ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಾರಿತ್ರಿಕ 100ನೇ ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
ಆ ಮೂಲಕ ಇಸ್ರೊ ನೂತನ ದಾಖಲೆ ಬರೆಯಲಿದೆ.
ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ) ರಾಕೆಟ್‌ನಲ್ಲಿ ಎನ್‌ವಿಎಸ್-02 ನ್ಯಾವಿಗೇಷನ್ ಉಪಗ್ರಹವನ್ನು (ಪಥ ದರ್ಶಕ) ಉಡ್ಡಯನ ಮಾಡಲು ಇಂದು (ಮಂಗಳವಾರ) ನಸುಕಿನ ವೇಳೆ 27 ತಾಸಿನ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಇಸ್ರೊ ತಿಳಿಸಿದೆ.
ಜನವರಿ 29 (ಬುಧವಾರ) ಬೆಳಿಗ್ಗೆ 6.23ಕ್ಕೆ ಸರಿಯಾಗಿ ಐತಿಹಾಸಿಕ ಉಡ್ಡಯನ ನಿಗದಿಯಾಗಿದೆ.
ಜ.13ರಂದು ಇಸ್ರೊದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿರುವ ವಿ. ನಾರಾಯಣನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಯೋಜನೆ ಇದಾಗಿದೆ.
2023ರಲ್ಲಿ ಎನ್‌ವಿಎಸ್-01 ನ್ಯಾವಿಗೇಷನ್ ಉಪಗ್ರಹವನ್ನು ಉಡ್ಡಯನ ಮಾಡಲಾಗಿತ್ತು.
Saval TV on YouTube