ಮನೆ ಕಾನೂನು ಅತ್ಯಾಚಾರ ಸಂತ್ರಸ್ತೆ ರಾತ್ರೋ ರಾತ್ರಿ ಪೊಲೀಸ್​ ಠಾಣೆಗೆ ಬಂದು ದೂರು ನೀಡಬೇಕೆಂದು ಅಪೇಕ್ಷಿಸುವುದು ತಪ್ಪು: ಕೋರ್ಟ್​

ಅತ್ಯಾಚಾರ ಸಂತ್ರಸ್ತೆ ರಾತ್ರೋ ರಾತ್ರಿ ಪೊಲೀಸ್​ ಠಾಣೆಗೆ ಬಂದು ದೂರು ನೀಡಬೇಕೆಂದು ಅಪೇಕ್ಷಿಸುವುದು ತಪ್ಪು: ಕೋರ್ಟ್​

0

ಅತ್ಯಾಚಾರ ಸಂತ್ರಸ್ತೆ ರಾತ್ರೋ ರಾತ್ರಿ ಪೊಲೀಸ್​ ಠಾಣೆಗೆ ಬಂದು ದೂರು ನೀಡಬೇಕೆಂದು ಅಪೇಕ್ಷಿಸುವುದು ತಪ್ಪು ಎಂದು ಬಾಂಬೆ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

Join Our Whatsapp Group

35 ವರ್ಷ ವಯಸ್ಸಿನ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಮರಾವತಿ ಸೆಷನ್ಸ್​ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್​ ಎತ್ತಿಹಿಡಿದಿದೆ. ಆರೋಪಿಯನ್ನು ಅಪರಾಧಿ ಎಂದು ತೀರ್ಪು ನೀಡಿದೆ. 10 ವರ್ಷಗಳ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಅಮರಾವತಿ ಸೆಷನ್ಸ್​ ನ್ಯಾಯಾಲಯದ ತೀರ್ಪಿನ ವಿರುದ್ಧ ಆರೋಪಿ ರಾಹುಲ್ ಲೋಖಂಡೆ ಮೇಲ್ಮನವಿ ಸಲ್ಲಿಸಿದ್ದ, ಆದರೆ ನ್ಯಾಯಾಲಯವು ಸಂತ್ರಸ್ತೆಯ ಸಾಕ್ಷ್ಯವು ದೃಢ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಹೇಳಿದೆ. ಈ ಆರೋಪಿ ಆಕೆ ವಾಸಿಸುತ್ತಿದ್ದ ಮನೆಯ ಮಾಲೀಕನ ಕೈಕೆಳಗೆ ಕೆಲಸ ಮಾಡುತ್ತಿರುವ ಉದ್ಯೋಗಿಯಾಗಿದ್ದು, ಆಕೆ ಈಗಾಗಲೇ ಮನೆ ಮಾಲೀಕನೊಂದಿಗೆ ವಿವಾದ ಹೊಂದಿದ್ದರಿಂದ ಸುಳ್ಳು ದೂರು ನೀಡಿದ್ದಾಳೆ ಎಂದು ವಕೀಲರು ವಾದಿಸಿದ್ದರು.

ಹಾಗೆಯೇ ಎಫ್​ಐಆರ್​ ದಾಖಲಿಸುವಲ್ಲಿ ವಿಳಂಬವಾಗಿದ್ದೇಕೆ ಎಂದು ಪ್ರಶ್ನಿಸಿದ್ದರು. ಆದರೆ ನ್ಯಾಯಾಲಯವು ಅತ್ಯಾಚಾರ ಸಂತ್ರಸ್ತೆ ರಾತ್ರಿ 15 ಕಿ.ಮೀ ದೂರ ಪೊಲೀಸ್​ ಠಾಣೆಗೆ ಬಂದು ದೂರು ಕೊಡಬೇಕು ಎಂದು ಅಪೇಕ್ಷಿಸುವುದು ತಪ್ಪೆಂದು ಅಭಿಪ್ರಾಯಪಟ್ಟಿದೆ.

ಆಕೆ ಒಬ್ಬಂಟಿ ಹೆಂಗಸು ಅಂದು ಆಕೆ ಅನುಭವಿಸಿದ ನೋವು, ಸಂಕಟವನ್ನು ಅರ್ಥ ಮಾಡಿಕೊಳ್ಳಬೇಕು, ಅಂದು ಮಾರ್ಚ್​ 25, 2017ರ ರಾತ್ರಿ, ಆತನ ಪರಿಚಯವಿತ್ತು ಅದು ರಾತ್ರಿ ಸಮಯವಾಗಿತ್ತು. ಆಕೆಯ ಮನೆಯ ಅಂಗಳದಲ್ಲಿ ಕುಳಿತಿರುವಾಗ ಆ ಏಕಾಏಕಿ ಆಕೆಯ ಮೇಲೆ ದಾಳಿ ಮಾಡಿ ಅತ್ಯಾಚಾರವೆಸಗಿದ್ದ.

ಬಳಿಕ ಆಕೆ ತಪ್ಪಿಸಿಕೊಂಡು ಮನೆಯ ಒಳಗೆ ಓಡಿ ಹೋದಳು, ಪಕ್ಕದ ಅಂಗಡಿಯವರೊಬ್ಬರಿಗೆ ಕರೆ ಮಾಡಿದಳು, ಆ ಸಮಯದಲ್ಲಿ ಆತ ಮತ್ತೆ ಅತ್ಯಾಚಾರವೆಸಗಿದ್ದ. ಅಂಗಡಿಯವನು ಮನೆಗೆ ತಲುಪುವಷ್ಟರಲ್ಲಿ ಘಟನೆ ನಡೆದಿತ್ತು. ಆರೋಪಿ ತಕ್ಷಣ ಓಡಿ ಹೋಗಿದ್ದಾನೆ. ಮಹಿಳೆ ಮರುದಿನ ಪೊಲೀಸ್ ಠಾಣೆಗೆ ಬಂದಿ ದೂರು ದಾಖಲಿಸಿದ್ದಳು.