ಮನೆ ಕ್ರೀಡೆ ಐಪಿಎಲ್: ಆಟಗಾರರ ಮಿನಿ ಹರಾಜು ಪ್ರಕ್ರಿಯೆ

ಐಪಿಎಲ್: ಆಟಗಾರರ ಮಿನಿ ಹರಾಜು ಪ್ರಕ್ರಿಯೆ

0

ಕೊಚ್ಚಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಿದೆ.

ಕಣದಲ್ಲಿರುವ 87 ಆಟಗಾರರ ಖರೀದಿಗಾಗಿ 10 ಫ್ರಾಂಚೈಸ್‌’ಗಳು ಪೈಪೋಟಿ ನಡೆಸುತ್ತಿವೆ.

ಕೊಚ್ಚಿಯಲ್ಲಿ ನಡೆಯುತ್ತಿರುವ ಹರಾಜಿಗೆ ಒಟ್ಟು 405 ಆಟಗಾರರು ಲಭ್ಯರಿದ್ದಾರೆ. ಈ ಪೈಕಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು.

ಹರಾಜಿಗೆ ಲಭ್ಯರಿರುವ ಆಟಗಾರರಲ್ಲಿ ಅಫ್ಗಾನಿಸ್ತಾನದ ಸ್ಪಿನ್ನರ್‌, 15 ವರ್ಷದ ಅಲ್ಹಾ ಮೊಹಮ್ಮದ್‌ ಘಝನ್ಫರ್‌ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾರೆ. 2007ರ ಜುಲೈ 15ರಂದು ಜನಿಸಿರುವ ಘಝನ್ಫರ್‌ ಈ ವರೆಗೆ ಮೂರು ಟಿ20 ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ.

ಭಾರತದ, 40 ವರ್ಷದ ಅಮಿತ್‌ ಮಿಶ್ರಾ ಹರಾಜಿನಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್‌ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಪಡೆದ ದಾಖಲೆ ದಕ್ಷಿಣ ಆಫ್ರಿಕಾದ ಆಲ್‌’ರೌಂಡರ್‌ ಕ್ರಿಸ್‌ ಮಾರಿಸ್‌ ಹೆಸರಿನಲ್ಲಿದೆ. 2021ರಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ರಾಜಸ್ತಾನ ರಾಯಲ್ಸ್‌ ತಂಡ ಅವರನ್ನು ₹ 16.25 ಕೋಟಿ ನೀಡಿ ಖರೀದಿಸಿತ್ತು.

ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಮೊದಲ ಆಟಗಾರನಾಗಿ ಬಿಕರಿಯಾಗಿದ್ದಾರೆ. ಅವರಿಗೆ ನಿಗದಿಯಾಗಿದ್ದ ಮೂಲ ಬೆಲೆ ₹ 2 ಕೋಟಿ ನೀಡಿ ಗುಜರಾತ್‌ ಟೈಟನ್ಸ್‌ ಖರೀದಿಸಿದೆ.

ಮಾರಾಟವಾದ ಆಟಗಾರರು

1. ಕೇನ್‌ ವಿಲಿಯಮ್ಸನ್‌ (ನ್ಯೂಜಿಲೆಂಡ್): ₹ 2 ಕೋಟಿ – ಗುಜರಾತ್‌ ಟೈಟನ್ಸ್‌

2. ಹ್ಯಾರಿ ಬ್ರೂಕ್‌ (ಇಂಗ್ಲೆಂಡ್): ₹ 13.5 ಕೋಟಿ – ಸನ್‌ರೈಸರ್ಸ್‌ ಹೈದರಾಬಾದ್

3. ಮಯಂಕ್‌ ಅಗರವಾಲ್ (ಭಾರತ): ₹ 8.25 ಕೋಟಿ – ಸನ್‌ರೈಸರ್ಸ್‌ ಹೈದರಾಬಾದ್

4. ಅಜಿಂಕ್ಯ ರಹಾನೆ (ಭಾರತ): ₹ 50 ಲಕ್ಷ – ಚೆನ್ನೈ ಸೂಪರ್‌ ಕಿಂಗ್ಸ್‌

5. ಸ್ಯಾಮ್‌ ಕರನ್‌ (ಇಂಗ್ಲೆಂಡ್‌): ₹ 18.50 ಕೋಟಿ – ಪಂಜಾಬ್‌ ಕಿಂಗ್ಸ್‌

6. ಒಡಿಯಾನ್‌ ಸ್ಮಿತ್‌ (ವೆಸ್ಟ್‌ ಇಂಡೀಸ್‌): ₹ 50 ಲಕ್ಷ – ಗುಜರಾತ್‌ ಟೈಟನ್ಸ್‌

7. ಸಿಕಂದರ್‌ ರಾಜಾ (ಜಿಂಬಾಬ್ವೆ): ₹ 50 ಲಕ್ಷ – ಪಂಜಾಬ್‌ ಕಿಂಗ್ಸ್‌

8. ಜೇಸನ್‌ ಹೋಲ್ಡರ್‌ (ವೆಸ್ಟ್‌ ಇಂಡೀಸ್‌): ₹ 5.75 ಕೋಟಿ – ರಾಜಸ್ಥಾನ ರಾಯಲ್ಸ್‌

9. ಕೆಮರೂನ್‌ ಗ್ರೀನ್‌ (ಆಸ್ಟ್ರೇಲಿಯಾ): ₹ 17.50 ಕೋಟಿ – ಮುಂಬೈ ಇಂಡಿಯನ್ಸ್‌

10. ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌): ₹ 16.25 ಕೋಟಿ – ಚೆನ್ನೈ ಸೂಪರ್‌ ಕಿಂಗ್ಸ್‌

11. ರೀಸ್‌ ಟಾಪ್ಲೇ (ಇಂಗ್ಲೆಂಡ್‌): ₹ 1.9 ಕೋಟಿ – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

12. ಜಯದೇವ್‌ ಉನದ್ಕತ್ (ಭಾರತ): ₹ 50 ಲಕ್ಷ – ಲಖನೌ ಸೂಪರ್‌ ಜೈಂಟ್ಸ್‌

13. ಜೇ ರಿಚರ್ಡ್‌ಸನ್‌ (ಆಸ್ಟ್ರೇಲಿಯಾ): ₹ 1.5 ಕೋಟಿ – ಮುಂಬೈ ಇಂಡಿಯನ್ಸ್‌

14. ಇಶಾಂತ್‌ ಶರ್ಮಾ (ಭಾರತ): ₹ 50 ಲಕ್ಷ – ಡೆಲ್ಲಿ ಕ್ಯಾಪಿಟಲ್ಸ್‌

15. ಆದಿಲ್‌ ರಶೀದ್ (ಇಂಗ್ಲೆಂಡ್‌): ₹ 2 ಕೋಟಿ – ಸನ್‌ರೈಸರ್ಸ್‌ ಹೈದರಾಬಾದ್

16. ಮಯಾಂಕ್‌ ಮಾರ್ಕಂಡೆ (ಭಾರತ): ₹ 50 ಲಕ್ಷ – ಸನ್‌ರೈಸರ್ಸ್‌ ಹೈದರಾಬಾದ್

17. ನಿಕೋಲಸ್‌ ಪೂರನ್‌ (ವೆಸ್ಟ್‌ ಇಂಡೀಸ್‌): ₹ 16 ಕೋಟಿ – ಲಖನೌ ಸೂಪರ್‌ ಜೈಂಟ್ಸ್‌

18. ಹೆನ್ರಿಚ್‌ ಕ್ಲಾಸೆನ್‌ (ದಕ್ಷಿಣ ಆಫ್ರಿಕಾ): ₹ 5.25 ಕೋಟಿ – ಸನ್‌ರೈಸರ್ಸ್‌ ಹೈದರಾಬಾದ್

19. ಫಿಲ್‌ ಸಾಲ್ಟ್‌ (ಇಂಗ್ಲೆಂಡ್‌): ₹ 2 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್‌

ಮಾರಾಟವಾಗದ ಆಟಗಾರರು

1. ಜೋ ರೂಟ್‌ (ಇಂಗ್ಲೆಂಡ್): ಮೂಲ ಬೆಲೆ ₹ 1 ಕೋಟಿ

2. ರೈಲೀ ರುಸ್ಸೋ (ದಕ್ಷಿಣ ಆಫ್ರಿಕಾ): ಮೂಲ ಬೆಲೆ ₹ 2 ಕೋಟಿ

3. ಶಕೀಬ್‌ ಅಲ್‌ ಹಸನ್‌ (ಬಾಂಗ್ಲಾದೇಶ): ಮೂಲ ಬೆಲೆ ₹ 1.5 ಕೋಟಿ

ಹಿಂದಿನ ಲೇಖನಭಾರತೀಯ ಸೇನಾ ವಾಹನ ಅವಘಡ: 16 ಮಂದಿ ಯೋಧರು ಹುತಾತ್ಮ
ಮುಂದಿನ ಲೇಖನರಾಜ್ಯದಲ್ಲಿ ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರದಿಂದ ಮಾರ್ಗಸೂಚಿಗಳ ಜಾರಿ: ಡಾ.ಕೆ.ವಿ.ರಾಜೇಂದ್ರ