ಮನೆ ಅಂತಾರಾಷ್ಟ್ರೀಯ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ದುರ್ಮರಣ: ಅಧಿಕಾರ ಕೈಗೆತ್ತಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ದುರ್ಮರಣ: ಅಧಿಕಾರ ಕೈಗೆತ್ತಿಕೊಂಡ ಮೊಹಮ್ಮದ್ ಮೊಖ್ಬರ್

0

ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ರವಿವಾರ ರಾತ್ರಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Join Our Whatsapp Group

ಇರಾನ್-ಅಜೆರ್ಬೈಜಾನಿ ಗಡಿಯಲ್ಲಿರುವ ಕ್ವಿಜ್ ಖಲಾಸಿ ಅಣೆಕಟ್ಟಿನ ಉದ್ಘಾಟನೆಯ ನಂತರ ಇರಾನಿನ ನಗರವಾದ ತಬ್ರಿಜ್‌ ಗೆ ತೆರಳುತ್ತಿದ್ದಾಗ, ಹೆಲಿಕಾಪ್ಟರ್ ದಟ್ಟ ಮಂಜಿನಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ಪತನಗೊಂಡಿದೆ.

ಇರಾನ್ ಸಂವಿಧಾನದ ಅಡಿಯಲ್ಲಿ, ಹಾಲಿ ಅಧ್ಯಕ್ಷರ ಮರಣವು ನಿರ್ದಿಷ್ಟ ಪ್ರೋಟೋಕಾಲ್ ಗಳನ್ನು ಪ್ರಚೋದಿಸುತ್ತದೆ. ಮೊದಲ ಉಪಾಧ್ಯಕ್ಷ 69ರ ಹರೆಯದ ಮೊಹಮ್ಮದ್ ಮೊಖ್ಬರ್ ಅವರು ಮಧ್ಯಂತರ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.

ಮೊಹಮ್ಮದ್ ಮೊಖ್ಬರ್ ಅವರು ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಅನುಭವಿ ರಾಜಕೀಯ ವ್ಯಕ್ತಿಯಾಗಿದ್ದು, ಆಡಳಿತದಲ್ಲಿ ಗಮನಾರ್ಹ ಪ್ರಭಾವ ಹೊಂದಿದ್ದಾರೆ. ಅವರು ಹಿಂದೆ ಪ್ರಬಲ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಸೆಟಾಡ್‌ ನ ಮುಖ್ಯಸ್ಥರಾಗಿದ್ದರು. ಅಂತಾರಾಷ್ಟ್ರೀಯ ಕಾನೂನು ಮತ್ತು ನಿರ್ವಹಣೆಯಲ್ಲಿ ಉನ್ನತ ಪದವಿಗಳನ್ನು ಹೊಂದಿದ್ದಾರೆ.

ಮೊಖ್ಬರ್, ಪಾರ್ಲಿಮೆಂಟರಿ ಸ್ಪೀಕರ್ ಮೊಹಮ್ಮದ್ ಬಾಕರ್ ಖಲಿಬಾಫ್ ಮತ್ತು ನ್ಯಾಯಾಂಗ ಮುಖ್ಯಸ್ಥ ಘೋಲ್ಲಾಂಹೊಸ್ಸೇನ್ ಮೊಹ್ಸೇನಿ ಎಝೆಯ್ ಅವರನ್ನು ಒಳಗೊಂಡಿರುವ ಮಂಡಳಿಯು 50 ದಿನಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆಯನ್ನು ಆಯೋಜಿಸುವ ಕಾರ್ಯವನ್ನು ಹೊಂದಿದೆ. ಈ ಸ್ಥಿತ್ಯಂತರವನ್ನು ಸರ್ವೋಚ್ಚ ನಾಯಕ ಖಮೇನಿ ಅನುಮೋದಿಸಬೇಕು, ರಾಜತಾಂತ್ರಿಕ ವ್ಯವಹಾರಗಳು ಅಡ್ಡಿಯಿಲ್ಲದೆ ಮುಂದುವರಿಯುತ್ತದೆ ಎಂದು ಅವರು ರಾಷ್ಟ್ರಕ್ಕೆ ಭರವಸೆ ನೀಡಿದ್ದಾರೆ.

ಹಿಂದಿನ ಲೇಖನಕೆರೆಯಲ್ಲಿ ಈಜಲು ತೆರಳಿದ್ದ 6 ಬಾಲಕರ ಪೈಕಿ ಇಬ್ಬರು ನೀರುಪಾಲು
ಮುಂದಿನ ಲೇಖನಮತದಾರರ ಗೌಪ್ಯತೆ ಕುರಿತು ಶಂಕೆ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್