ಮೈಸೂರು : ಮೈಸೂರು ಜಿಲ್ಲೆಯಲ್ಲಿ ಉತ್ತಮ ಆಡಳಿತ ಸಪ್ತಾಹ-2024 ರ ಅಂಗವಾಗಿ “ಇಂದೇ ಸಕಾಲ” ಅಭಿಯಾನದಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ.ಶಿವರಾಜು ರವರು ಹಿರಿಯ ನಾಗರಿಕ ವ್ಯಕ್ತಿಗೆ ಹಿರಿಯ ನಾಗರಿಕ ಪಿಂಚಣಿ ಮಂಜೂರಾತಿ ಪತ್ರ ವಿತರಿಸಿದರು.
ಕೇವಲ ಒಂದೇ ಒಂದು ದಿನದಲ್ಲಿ ಕಂದಾಯ ಇಲಾಖೆಯ ಸೇವೆಯನ್ನು ಒದಗಿಸಿರುವುದು ಅನುಕರಣೀಯ ಹಾಗೂ ಅಭಿನಂದನಾರ್ಹ ಸಕಾಲ ಯೋಜನೆಯಿಂದ ಸಾರ್ವಜನಿಕರಿಗೆ ತುಂಬಾ ಉಪಯೋಗವಾಗುತ್ತಿದೆ ಎಂದು ಅರ್ಜಿದಾರರು ಹಾಗೂ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಕೇವಲ ಒಂದೇ ದಿನದಲ್ಲಿ ಕಂದಾಯ ಇಲಾಖೆಯ ಸೇವೆಯನ್ನು ಒದಗಿಸುವುದು ಸಾಧ್ಯವಾಗಿರುವುದರಿಂದ ಇನ್ನು ಮುಂದೆಯೂ ಸಹಾ ಬಡವರಿಗೆ, ರೈತರಿಗೆ, ಗ್ರಾಮೀಣ ವಿಧ್ಯಾರ್ಥಿಗಳಿಗೆ ಅತ್ಯಂತ ಶೀಘ್ರವಾಗಿ ಸರ್ಕಾರದ ಸೇವೆಗಳನ್ನು ಒದಗಿಸಿ ಎಂದು ಅಪರ ಜಿಲ್ಲಾಧಿಕಾರಿಗಳು , ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಕೋರಿರುತ್ತಾರೆ.