ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷೆಯ ನಿಸಾರ್ ಮಾರ್ಕ್-2 ಮಿಷನ್ ಉಡಾವಣೆಗೆ ಇಸ್ರೋ ಇದೀಗ ಅಂತಿಮ ಹಂತದ ಸಿದ್ಧತೆಗಳನ್ನು ಆರಂಭಿಸಿದೆ.
ನಿಸಾರ್ ಮಿಷನ್ ಪ್ರಾರಂಭದಲ್ಲಿ 2024ರಲ್ಲಿ ಉಡಾವಣೆಗಾಗಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಗಳ ಮತ್ತು ಸವಾಲುಗಳ ಕಾರಣ ನಲ್ಲಿ ವಿಳಂಬ ಸಂಭವಿಸಿತು. ಉಪಗ್ರಹದ ಪ್ರಮುಖ ಭಾಗವಾದ 12 ಮೀಟರ್ ವ್ಯಾಸದ ರಾಡಾರ್ ಆಂಟೆನಾ ರಿಫ್ಲೆಕ್ಟರ್ ನಲ್ಲಿ ತಾಪಮಾನ ಸಂಬಂಧಿತ ಸಮಸ್ಯೆಗಳು ಕಂಡುಬಂದವು. ಇದರಿಂದಾಗಿ ಆಂಟೆನಾ ರಿಫ್ಲೆಕ್ಟರ್‌ಗೆ ತಾಪಮಾನ ತಾಳಮೇಳ ಹೆಚ್ಚಿಸಲು ವಿಶೇಷ ಪ್ರತಿಫಲನ ಲೇಪನವನ್ನು ನವೀಕರಿಸಲು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL)ಗೆ 2024ರಲ್ಲಿ ರವಾನಿಸಲಾಯಿತು.
ಅಲ್ಲಿನ ತಪಾಸಣಾ ಹಾಗೂ ಸುಧಾರಣಾ ಪ್ರಕ್ರಿಯೆಗಳ ನಂತರ, ಅಕ್ಟೋಬರ್ 2024ರ ವೇಳೆಗೆ ಉಪಗ್ರಹವನ್ನು ಇಸ್ರೋದ ಬೆಂಗಳೂರು ಘಟಕದಲ್ಲಿ ಸಂಪೂರ್ಣವಾಗಿ ಜೋಡಿಸಲಾಯಿತು. ಈ ಪ್ರಯತ್ನದ ಭಾಗವಾಗಿ, ನಾಸಾದ ಸಿ-130 ಹೆರಕ್ಯುಲಿಸ್ ವಿಮಾನದಲ್ಲಿ ಬಾಹ್ಯಾಕಾಶ ಉಪಕರಣವನ್ನು ಭಾರತಕ್ಕೆ ತಂದು ತಲುಪಿಸಲಾಯಿತು. ಎಲ್ಲಾ ತಾಂತ್ರಿಕ ಜೋಡಣೆ ಮತ್ತು ಅಂತಿಮ ತಪಾಸಣೆಯ ಕಾರ್ಯಗಳು ಜನವರಿ 2025ರೊಳಗೆ ಯಶಸ್ವಿಯಾಗಿ ಪೂರ್ಣಗೊಂಡಿವೆ.
ಪ್ರಸ್ತುತ, ಬಾಹ್ಯಾಕಾಶ ನೌಕೆಯನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ (SDC-SHAR) ಸ್ಥಳಾಂತರಿಸಲಾಗಿದೆ. ಇಲ್ಲಿ ಇಸ್ರೋ ತಂಡ ಉಡಾವಣಾ ಪೂರ್ವ ತಪಾಸಣೆಗಳನ್ನು ನಡೆಯಿಸುತ್ತಿದ್ದು, ಎಲ್ಲಾ ಯಂತ್ರಾಂಶಗಳು ನಿರೀಕ್ಷಿತ ಮಾನದಂಡಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಇತ್ತೀಚೆಗೆ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರೊಂದಿಗೆ ಸಭೆ ನಡೆಸಿದ್ದು, 2025ರ ಏಪ್ರಿಲ್-ಮೇ ಅವಧಿಯ ಉಡಾವಣಾ ವಿಂಡೋ ಕುರಿತು ಮಾಹಿತಿ ನೀಡಿದ್ದಾರೆ.
ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್-2 (GSLV Mk-II) ಮೂಲಕ ನಿಸಾರ್ ಉಪಗ್ರಹವನ್ನು ಉಡಾವಣೆಗೆ ತಯಾರಿಸಲಾಗುತ್ತಿದೆ. ವಿಶೇಷವಾಗಿ, 2025ರ ಏಪ್ರಿಲ್ 26 ರಂದು ಲಾಂಚ್ ವೆಹಿಕಲ್ ನ ಎರಡನೇ ಹಂತದ ಪ್ರಮುಖ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.














