ಬೆಂಗಳೂರು: ಕಾಕಂಬಿ ರಫ್ತಿಗೆ ಅವಕಾಶ ಕೊಡೋ ಮೂಲಕ ಅಬಕಾರಿ ಇಲಾಖೆಯಲ್ಲಿ 200 ಕೋಟಿ ಅಕ್ರಮ ಆರೋಪ ಪ್ರಕರಣ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪಗಳು ಸುಳ್ಳು
ಕಾಂಗ್ರೆಸ್ ನವರು ಹತಾಶೆಯಿಂದ ಆರೋಪಗಳನ್ನು ಮಾಡ್ತಿದಾರೆ ಎಂದು ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
ಮಲ್ಲೇಶ್ವರಂ ನ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಈ ಬಾರಿ ದಾಖಲೆಯ ತೆರಿಗೆ ಸಂಗ್ರಹ ಆಗಿದೆ. ಆದಾಯ ತರೋ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಕೆ.ಎನ್ ರೀಸೋರ್ಸ್ ಸಂಸ್ಥೆಗೆ ಈ ಮೊದಲೇ ಅನುಮತಿ ಕೊಟ್ಟಿದ್ದೇವೆ ಅನುಮತಿ ಕೊಟ್ಟಿದ್ದರಲ್ಲಿ ಯಾರ ಒತ್ತಡವೂ ಇರಲಿಲ್ಲ ಎಂದರು.
ಕಾಂಗ್ರೆಸ್ ನವರು ಬಿಟ್ಟಿರುವ ಆಡಿಯೋ ಸುಳ್ಳು ಅವರು ಮಾಡಿರುವ ಆರೋಪ ಸುಳ್ಳು ಕಾಂಗ್ರೆಸ್‌ನವರು ಏನೇ ಆರೋಪ ಮಾಡಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತೆ ಈಥರ ಹತ್ತು ಆಡಿಯೋ ಬಿಟ್ಟರೂ ನಾವು ಎದೆಗುಂದಲ್ಲ ಎಂದು ಹೇಳಿದರು.
ಸಿಎಂ ಮೇಲೂ ಖರ್ಗೆ ಆರೋಪ ಮಾಡಿದ್ದಾರೆ. ಇದು ನಿರಾಧಾರ, ಸತ್ಯಕ್ಕೆ ಸುಳ್ಳು ಪ್ರಿಯಾಂಕ್ ಖರ್ಗೆ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಕೆ. ಎನ್ ರೀಸೋರ್ಸ್ ಸಂಸ್ಥೆಗೆ ಕಾನೂನು ಬದ್ಧವಾಗಿಯೇ ಅನುಮತಿ ಕೊಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಶು ಸಂಗೋಪನೆ ಇಲಾಖೆ ಸಚಿವರಾದ ಪ್ರಭು ಚೌಹಾಣ್, ರಾಜ್ಯಸಭಾ ಸದಸ್ಯರಾದ ಈರಣ್ಣಕಡಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.