ಮನೆ ಕ್ರೀಡೆ IPL 2023: ಗೋಲ್ಡನ್ ಡಕ್ ಔಟ್ ಆಗಿ ಧವನ್ ರ ಅನಗತ್ಯ ದಾಖಲೆ ಮುರಿದ ಬಟ್ಲರ್!

IPL 2023: ಗೋಲ್ಡನ್ ಡಕ್ ಔಟ್ ಆಗಿ ಧವನ್ ರ ಅನಗತ್ಯ ದಾಖಲೆ ಮುರಿದ ಬಟ್ಲರ್!

0

ಧರ್ಮಶಾಲಾ: ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದ ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಜೋಸ್ ಬಟ್ಲರ್, ಪ್ರಸಕ್ತ ಆವೃತ್ತಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 5 ಬಾರಿ ಡಕ್ ಔಟ್ ಆಗಿ ಅನಗತ್ಯ ದಾಖಲೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Join Our Whatsapp Group

ಜೋಸ್ ಬಟ್ಲರ್, ಪ್ರಸಕ್ತ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು. ಆದರೆ, ಹ್ಯಾಟ್ರಿಕ್ ಗೋಲ್ಡನ್ ಡಕ್ ಔಟ್ ಆಗಿದ್ದಲ್ಲದೆ ಟೂರ್ನಿಯಲ್ಲಿ 5 ಬಾರಿ ಸೊನ್ನೆ ಸುತ್ತಿ ಅನಗತ್ಯ ದಾಖಲೆಯನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ.

ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ 188 ರನ್ ಗುರಿ ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಬ್ಯಾಟರ್ ಆಗಿ ಮೈದಾನಕ್ಕಿಳಿದ ಜೋಸ್ ಬಟ್ಲರ್, ಎರಡನೇ ಓವರ್ನಲ್ಲಿ ಕಗಿಸೊ ರಬಾಡ ಎಸೆತದಲ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿ ಅನಗತ್ಯ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಬಟ್ಲರ್, ಆರ್ ಸಿಬಿ ಹಾಗೂ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಸೊನ್ನೆ ಸುತ್ತಿದ್ದು, ಹ್ಯಾಟ್ರಿಕ್ ಗೋಲ್ಡನ್ ಡಕ್ ಔಟ್ ಆಗಿ ಅನಗತ್ಯ ದಾಖಲೆ ಬರೆದಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ಜೋಸ್ ಬಟ್ಲರ್ 13 ಪಂದ್ಯಗಳಿಂದ 392 ರನ್ ಗಳಿಸಿದ್ದಾರೆ. ತಮ್ಮ 96 ಐಪಿಎಲ್ ಪಂದ್ಯಗಳಲ್ಲಿ ಒಂದು ಬಾರಿ ಸೊನ್ನೆ ಸುತ್ತಿದ್ದ ಬಟ್ಲರ್, ಪ್ರಸಕ್ತ ಸಾಲಿನಲ್ಲಿ 5 ಬಾರಿ ರನ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ.

ಅತಿ ಹೆಚ್ಚು ಬಾರಿ ಗೋಲ್ಡನ್ ಡಕ್ ಔಟ್ ಆದ ಬ್ಯಾಟ್ಸ್ ಮನ್ ಗಳು

ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್) – 2023 – 5 ಬಾರಿ

ಹರ್ಷಲ್ ಗಿಬ್ಸ್ (ಡೆಕ್ಕನ್ ಚಾರ್ಜರ್ಸ್) – 2009 – 4 ಬಾರಿ

ಮಿಥುನ್ ಮನ್ಹಾಸ್ (ಪುಣೆ ವಾರಿಯರ್ಸ್ ಇಂಡಿಯಾ) – 2011 – 4 ಬಾರಿ

ಮನೀಶ್ ಪಾಂಡೆ (ಪುಣೆ ವಾರಿಯರ್ಸ್ ಇಂಡಿಯಾ) – 2012 – 4 ಬಾರಿ

ಶಿಖರ್ ಧವನ್ (ದೆಹಲಿ ಕ್ಯಾಪಿಟಲ್ಸ್) – 2020 – 4 ಬಾರಿ

ಐಯಾನ್ ಮಾರ್ಗನ್ (ಕೋಲ್ಕತ್ತಾ ನೈಟ್ ರೈಡರ್ಸ್) – 2021 – 4 ಬಾರಿ

ನಿಕೋಲಸ್ ಪೂರನ್ (ಪಂಜಾಬ್ ಕಿಂಗ್ಸ್) – 2021 – 4 ಬಾರಿ

ಜೋಸ್ ಬಟ್ಲರ್ 96 ಐಪಿಎಲ್ ಪಂದ್ಯಗಳಿಂದ 148.32 ಸ್ಟ್ರೆಕ್ ರೇಟ್ ನಲ್ಲಿ 3223 ರನ್ ಬಾರಿಸಿದ್ದು, 19 ಅರ್ಧಶತಕಗಳು ಹಾಗೂ 5 ಶತಕ ಸಿಡಿಸಿದ್ದಾರೆ. 124* ರನ್ ಇವರ ಗರಿಷ್ಠ ಮೊತ್ತವಾಗಿದೆ.