ಧರ್ಮಶಾಲಾ: ಐಪಿಎಲ್ ನಿಂದ ಹೊರಬಿದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಬುಧವಾರದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 2 ವಿಕೆಟಿಗೆ 213 ರನ್ ಕಲೆ ಹಾಕಿದೆ.
ಪಂಜಾಬ್ ಪಾಲಿಗೆ ಇದು “ಮಸ್ಟ್ ವಿನ್ ಗೇಮ್” ಆಗಿದೆ. ಇದು 10 ವರ್ಷಗಳ ಬಳಿಕ ಧರ್ಮಶಾಲಾದಲ್ಲಿ ನಡೆದ ಐಪಿಎಲ್ ಪಂದ್ಯ ವಾಗಿದೆ.
ಪೃಥ್ವಿ ಶಾ, ನಾಯಕ ಡೇವಿಡ್ ವಾರ್ನರ್, ಉತ್ತಮ ಓಪಂಗ್ ಪಡೆದುಕೊಂಡರು, 10.2 ಓವರ್ಗಳ ಜೊತೆ ಆಟ ಆಡಿದ ಇವರು ತನಕ ಕ್ರೀಸ್ ಆಕ್ರಮಿಸಿಕೊಂಡರು, ವಾರ್ನರ್ 46 ರನ್ ಹೊಡೆದರೆ, ಶಾ 54 ರನ್ ಬಾರಿಸಿದರು.
2023ಐಪಿಎಲ್ ನಲ್ಲಿ ಪೃಥ್ವಿ ಶಾ, ಮೊದಲನೆ ಅರ್ಧ ಶತಕ ಬಾರಿಸಿದರು. ಮೊದಲ 6 ಇನ್ನಿಂಗ್ಸ್ಗಳಲ್ಲಿ ಕೇವಲ 47 ರನ್ ಮಾಡಿದ ಶಾ ಅವರನ್ನು ಅನಂತರ ಕೈಬಿಡಲಾಗಿತ್ತು. ಅವರ 54 ರನ್ 38 ಎಸೆತಗಳಿಂದ ಬಂತು. ಸಿಡಿಸಿದ್ದು 7 ಬೌಂಡರಿ ಹಾಗೂ ಒಂದು ಸಿಕ್ಸರ್.ಸಿಡಿಸಿದ್ದರು, ವಾರ್ನರ್ 5 ಬೌಂಡರಿ ಹಾಗೂ 2 ಸಿಕ್ಸರ್ 31 ಎಸೆತದಲ್ಲಿ 46 ರನ್ ಬಾರಿಸಿದರು.
ಪೃಥ್ವಿ ಶಾ, ಸ್ಯಾಮ್ ಕರನ್ ಗೆ ವಿಕೆಟ್ ಓಪ್ಪಿಸಿದರು, ಶಾ-ರೋಸ್ಯೂ ಜೋಡಿ ಕೂಡ ಉಪಯುಕ್ತ ಜತೆಯಾಟ ಆರಂಭಿಸಿದರು. ದ್ವಿತೀಯ ವಿಕೆಟಿಗೆ 54 ರನ್ ಜೊತೆಆಟ ವಾಡಿದರು. ರೋಸ್ಯೂ ಸಿಡಿಲಬ್ಬರದ ಆಟವಾಡಿ ಪಂಜಾಬ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಅವರದು ಅಜೇಯ 82 ರನ್ ಕೊಡುಗೆ. ಇದಕ್ಕೆ ಎದುರಿಸಿದ್ದು 37 ಎಸೆತ ಮಾತ್ರ. ಸಿಡಿಸಿದ್ದು 6 ಬೌಂಡರಿ ಹಾಗೂ 6 ಸಿಕ್ಸರ್. ಫಿಲಿಪ್ ಸಾಲ್ಟ್ 14 ಎಸೆತಗಳಿಂದ 26 ರನ್ ಮಾಡಿ ಅಜೇಯರಾಗಿ ಉಳಿದರು (2 ಬೌಂಡರಿ, 2 ಸಿಕ್ಸರ್), ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 213/2 ರನ್ಗಳ ದೊಡ್ಡ ಮೊತ್ತ ಕಲೆಹಕಿತ್ತು.
ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಓಪನರ್ ಹಾಗೂ ಕ್ಯಾಪ್ಟನ್ ಶಿಖರ್ ಧವನ್ (0) ಗೋಲ್ಡನ್ ಡಕ್ ವಿಕೆಟ್ ಓಪ್ಪಿಸಿದರು. ಕಳೆದ ಪಂದ್ಯದ ಶತಕ ವೀರ ಪ್ರಭಸಿಮ್ರನ್ ಸಿಂಗ್ ಕೇವಲ 22 ರನ್ ಕಲೆಹಾಕಲಷ್ಟೇ. ಸೀಮಿತರಾದರು. ಆದರೆ, ಇನಿಂಗ್ಸ್ ಮಧ್ಯದಲ್ಲಿ ಜೊತೆಯಾದ ಯುವ ಬ್ಯಾಟರ್ ಅಥರ್ವ ತಾಯ್ದೆ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಜೊತೆಯಾಟ ತಡಕ್ಕೆ ಆಸರೆ ಆಗಿತ್ತು.
ಅಥರ್ವ ತಾಯ್ದೆ{55}ರನ್ ಹಾಗೂ ಇಂಗ್ಲೆಂಡ್ ನ ದೈತ್ಯ ಬ್ಯಾಟರ್ ಲಿವಿಂಗ್ ಸ್ಟೋನ್, ಎದುರಿಸಿದ 48 ಎಸೆತಗಳಲ್ಲಿ 6 ಫೋರ್ ಮತ್ತು 9 ಸಿಕ್ಸರ್ ಗಳೊಂದಿಗೆ 94 ರನ್ ಸಿಡಿಸಿದರು. ಆದರೂ ಪಂಜಾಬ್ 20 ಓವರ್ಗಳಲ್ಲಿ 198/8 ರನ್ ಗಳಿಸಿ ಸೋಲಿಗೆ ಶರಣಾಯಿತು. ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯ ಪಾತಾಳದಿಂದ ಮೇಲೆದ್ದು 9ನೇ ಸ್ಥಾನ ಪಡೆದುಕೊಂಡಿತು. ಇದು ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಬಳಗಕ್ಕೆ ಸಿಕ್ಕ 5ನೇ ಗೆಲುವಾಗಿದೆ.














