ಮನೆ ತಂತ್ರಜ್ಞಾನ 3 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋದ ಎಸ್‌ಎಸ್‌ಎಲ್‌ವಿ-ಡಿ2

3 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋದ ಎಸ್‌ಎಸ್‌ಎಲ್‌ವಿ-ಡಿ2

0

ಶ್ರೀಹರಿಕೋಟಾ: ಮೂರು ಉಪಗ್ರಹಗಳನ್ನು ಹೊತ್ತ ಇಸ್ರೊದ ‘ಕಿರು ಉಪಗ್ರಹ ಉಡಾವಣಾ ನೌಕೆ (ಸ್ಮಾಲ್‌ ಸ್ಯಾಟ್‌ಲೈಟ್‌ ಲಾಂಚ್‌ ವೆಹಿಕಲ್‌: ಎಸ್‌ಎಸ್‌ಎಲ್‌ವಿ-ಡಿ2)’ ಶುಕ್ರವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಮೂಲಕ ಆಕಾಶಕ್ಕೆ ಹಾರಿತು.

ಉಪಗ್ರಗಳೆಲ್ಲವೂ ಕಕ್ಷೆಗೆ ಸೇರಿದ್ದು, ಬಾಹ್ಯಾಕಾಶ ಕಾರ್ಯಕ್ರಮ ಯಶಸ್ಸು ಕಂಡಿದೆ ಎಂದು ಇಸ್ರೋ ತಿಳಿಸಿದೆ.

ಎಸ್‌’ಎಸ್‌’ಎಲ್‌’ವಿ’ಯ ಎರಡನೇ ಆವೃತ್ತಿಯಾದ ‘ಎಸ್‌ಎಸ್‌ಎಲ್‌ವಿ-ಡಿ2 ಮೂಲಕ ಇಸ್ರೊ ತನ್ನ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್‌–07, ಅಮೆರಿಕ ಮೂಲದ ‘ಅಂಟಾರಿಸ್’ನ ‘ಜಾನಸ್‌’ ಮತ್ತು ಚೆನ್ನೈನ ‘ಸ್ಪೇಸ್ ಕಿಡ್ಜ್ ಇಂಡಿಯಾ’ದ ‘ಆಜಾದಿಸ್ಯಾಟ್‌–2’ ಅನ್ನು ಕಕ್ಷೆಗೆ ಕಳುಹಿಸಿತು.

ಈ ವರ್ಷದಲ್ಲಿ ಇಸ್ರೊದಿಂದ ನಡೆದ ಮೊದಲ ಬಾಹ್ಯಾಕಾಶ ಕಾರ್ಯಕ್ರಮ ಇದಾಗಿದೆ. 34 ಮೀಟರ್ ಎತ್ತರದ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತು.

ಕಿರು ಉಪಗ್ರಹ ಉಡಾವಣಾ ನೌಕೆ’ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಇಸ್ರೊ ‘ಎಸ್‌ಎಸ್‌ಎಲ್‌ವಿ’ ಮೇಲೆ ಅಪಾರವಾದ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಉಪಗ್ರಗಳ ವಿವರ

ಇಒಎಸ್‌–07: ಇದು 156.3 ಕೆ.ಜಿ. ತೂಕದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಇಸ್ರೊ ಅಭಿವೃದ್ಧಿಪಡಿಸಿದೆ.

ಜಾನಸ್-1: 10.2 ಕೆ.ಜಿ. ತೂಕದ ಉಪಗ್ರಹವು ಅಮೆರಿಕದ ‘ಅಂಟಾರಿಸ್‌’ನದ್ದಾಗಿದೆ.

ಆಜಾದಿಸ್ಯಾಟ್-2: 8.7 ಕೆ.ಜಿ. ತೂಕದ ಉಪಗ್ರಹವು ಭಾರತದ ಸುಮಾರು 750 ವಿದ್ಯಾರ್ಥಿನಿಯರ ಸಂಯೋಜಿತ ಪ್ರಯತ್ನದ ಫಲವಾಗಿದ್ದು, ‘ಸ್ಪೇಸ್ ಕಿಡ್ಜ್ ಇಂಡಿಯಾ’ ಅಭಿವೃದ್ಧಿಪಡಿಸಿದೆ.

ಹಿಂದಿನ ಲೇಖನಮೈಸೂರು: ಬೋನಿಗೆ ಬಿದ್ದ ಎರಡು ಚಿರತೆಗಳು
ಮುಂದಿನ ಲೇಖನಬಾಯ್ಲರ್ ಸ್ಫೋಟ: ಓರ್ವ ಸಾವು, ನಾಲ್ವರಿಗೆ ಗಾಯ