ಮನೆ ಸುದ್ದಿ ಜಾಲ ಬೆಂಗಳೂರು, ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ – ಎಲ್ಲಿ, ಯಾವಾಗ..?

ಬೆಂಗಳೂರು, ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ – ಎಲ್ಲಿ, ಯಾವಾಗ..?

0

ನವದೆಹಲಿ : ಐಪಿಎಲ್ 2026ರ ಆವೃತ್ತಿ ಆರಂಭದಿಂದ ಮೊದಲ ಮೂರು ವಾರಾಂತ್ಯಗಳಲ್ಲಿ ನಡೆಯುವ ಫ್ಯಾನ್ ಪಾರ್ಕ್ ಈವೆಂಟ್‌ನ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ತುಮಕೂರು, ಮೈಸೂರು ಸೇರಿ ದೇಶದ 15 ನಗರಗಳಲ್ಲಿ ಫ್ಯಾನ್ ಪಾರ್ಕ್ ನಡೆಯಲಿದೆ.

ಕ್ರೀಡಾಂಗಣದ ಹೊರತಾಗಿ ಐಪಿಎಲ್ ಅನುಭವ ನೀಡುವ ಉದ್ದೇಶದೊಂದಿಗೆ ಈ ಫ್ಯಾನ್ ಪಾರ್ಕ್ ನಡೆಯಲಿದ್ದು, ಲೈವ್ ಗೇಮಿಂಗ್, ಆಹಾರ ಮಳಿಗೆ, ಮಕ್ಕಳ ಆಟೋಟದ ಕೇಂದ್ರಗಳು ಇರಲಿದೆ. ಮಾ.28ರಿಂದ ಮೂರು ವಾರಾಂತ್ಯಗಳಲ್ಲಿ 11 ರಾಜ್ಯಗಳ 15 ನಗರಗಳಲ್ಲಿ ಈ ಫ್ಯಾನ್ ಪಾರ್ಕ್ ಈವೆಂಟ್ ನಡೆಯಲಿದ್ದು, ಬಿಸಿಸಿಐ ಆಯೋಜಿಸುತ್ತಿದೆ.

ಫ್ಯಾನ್ ಪಾರ್ಕ್‌ನಲ್ಲಿ ವರ್ಚುವಲ್ ಕ್ರಿಕೆಟ್ ಪಂದ್ಯಗಳು, ಬೌಲಿಂಗ್ ನೆಟ್, ಸಂಗೀತ, ಮನರಂಜನೆ, ಆಹಾರ ಮಳಿಗೆ, ಮಕ್ಕಳಿಗೆ ಆಟೋಟದ ಕೇಂದ್ರಗಳು, ಫೇಸ್ ಪೇಂಟಿಂಗ್, 360-ಡಿಗ್ರಿ ಫೋಟೋ ಬೂತ್ ಸೇರಿದಂತೆ ವಿವಿಧ ಚಟುವಟಿಕೆಗಳು ಇರಲಿವೆ. 2015ರಿಂದ ಫ್ಯಾನ್ ಪಾರ್ಕ್ ನಡೆಯುತ್ತಿದ್ದು, ವಿವಿಧ ನಗರಗಳಲ್ಲಿನ ಅಭಿಮಾನಿಗಳು ಒಟ್ಟಿಗೆ ಸೇರಲು ಅನುವು ಮಾಡಿಕೊಡುತ್ತದೆ.

ಮೊದಲ ಮೂರು ವಾರಾಂತ್ಯಗಳೆಂದರೆ ಇದೇ ಮಾರ್ಚ್ 28 ಮತ್ತು 29, ಏಪ್ರಿಲ್ 4 ಮತ್ತು 5, ಏಪ್ರಿಲ್ 11 ಮತ್ತು 12 ರಂದು ಫ್ಯಾನ್ ಪಾರ್ಕ್ ನಡೆಯಲಿದೆ. ಮೂರು ವಾರಾಂತ್ಯಗಳಲ್ಲಿ ಐಪಿಎಲ್‌ ಪಂದ್ಯ ನಡೆಯಲಿದ್ದು, ಮಾ.28ರಂದು RCB ಹಾಗೂ SRH ಮುಖಾಮುಖಿಯಾಗಲಿವೆ. ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಮಾರ್ಚ್ 28 & 29ರಂದು :-
ಹರಿಯಾಣ – ರೋಹ್ಟಕ್‌ನಲ್ಲಿರುವ ಛೋಟು ರಾಮ್ ಪಾಲಿಟೆಕ್ನಿಕ್ ಮೈದಾನ
ಮಧ್ಯಪ್ರದೇಶ – ಭೋಪಾಲ್‌ನಲ್ಲಿರುವ ಸರ್ಕಾರಿ ಎಂವಿಎಂ ಕಾಲೇಜು ಮೈದಾನ
ಮಹಾರಾಷ್ಟ್ರ – ನಾಗ್ಪುರದಲ್ಲಿರುವ ಮೆಕೋಸಾಬಾಗ್ ಮೆಥೋಡಿಸ್ಟ್ ಹೈಸ್ಕೂಲ್ ಮೈದಾನ
ಕರ್ನಾಟಕ – ತುಮಕೂರಿನಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ
ಪಶ್ಚಿಮ ಬಂಗಾಳ – ಕೃಷ್ಣನಗರದಲ್ಲಿರುವ ಡಿಎಲ್ ರಾಯ್ ಕ್ರೀಡಾಂಗಣ

ಏಪ್ರಿಲ್ 4 & 5ರಂದು :-
ಉತ್ತರ ಪ್ರದೇಶ – ಮಥುರಾದಲ್ಲಿರುವ ಅಮರನಾಥ ವಿದ್ಯಾ ಆಶ್ರಮ
ರಾಜಸ್ಥಾನ – ಜೋಧಪುರದಲ್ಲಿರುವ ಬರ್ಕತುಲ್ಲಾ ಖಾನ್ ಕ್ರೀಡಾಂಗಣ
ತೆಲಂಗಾಣ – ನಿಜಾಮಾಬಾದ್‌ನಲ್ಲಿರುವ ಮಹಿಳಾ ಶೈಕ್ಷಣಿಕ ಸೊಸೈಟಿ ಮೈದಾನ
ಕರ್ನಾಟಕ – ಮೈಸೂರಿನಲ್ಲಿರುವ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು
ಒಡಿಶಾ – ಭುವನೇಶ್ವರ್‌ದಲ್ಲಿರುವ ಕೆಐಟಿಎಸ್ ವಿಶ್ವವಿದ್ಯಾಲಯ ಕ್ರೀಡಾಂಗಣ

ಏಪ್ರಿಲ್ 11 ಮತ್ತು 12ರಂದು :-
ಉತ್ತರ ಪ್ರದೇಶ – ಮೀರತ್‌ನಲ್ಲಿರುವ ಭೈನಸಾಲಿ ಮೈದಾನ
ಗುಜರಾತ್‌ – ನಾಡಿಯಾಡ್‌ನಲ್ಲಿರುವ ರಾಧೆ ಫಾರ್ಮ್
ಮಹಾರಾಷ್ಟ್ರ – ರತ್ನಗಿರಿಯಲ್ಲಿರುವ ಸ್ವರ್ಗೀಯ ಪ್ರಮೋದ್ ಮಹಾಜನ್ ಕ್ರೀಡಾ ಸಂಕುಲ
ತಮಿಳುನಾಡು – ಕೊಯಮತ್ತೂರಿನಲ್ಲಿರುನ ಹಿಂದೂಸ್ತಾನ್ ಕಾಲೇಜ್ ಆಫ್ ಆರ್ಟ್ಸ್ & ಸೈನ್ಸ್
ಒಡಿಶಾ – ರೂರ್ಕೆಲಾನಲ್ಲಿರುವ ಸೆಕ್ಟರ್ 17 ಗ್ರೌಂಡ್