ಮನುಷ್ಯ ಹಣ ಮತ್ತು ಅಧಿಕಾರದ ದಾಹದಿಂದ ಎಂಥ ಹೀನ ಕೃತ್ಯವನ್ನಾದರೂ ಮಾಡುತ್ತಾನೆ ಎಂಬುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ವಿಷಯವನ್ನು ಇಟ್ಟುಕೊಂಡು ಹೊಸ ರೀತಿಯಲ್ಲಿ ತೆರೆಮೇಲೆ ಹೇಳಿರುವ ಸಿನಿಮಾ “ಐರಾವನ್’ ರಾಜಕಾರಣ, ಮೆಡಿಕಲ್ ಮಾಫಿಯಾದ ಹಿನ್ನೆಲೆಯಲ್ಲಿ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಇಡೀ “ಐರಾವನ್’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ
ನಿರ್ದೇಶಕ ರಾಮ್ಸ್‌ರಂಗ. ರಾಜಕಾರಣ ಮತ್ತು ಮೆಡಿಕಲ್ ಮಾಫಿಯಾದಿಂದ ನಡೆಯುವ ಒಂದು ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದರ ಹುಡುಕಾಟದ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ.
ಇಡೀ ಸಿನಿಮಾದಲ್ಲಿ ಹಲವು ಕಲಾವಿದರ ತಾರಾಗಣವಿದ್ದರೂ, ನಟ ಜಯರಾಮ್ ಕಾರ್ತಿಕ್ (ಜೆ.ಕೆ), ಅದ್ವಿತಿ ಶೆಟ್ಟಿ ಮತ್ತು ವಿವೇಕ್ ಮೂವರ ಪಾತ್ರಗಳ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ಚಿತ್ರದ ನಾಯಕ ಜಯರಾಮ್ ಕಾರ್ತಿಕ್ (ಜೆ.ಕೆ) ಸಿನಿಮಾದಲ್ಲಿ ಎರಡು ಶೇಡ್ ಇರುವಂಥ ಪಾತ್ರದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನು ನಾಯಕಿ ಅದ್ವಿತಿ ಶೆಟ್ಟಿ ಕೂಡ ತುಂಬ ಗಂಭೀರ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಮತ್ತೂಂದು ಪ್ರಮುಖ ಪಾತ್ರದಲ್ಲಿ ವಿವೇಕ್ ಕಾಣಿಸಿಕೊಂಡಿದ್ದಾರೆ. ಮೂವರು ಕೂಡ ತಮ್ಮ ಪಾತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವಂಥ ಅಭಿನಯ ನೀಡಿದ್ದಾರೆ.
ಸಿನಿಮಾದ ಛಾಯಾಗ್ರಹಣ, ಒಂದೆರಡು ಹಾಡುಗಳು ನೋಡುಗರ ಗಮನ ಸೆಳೆಯುವಂತಿದೆ. ಸುಂದರ ಲೊಕೇಶನ್ಸ್ ತೆರೆಮೇಲೆ ಸಿನಿಮಾದ ದೃಶ್ಯಗಳ ಸೌಂದರ್ಯವನ್ನು ಹೆಚ್ಚಿಸಿದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ “ಐರಾವನ್’ ನೋಡಿ ಬರಲು ಅಡ್ಡಿಯಿಲ್ಲ ಎನ್ನಬಹುದು.