ದುಬೈ: 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಹೀರೊಗಳಾದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಟ್ರಾವಿಸ್ ಹೆಡ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ಖರೀದಿಸಿದೆ.
ಇದೇ ಮೊದಲ ಬಾರಿಗೆ ಭಾರತದಿಂದ ಹೊರಗೆ (ದುಬೈನಲ್ಲಿ) ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ, ಕಮಿನ್ಸ್ ಗೆ ಬರೋಬ್ಬರಿ ₹ 20.5 ಕೋಟಿ ನೀಡಿರುವ ಸನ್ ರೈಸರ್ಸ್ ತಂಡ, ಹೆಡ್ ಗೆ ₹ 6.80 ಕೋಟಿ ಕೊಟ್ಟಿದೆ.
ಐಪಿಎಲ್ ಆಡಳಿತ ಸಮಿತಿಯು 1166 ನೋಂದಾಯಿತ ಆಟಗಾರರ ಪಟ್ಟಿಯನ್ನು ಫ್ರ್ಯಾಂಚೈಸಿಗಳಿಗೆ ನೀಡಿತ್ತು. ಅದನ್ನು ಪರಿಷ್ಕರಿಸಿ 333 ಆಟಗಾರರನ್ನು ಅಂತಿಮಗೊಳಿಸಲಾಗಿದೆ. ಅದರಲ್ಲಿ ಭಾರತದ 214 ಮತ್ತು ವಿದೇಶದ 119 ಆಟಗಾರರಿದ್ದಾರೆ.
ಹತ್ತು ಫ್ರ್ಯಾಂಚೈಸಿಗಳು 30 ವಿದೇಶಿ ಆಟಗಾರರೂ ಸೇರಿದಂತೆ ಒಟ್ಟು 77 ಆಟಗಾರರನ್ನು ಖರೀದಿಸಲು ಮಾತ್ರ ಅವಕಾಶವಿದೆ.
ಕೊಕ ಕೋಲಾ ಅರೆನಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಯಾವ ಆಟಗಾರ ಯಾವ ತಂಡದ ಪಾಲಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಯಾವ ತಂಡಕ್ಕೆ ಯಾರ್ಯಾರು ?
ವೆಸ್ಟ್ ಇಂಡೀಸ್ ನ ರಾಮನ್ ಪೊವೆಲ್: ರಾಜಸ್ಥಾನ ರಾಯಲ್ಸ್ – ₹ 7.4 ಕೋಟಿ
ಇಂಗ್ಲೆಂಡ್ ನ ಹ್ಯಾರಿ ಬ್ರೂಕ್: ಡೆಲ್ಲಿ ಕ್ಯಾಪಿಟಲ್ಸ್ –₹ 4 ಕೋಟಿ
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್: ಸನ್ ರೈಸರ್ಸ್ ಹೈದರಾಬಾದ್ – ₹ 6.80 ಕೋಟಿ
ಶ್ರೀಲಂಕಾದ ವನಿಂದು ಹಸರಂಗ: ಸನ್ ರೈಸರ್ಸ್ ಹೈದರಾಬಾದ್ – ₹ 1.5 ಕೋಟಿ
ನ್ಯೂಜಿಲೆಂಡ್ ನ ರಚಿನ್ ರವೀಂದ್ರ: ಚೆನ್ನೈ ಸೂಪರ್ ಕಿಂಗ್ಸ್ – ₹ 1.8 ಕೋಟಿ
ಭಾರತದ ಶಾರ್ದೂಲ್ ಠಾಕೂರ್: ಚೆನ್ನೈ ಸೂಪರ್ ಕಿಂಗ್ಸ್ – ₹ 4 ಕೋಟಿ
ಅಫ್ಗಾನಿಸ್ತಾನದ ಅಝ್ಮತ್‌ವುಲ್ಲ ಒಮರ್ಜೈ: ಗುಜರಾತ್ ಟೈಟನ್ಸ್ – ₹ 50 ಲಕ್ಷ
ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್: ಸನ್‌ರೈಸರ್ಸ್ ಹೈದರಾಬಾದ್ – ₹ 20.5 ಕೋಟಿ