ಮನೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಎಡವಿರುವುದು ಸತ್ಯ: ವಿ.ಶ್ರೀನಿವಾಸ ಪ್ರಸಾದ್‌

ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಎಡವಿರುವುದು ಸತ್ಯ: ವಿ.ಶ್ರೀನಿವಾಸ ಪ್ರಸಾದ್‌

0

ಚಾಮರಾಜನಗರ(Chamarajanagar): ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಎಡವಿರುವುದು ಸತ್ಯ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಮಂಗಳವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, . ಅಂಬೇಡ್ಕರ್‌ ಅವರ ಪಠ್ಯದಿಂದ ಸಂವಿಧಾನ ಶಿಲ್ಪಿ ಎಂಬ ಪದವನ್ನು ತೆಗೆಯಲಾಗಿದೆ. ಬಸವಣ್ಣ ಅವರ ಬಗ್ಗೆ ತಪ್ಪಾಗಿ ಬರೆಯಲಾಗಿದೆ. ಆಗಿರುವ ತಪ್ಪುಗಳನ್ನು ಸರಿಪಡಿಸುವುದಾಗಿ ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.

ಪಠ್ಯಪುಸ್ತಕಗಳು ಯಾವ ರೀತಿ ಇರಬೇಕು ಎಂಬುದನ್ನು ನಾನು ಮೊದಲೇ ಹೇಳಿದ್ದೆ. ಪಠ್ಯದಲ್ಲಿ ವಾಸ್ತವಿಕ ಅಂಶಗಳು ಇರಬೇಕು. ವೈಜ್ಞಾನಿಕ ರೀತಿಯಲ್ಲಿರಬೇಕು. ಮಕ್ಕಳಿಗೆ ಅರ್ಥವಾಗುವಂತೆ ಇರಬೇಕು. ಅವರ ಮನಸ್ಸಿನ ಮೇಲೆ ಪರಿಣಾಮಬೀರಬೇಕು. ಚಿಂತನೆಗೆ ಹಚ್ಚುವ ರೀತಿಯಲ್ಲಿ ಇರಬೇಕು ಎಂದರು.

ರಾಜಕಾರಣ ಬೇಡ: ‘ಭಾವನಾತ್ಮಕ ವಿಚಾರಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಯಾರೂ ಹೋಗಬಾರದು. ಧರ್ಮ ಎಂಬುದು ಅಫೀಮಿನಂತೆ ಎಂದು ಈ ಹಿಂದೆಯೇ ನಾನು ಹೇಳಿದ್ದೇನೆ. ಧರ್ಮವನ್ನು ಮನುಷ್ಯನ ಒಳಿತಿಗೆ ಬಳಸಬೇಕು. ಆದರೆ ಈಗ ವೈಭವೀಕರಿಸಲಾಗುತ್ತದೆ’ ಎಂದು ಶ್ರೀನಿವಾಸ ಪ್ರಸಾದ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇವರ ಚಡ್ಡಿಯನ್ನೇ ಸುಡಬೇಕು: ಆರ್‌ಎಸ್‌ಎಸ್‌ ವಿರುದ್ಧ ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ‘ಆರ್‌ಎಸ್‌ಎಸ್‌ನವರದ್ದು ಈಗ ಚಡ್ಡಿ ಅಲ್ಲ. ಪ್ಯಾಂಟ್‌ ಬಂದಿದೆ. ಈಗ ಇವರು ಅವರ ಚಡ್ಡಿಯನ್ನೇ ಸುಡಬೇಕಷ್ಟೆ ಎಂದು ವ್ಯಂಗ್ಯವಾಡಿದರು.

ಭಾಷಣ ಮಾಡುವುದು ನಿಲ್ಲಿಸಲಿ: ‘ಸಿದ್ದರಾಮಯ್ಯ ಏನೇನೋ ಮಾತನಾಡುತ್ತಾರೆ. ಭಾಷಣ ಮಾಡುತ್ತಾರೆ. ಅವರು ಅಲೆಮಾರಿಯ ರೀತಿ ಆಗಿದ್ದಾರೆ. ಇನ್ನೂ ಕ್ಷೇತ್ರವನ್ನು ಹುಡುತ್ತಲೇ ಇದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನವರು ಮೊದಲು ಭಾಷಣಗಳನ್ನು ಮಾಡುವುದನ್ನು ನಿಲ್ಲಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.