ಮನೆ ಸುದ್ದಿ ಜಾಲ ಅಮೆರಿಕದ ನೌಕಾ ನೆಲೆ ಮೇಲೆ ಇರಾನ್‌ ಬ್ಯಾಲಿಸ್ಟಿಕ್ ಮಿಸೈಲ್‌ ದಾಳಿ..!

ಅಮೆರಿಕದ ನೌಕಾ ನೆಲೆ ಮೇಲೆ ಇರಾನ್‌ ಬ್ಯಾಲಿಸ್ಟಿಕ್ ಮಿಸೈಲ್‌ ದಾಳಿ..!

0

ಟೆಹ್ರಾನ್‌/ಟೆಲ್‌ ಅವಿವ್ : ‌ಇರಾನ್‌ ಅಮೆರಿಕ ನಡೆಸಿದ ಜಂಟಿ ದಾಳಿಗೆ ಇರಾನ್‌ ಕೂಡ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಅಮೆರಿಕದ ಬಹ್ರೇನ್ ನೌಕಾನೆಲೆಯ ಮೇಲೆ ಇರಾನ್‌ ಬ್ಯಾಲಿಸ್ಟಿಕ್‌ ಮಿಸೈಲ್‌ (ಖಂಡಾಂತರ ಕ್ಷಿಪಣಿ) ದಾಳಿ ನಡೆಸಿದೆ. Bahrain’s Juffair ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ.

ಪರಮಾಣು ಶಸ್ತ್ರಾಸ್ತ್ರಗಳ ಒಪ್ಪಂದ ಕುರಿತು ಮಾತುಕತೆ ನಡೆಯುವಾಗಲೇ ಇಸ್ರೇಲ್‌ – ಅಮೆರಿಕ, ಇರಾನ್‌ ಮೇಲೆ ಜಂಟಿ ದಾಳಿ ನಡೆಸಿದವು. ಇಸ್ರೇಲ್‌ನ ಮಿಸೈಲ್‌ಗಳು ಇರಾನ್‌ನ 30 ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದವು. ಇದಕ್ಕೆ ತಾನೇನು ಕಮ್ಮಿಇಲ್ಲ ಎನ್ನುತ್ತಿರುವ ಇರಾನ್‌, ಅಮೆರಿಕದ ನೌಕಾ ನೆಲೆಯ ಮೇಲೆ ದಾಳಿ ಮಾಡಿದೆ. ಮತ್ತೊಂದು ಕಡೆ ಇಸ್ರೇಲ್ ನ ಹರ್ಜೈಲಿಯಾ ನಗರದಲ್ಲಿ ಡ್ರೋನ್ ದಾಳಿ ಕೂಡ ಇರಾನ್‌ ನಡೆಸಿದೆ.

ಇರಾನ್‌ ಮಿಸೈಲ್‌ ದಾಳಿಯ ಬಳಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಕಡಲ ಭದ್ರತೆ ಬಗ್ಗೆ ಕಳವಳ ಮೂಡಿಸಿದೆ. ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಏರ್ ಅರೇಬಿಯಾ ವಾಯುಯಾನ ಸಂಸ್ಥೆಯು ಇರಾನ್, ಇರಾಕ್ ಮತ್ತು ಈ ಪ್ರದೇಶದ ಇತರ ಮಾರ್ಗಗಳಿಗೆ ತೆರಳುವ ಎಲ್ಲಾ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಮುಂದಿನ ಹಾರಾಟದ ಸಮಯವನ್ನ ಶೀಘದ್ರದಲ್ಲೇ ತಿಳಿಸುವುದಾಗಿ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

ಇರಾನ್‌ ಕೂಡ ಪ್ರತಿದಾಳಿಗೆ ಸಜ್ಜಾಗುತ್ತಿರುವ ಹಿನ್ನೆಲೆ ಇಸ್ರೇಲ್‌ ಸಾರ್ವಜನಿಕರನ್ನು ಎಚ್ಚರಿಸುತ್ತಿದೆ. ದೇಶಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ವಾಯುದಾಳಿ ಕುರಿತ ಸೈರನ್‌ ಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಜೊತೆಗೆ ಇಸ್ರೇಲ್‌ನ ಜೆರುಸಲೆಮ್‌ನಲ್ಲಿ ಸೋಮವಾರ (ಮಾ.2) ಸಂಜೆ 6:00 ಗಂಟೆಯವರೆಗೆ ಶಾಲೆಗಳು ಮತ್ತು ಇತರ ಎಲ್ಲಾ ಕಚೇರಿಗಳನ್ನು ಮುಚ್ಚುವಂತೆ ಘೋಷಿಸಿದೆ.