ಹುಬ್ಬಳ್ಳಿ : ಬಾನು ಮುಷ್ತಾಕ್ ಅವರೇ ನಿಮ್ಮನ್ನ ಅಲ್ಲಾನೇ ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ಅರಿಶಿಣ ಕುಂಕುವಿಟ್ಟ, ತಾಯಿ ಚಾಮುಂಡೇಶ್ವರಿ ನಿಮ್ಮನ್ನು ಕರೆಸಿಕೊಳ್ತಾಳಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರಿಗೆ ಆಹ್ವಾನ ನೀಡಲಾಗಿದೆ. ಅವರ ಮೇಲೆ ನಮಗೆಲ್ಲ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆಯ ಮುಕುಟವಾಗಿರುವ ದಸರಾ ಉದ್ಘಾಟನೆಯನ್ನು ಅವರ ಕೈಯಲ್ಲಿ ಮಾಡಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಾನು ಮುಷ್ತಾಕ್ ಅವರೇ ನಿಮಗೆ ಆತ್ಮಸಾಕ್ಷಿ ಇಲ್ವ..? ಅದೇಗೆ ನೀವು ಉದ್ಘಾಟನೆಗೆ ಒಪ್ಪಿಕೊಂಡ್ರಿ..? ಬಾನು ಮೇಡಂ ನಿಮ್ಮ ಅಲ್ಲಾನೇ ನಿಮ್ಮನ್ನು ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ನಮ್ಮ ಅರಿಶಿಣ ಕುಂಕುಮವಿಟ್ಟ ಚಾಮುಂಡಿ ನಿಮ್ಮನ್ನು ಬೆಟ್ಟಕ್ಕೆ ಕರೆಸಿಕೊಳ್ಳುತ್ತಾಳಾ..? ನೀವು ಸೀರೆಯುಟ್ಟು, ಅರಿಶಿಣ, ಕುಂಕುಮ ಮತ್ತು ಹೂವಿಟ್ಟು ಬಂದು ದಸರಾ ಉದ್ಘಾಟನೆ ಮಾಡಿ ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.















