ಮನೆ ರಾಜ್ಯ ಬೆಂ.ನಗರ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷರಾಗಿ ಜೆ.ಮಂಜುನಾಥ್ ಆಯ್ಕೆ

ಬೆಂ.ನಗರ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷರಾಗಿ ಜೆ.ಮಂಜುನಾಥ್ ಆಯ್ಕೆ

0

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟದ ಪದಾಧಿಕಾರಿಗಳ ಚುನಾವಣೆಯಲ್ಲಿ  ನೂತನ ಅಧ್ಯಕ್ಷರಾಗಿ ಜೆ.ಮಂಜುನಾಥ್ ,ಉಪಾಧ್ಯಕ್ಷರಾಗಿ ಕೆ.ಸಿ.ಕೃಷ್ಣಪ್ಪ, ಖಚಾಂಚಿಯಾಗಿ ಹೆಚ್.ಎನ್.ಗೌತಮ್ ಆಯ್ಕೆಯಾಗಿದ್ದಾರೆ.

Join Our Whatsapp Group

ಬೆಂಗಳೂರು ನಗರ ಜಿಲ್ಲಾ  ಸಹಕಾರ ಒಕ್ಕೂಟದ ಕಛೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ  ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಬಳಿಕ ಮಾತನಾಡಿದ ಜೆ.ಮಂಜುನಾಥ್, ಹೆಚ್.ಎನ್.ಗೌತಮ್, ಬೆಂಗಳೂರು ಸಹಕಾರ ಮಹಾಮಂಡಳದ ಅಧೀನದಲ್ಲಿರುವ ಕಟ್ಟಡವನ್ನು ಬೆಂಗಳೂರು ಸಹಕಾರ ಒಕ್ಕೂಟಕ್ಕೆ ತೆಗೆದು ಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ,ಸಹಕಾರ ಬ್ಯಾಂಕು,ಸೊಸೈಟಿಗಳನ್ನು ನಡೆಸುತ್ತಿರುವವರಿಗೆ ಸೂಕ್ತ ತರಬೇತಿ ನೀಡುವುದು ನಮ್ಮ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.