ಮನೆ ಕಾನೂನು ಕರಾವಳಿ ಭಾಗದ ಚಿನ್ನದ ಅಂಗಡಿಗಳ ಮೇಲೆ ಐಟಿ ದಾಳಿ

ಕರಾವಳಿ ಭಾಗದ ಚಿನ್ನದ ಅಂಗಡಿಗಳ ಮೇಲೆ ಐಟಿ ದಾಳಿ

0

ಮಂಗಳೂರು/ಉಡುಪಿ: ನಿನ್ನೆ ಅಷ್ಟೇ ಕರ್ನಾಟಕದ 75 ಕಡೆಗಳಲ್ಲಿ ಲೋಕಾಯುಕ್ತ ದಾಳಿಯಾದ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ಕರಾವಳಿ ಭಾಗದಲ್ಲಿ ಐಟಿ ದಾಳಿಯಾಗಿದೆ.

ಉಡುಪಿ, ಕಾರ್ಕಳ, ಕುಂದಾಪುರ, ಪಡುಬಿದ್ರಿ, ಬ್ರಹ್ಮಾವರ, ಪುತ್ತೂರು ಸೇರಿದಂತೆ ಹಲವೆಡೆ ಚಿನ್ನದ ಅಂಗಡಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಎರಡು ಟೂರಿಸ್ಟ್ ಇನೋವಾ ಕಾರಿನಲ್ಲಿ ಆಗಮಿಸಿರುವ ಅಧಿಕಾರಿಗಳು, ಶಿವಭಾಗ್’ನ ಆಭರಣ ಮಳಿಗೆಗಳ ಮೇಲೆ ದಾಳಿ ಮಾಡಿದ್ದಾರೆ. ಕರಾವಳಿಯ ಅನೇಕ ಭಾಗಗಳಲ್ಲಿ ತನ್ನ ಶೋರೂಮ್ ಹೊಂದಿರುವ ಶಿವಭಾಗ್ ಚಿನ್ನದ ಮಳಿಗಳ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮಂಗಳೂರಿನ ಕದ್ರಿ ಬಳಿಯ ಶಿವಭಾಗ್ ನ ಆಭರಣ ಜ್ಯುವೆಲ್ಲರಿ ಅಂಗಡಿಯಲ್ಲಿ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಶಿವಭಾಗ್ ಆಭರಣ ಅಂಗಡಿ. ರಾಜ್ಯದಲ್ಲಿ ಒಟ್ಟು 14 ಮಳಿಗೆಗಳು ಹಾಗೂ ಗೋವಾದಲ್ಲಿ ಒಂದು ಮಳಿಗೆ ಇದೆ. 1935 ರಲ್ಲಿ ಉಡುಪಿಯಲ್ಲಿ ಮೊದಲ ಶಿವಭಾಗ್ ಆಭರಣ ಅಂಗಡಿ ಪ್ರಾರಂಭವಾಗಿತ್ತು. ಇದೀಗ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಶಿವಭಾಗ್ ಆಭರಣ ಮಳಿಗೆಗಳು ತಲೆ ಎತ್ತಿವೆ.

ಹಿಂದಿನ ಲೇಖನಏಕದಿನ ವಿಶ್ವಕಪ್ : ಶ್ರೀಲಂಕಾ ತಂಡವನ್ನು ಮಣಿಸಿದ ಅಫ್ಘಾನಿಸ್ತಾನ
ಮುಂದಿನ ಲೇಖನವಿಜಯಪುರದಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ ಗಳ ಸಂಚಾರ ಸ್ಥಗಿತ