ಬೆಂಗಳೂರು(Bengaluru): ನಾನು ಯಾವುದೋ ಹೋಟೆಲ್ ಗೆ ಉದ್ಘಾಟನೆಗೆ ಹೋಗಿದ್ದನ್ನು ಟ್ರೋಲ್ ಮಾಡಿದ್ದು ಸರಿಯಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ದೋಸೆ ತಿಂದ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಂಸದರ ನಡೆಗೆ ನೆಟ್ಟಿಗರು ಟ್ರೋಲ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತಾಗಿ ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅನಾವಶ್ಯಕ ವಿಷಯಗಳನ್ನು ಮುಂದಿಟ್ಟುಕೊಂಡು ಟೀಕೆ ಮಾಡ್ತಾರೆ ಎಂದು ಕಿಡಿ ಕಾರಿದರು.
ನಾನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ. ನನ್ನ ಕ್ಷೇತ್ರದ ಬೊಮ್ಮನಹಳ್ಳಿಯಲ್ಲಿ ಎರಡು ಕಡೆ ಮಳೆಯಿಂದ ಸಮಸ್ಯೆ ಆಗಿದ್ದು ಬಿಟ್ಟರೆ ಉಳಿದ ಕಡೆ ಎಲ್ಲಿಯೂ ಮಳೆ ಹಾನಿ ಆಗಿಲ್ಲ. ಮಳೆ ಪ್ರವಾಹ ನಿರ್ವಹಣೆಗೆ ಬೊಮ್ಮಾಯಿ ನೇತೃತ್ವದ ಸರ್ಕಾರ ಬದ್ದವಾಗಿದೆ ಎಂದರು.
Saval TV on YouTube