ಮನೆ ಆರೋಗ್ಯ ಹಣ್ಣು ತಿಂದ ಮೇಲೆ ನೀರು ಕುಡಿಯಬಾರದು ಎಂದು ಹೇಳುವುದು ಇದೇ ಕಾರಣಕ್ಕೆ

ಹಣ್ಣು ತಿಂದ ಮೇಲೆ ನೀರು ಕುಡಿಯಬಾರದು ಎಂದು ಹೇಳುವುದು ಇದೇ ಕಾರಣಕ್ಕೆ

0

ನಿಮಗೆಲ್ಲ ಗೊತ್ತಿರುವ ಹಾಗೆ ಊಟ ಆದ ತಕ್ಷಣ ನೀರು ಕುಡಿಯಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದು ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಯನ್ನು ತುಂಬಾ ನಿಧಾನಗೊಳಿಸುತ್ತದೆ ಮತ್ತು ಇದರ ಆರೋಗ್ಯ ಸಮಸ್ಯೆಗಳನ್ನು ತಂದುಕೊಡುತ್ತದೆ.

ಹಣ್ಣುಗಳ ವಿಚಾರದಲ್ಲಿ ತಜ್ಞರನ್ನು ಕೇಳುವುದಾದರೆ, ಹಣ್ಣು ತಿಂದ ಮೇಲೆ ನೀರು ಕುಡಿಯುವುದು ಅಷ್ಟು ಒಳ್ಳೆಯದಲ್ಲ. ಏಕೆಂದರೆ ಎಲ್ಲಾ ಬಗೆಯ ಹಣ್ಣುಗಳಲ್ಲಿ ನೀರಿನ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ನೀರಿನ ಜೊತೆ ಅಥವಾ ಹಣ್ಣು ತಿಂದ ಮೇಲೆ ನೀರು ಕುಡಿಯುವುದು ಅಷ್ಟು ಒಳ್ಳೆಯದಲ್ಲ. ಇದು ಆರೋಗ್ಯ ಸಮಸ್ಯೆಗಳನ್ನು ತಂದುಕೊಡುವ ಸಾಧ್ಯತೆ ಇರುತ್ತದೆ.

ಹೊಟ್ಟೆಯ ಸೆಳೆತ ಬರುತ್ತದೆ

• ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಮತ್ತು ಈಸ್ಟ್ ಇರುತ್ತದೆ. ಹಣ್ಣು ತಿಂದ ತಕ್ಷಣ ನೀರು ಕುಡಿಯು ವುದರಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಜೀರ್ಣ ರಸಗಳನ್ನು ಇದು ಶಾಂತಗೊಳಿಸುತ್ತದೆ.

• ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿ ಕಾರ್ಬನ್ ಡೈಯಾಕ್ಸೈಡ್ ಮತ್ತು ಆಲ್ಕೋಹಾಲ್ ಉತ್ಪತ್ತಿ ಆಗುತ್ತದೆ. ಇದು ಗ್ಯಾಸ್ಟ್ರಿಕ್ ಆಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ದೇಹದ ಪಿಎಚ್ ಮಟ್ಟದ ಮೇಲೆ ಪ್ರಭಾವ

• ಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಹೋಗುತ್ತದೆ.

• ಏಕೆಂದರೆ ಹಣ್ಣುಗಳಾದ ಕಲ್ಲಂಗಡಿ ಹಣ್ಣು, ಕರ್ಬೂಜ ಹಣ್ಣು, ಸೌತೆಕಾಯಿ, ಕಿತ್ತಳೆ ಹಣ್ಣು, ಸ್ಟ್ರಾಬೆರಿ ಹಣ್ಣು ಇವೆಲ್ಲವೂ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೆ ಒಳಗಾಗುವಂತೆ ಮಾಡುತ್ತವೆ.

• ಜೀರ್ಣಾಂಗ ವ್ಯವಸ್ಥೆಯ ಪಿಎಚ್ ಮಟ್ಟ ಇವುಗಳಿಂದ ಬದಲಾಗುತ್ತದೆ. ಹೊಟ್ಟೆಯಲ್ಲಿ ಕಡಿಮೆ ಆಮ್ಲಿಯ ಅಂಶಗಳು ಇರುತ್ತವೆ.

ಜೀರ್ಣಾಂಗ ವ್ಯವಸ್ಥೆ ಕುಂಠಿತವಾಗುತ್ತದೆ

• ಹಣ್ಣುಗಳಲ್ಲಿರುವ ನೀರಿನ ಪ್ರಮಾಣ ಮತ್ತು ನಾವು ಹಣ್ಣು ತಿಂದ ಮೇಲೆ ಕುಡಿಯುವ ನೀರಿನ ಪ್ರಮಾಣ ಜೀರ್ಣಾಂಗ ವ್ಯವಸ್ಥೆ ಯನ್ನು ತೊಂದರೆಗೆ ಒಳಗಾಗುವಂತೆ ಮಾಡುತ್ತದೆ.

• ಇದು ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಹೆಚ್ಚು ಮಾಡುತ್ತದೆ. ಹಾಗಾಗಿ ತಜ್ಞ ವೈದ್ಯರು ಹೇಳುವ ಹಾಗೆ ಹಣ್ಣು ತಿಂದ ಮೇಲೆ ಕನಿಷ್ಠ ಒಂದು ಗಂಟೆ ಕಾಲ ನೀರು ಕುಡಿಯ ಬಾರದು.

ಗ್ಯಾಸ್ಟ್ರಿಕ್ ಜ್ಯೂಸ್ ಅಥವಾ ಜೀರ್ಣರಸ ಡೈಲ್ಯೂಟ್ ಆಗುತ್ತದೆ

• ಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆ ಯಲ್ಲಿ ಆಗುವ ಮೊದಲ ಪ್ರಕ್ರಿಯೆ ಇದೇ ಆಗಿರುತ್ತದೆ.

• ಗ್ಯಾಸ್ಟ್ರಿಕ್ ಜ್ಯೂಸ್ ಅಥವಾ ಜೀರ್ಣರಸಗಳು ಡೈಲ್ಯೂಟ್ ಆಗಿ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಇದರಿಂದ ಎದೆಯುರಿ ಮತ್ತು ಹೊಟ್ಟೆ ಉಬ್ಬರ ಉಂ ಟಾಗುತ್ತದೆ.

ರಕ್ತದಲ್ಲಿನ ಶುಗರ್ ಪ್ರಮಾಣ ಏರಿಕೆಯಾಗುತ್ತದೆ

• ಹಣ್ಣು ತಿಂದು ನೀರು ಕುಡಿಯುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಕ್ರಮೇಣವಾಗಿ ನಿಧಾನವಾಗುತ್ತದೆ. ಹೊಟ್ಟೆಯಲ್ಲಿ ಸಾಕಷ್ಟು ಅಜೀರ್ಣ ಆಹಾರ ಹಾಗೆ ಉಳಿಯುತ್ತದೆ.

• ಇದು ಕೊಬ್ಬಿನ ಅಂಶ ಏರಿಕೆ ಆಗುವಂತೆ ಮಾಡುತ್ತದೆ ಮತ್ತು ಇನ್ಸುಲಿನ್ ಸಹ ಸಮತೋಲನದಲ್ಲಿ ಇರುವುದಿಲ್ಲ. ಇದರಿಂದ ರಕ್ತದಲ್ಲಿನ ಶುಗರ್ ಪ್ರಮಾಣ ಏರಿಕೆ ಕಂಡು ಮಧುಮೇಹ ಮತ್ತು ಬೊಜ್ಜು ಆವರಿಸಿಕೊಳ್ಳುತ್ತದೆ.

• ಸಿಟ್ರಸ್ ಹಣ್ಣುಗಳನ್ನು ಸೇವಿಸಿದ ನಂತರ ಮತ್ತು ಹೆಚ್ಚಿನ ಪ್ರಮಾಣದ ನೀರಿನ ಅಂಶ ಇರುವ ಹಣ್ಣುಗಳನ್ನು ಸೇವಿಸಿದ ನಂತರ ನೀರು ಕುಡಿಯಬಾರದು.

• ಹೊಟ್ಟೆಯಲ್ಲಿರುವ ಜೀರ್ಣರಸಗಳ ಜೊತೆಗೆ ಹಣ್ಣುಗಳು ಜೀರ್ಣ ವಾಗಬೇಕು. ಹಾಗಾಗಿ ಕನಿಷ್ಠ ಒಂದು ಗಂಟೆ ಕಾಲ ಹಣ್ಣು ತಿಂದ ಮೇಲೆ ನೀರು ಕುಡಿಯಬಾರದು.