್ನು ಓದಿದ ನಿರುದ್ಯೋಗಿ ಯುವಕ/ ಯುವತಿಯರಿಗೆ 10 ದಿನಗಳ ಪೇಪರ್ ಕವರ್, ಬ್ಯಾಗ್ ಮತ್ತು ಪೇಪರ್ ಲಕೋಟೆಗಳ ತಯಾರಿಕಾ ತರಬೇತಿ ನೀಡಲಾಗುತ್ತದೆ. 10 ದಿನಗಳ ಫಾಸ್ಟ್ ಫುಡ್ ತರಬೇತಿ ಹಾಗೂ ನಿರುದ್ಯೋಗಿ ಯುವಕರಿಗಾಗಿ 13 ದಿನಗಳ ಸಿಸಿ ಕ್ಯಾಮೆರಾ ದುರಸ್ತಿ ಮತ್ತು ಅಳವಡಿಕೆಯ ತರಬೇತಿ, 30 ದಿನಗಳ ಎಲೆಕ್ಟ್ರಿಕ್ ಮೋಟರ್ ರಿವೈಂಡಿಂಗ್ ತರಬೇತಿಯನ್ನು ಊಟ ಹಾಗೂ ವಸತಿಯೊಂದಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಮೇ 31 ರೊಳಗಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08284-295307. ಮೊಬೈಲ್ ಸಂಖ್ಯೆ 9483485489, 9482188780, 9844796998, 8197022501 ಗೆ ಸಂಪರ್ಕಿಸಬಹುದು.

ಹಿಂದಿನ ಲೇಖನಕಾಶ್ಮೀರ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್ ದೋಷಿ: ಮೇ 25ಕ್ಕೆ ಶಿಕ್ಷೆ ಪ್ರಕಟ
ಮುಂದಿನ ಲೇಖನಎಸ್ ಬಿಐ ಬ್ಯಾಂಕ್ ನೇಮಕಾತಿ; 641 ಹುದ್ದೆಗಳಿಗೆ ಅರ್ಜಿ ಹಾಕಿ