ದಾವಣಗೆರೆ: ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್ ಈಶ್ವರಪ್ಪ ಹಠಕ್ಕೆ ಬೀಳದೆ ರಾಜೀನಾಮೆ ಕೊಡುವುದು ಸೂಕ್ತ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೆ.ಎಸ್ ಈಶ್ವರಪ್ಪ ರಾಜೀನಾಮೆ ಅನಿವಾರ್ಯ. ಈಶ್ವರಪ್ಪ ಹಠಕ್ಕೆ ಬೀಳದೆ ರಾಜೀನಾಮೆ ಕೊಡಬೇಕು. ರಾಜೀನಾಮೆ ಬಳಿಕ ಇವರ ಪಾತ್ರದ ಬಗ್ಗೆ ಸಾಬೀತುಪಡಿಸಬೇಕು. ಇದರಲ್ಲಿ ಬಿಜೆಪಿಯ ಬೇಜವಾಬ್ದಾರಿಯೂ ಇದೆ ಎಂದು ಟೀಕಿಸಿದರು.
40 ಪರ್ಸೆಂಟ್ ಕಮಿಷನ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆರ್ಡರ್ ಇಲ್ಲದೆ 4 ಕೋಟಿ ರೂ. ಕಾಮಗಾರಿ ಮಾಡಲು ಅನುಮತಿ ಕೊಟ್ಟವರು ಯಾರು. ಯಾರು ಇವರಿಗೆ ಒಪ್ಪಿಗೆ ಕೊಟ್ಟಿದ್ದು ಎಂಬ ಬಗ್ಗೆ ತನಿಖೆಯಾಗಬೇಕು. ಈ ಯುವಕನ ಸಾವಿಗೆ ಕಾರಣವೇನು. ವಾಸ್ತವಾಂಶ ಏನಿದೆ..? ಸತ್ಯಾಂಶ ಹೊರ ಬರದಿದ್ದರೇ ಬಿಜೆಪಿ ಸರ್ಕಾರಕ್ಕೂ ಕಷ್ಟ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.