ಮನೆ ರಾಜ್ಯ ಅಕ್ರಮ ಮರಳು ದಂಧೆ ಅಡ್ಡೆ ಮೇಲೆ ದಾಳಿ ನಡೆಸಿದ ಮೈನಿಂಗ್ ಅಧಿಕಾರಿಗಳ ಮೇಲೆ ಕಬ್ಬಿಣದ ರಾಡ್...

ಅಕ್ರಮ ಮರಳು ದಂಧೆ ಅಡ್ಡೆ ಮೇಲೆ ದಾಳಿ ನಡೆಸಿದ ಮೈನಿಂಗ್ ಅಧಿಕಾರಿಗಳ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ: ಓರ್ವನಿಗೆ ಗಂಭೀರ ಗಾಯ

0

ರಾಯಚೂರು: ಜಿಲ್ಲೆಯ ವಿವಿಧೆಡೆ ಅಕ್ರಮ ಮರಳುಗಾರಿಕೆ ದಂಧೆ  ಅಡ್ಡೆ ಮೇಲೆ ದಾಳಿ ಮಾಡಿದ ಮೈನಿಂಗ್ ಅಧಿಕಾರಿಗಳ ಮೇಲೆ ಏಕಾಏಕಿ ಐದಾರು ಮಂದಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ.

ಈ ವೇಳೆ ಮೈನಿಂಗ್ ಇಲಾಖೆಯ ರಕ್ಷಣಾ ಸಿಬ್ಬಂದಿ ನೀಲಪ್ಪ ಎಂಬಾತನಿಗೆ ಗಂಭೀರ ಗಾಯವಾಗಿದ್ದು ತಲೆ ಮತ್ತು ಮುಖಕ್ಕೆ ಪೆಟ್ಟಾಗಿದೆ.

ಗಾಯಗೊಂಡ ರಕ್ಷಣಾ ಸಿಬ್ಬಂದಿಯನ್ನು ಖಾಸಗಿ ‌ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ತುಂಗಭದ್ರಾ ನದಿ ತೀರದಲ್ಲಿ ‌ಅಕ್ರಮ ‌ಮರಳುಗಾರಿಕೆ ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಮಾನ್ವಿ ಪೊಲೀಸರು ಮತ್ತು ಮೈನಿಂಗ್ ಇಲಾಖೆ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಮಾನ್ವಿ ತಾಲ್ಲೂಕು ಚಿಕಲರ್ಪವಿ ಕ್ಯಾಂಪ್ ಸುತ್ತಮುತ್ತ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಮರಳು ಸಮೇತ ಟಿಪ್ಪರ್ ಮತ್ತು ಜೆಸಿಬಿಯನ್ನು ಜಪ್ತಿ ಮಾಡಲಾಗಿದೆ.