ಮನೆ ಕಾನೂನು ಜಹಾಂಗೀರ್ ಪುರಿ ತೆರವು ಕಾರ್ಯಾಚರಣೆ: ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಆದೇಶ

ಜಹಾಂಗೀರ್ ಪುರಿ ತೆರವು ಕಾರ್ಯಾಚರಣೆ: ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಆದೇಶ

0

ನವದೆಹಲಿ: ದೆಹಲಿಯ ಜಹಾಂಗೀರ್ ಪುರಿ ಪ್ರದೇಶದ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಕಟ್ಟಡವನ್ನು ನೆಲಸಮ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶ ಹೊರಡಿಸಿದೆ.

ಮುಸ್ಲಿಂ ಗಲಭೆ ಆರೋಪಿಗಳ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಜಮೀಯತ್ ಉಲಮಾ-ಇ-ಹಿಂದ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.

ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಿ, ಎರಡು ವಾರಗಳ ನಂತರ ವಿಚಾರಣೆ ನಡೆಸಿ ಮುಂದಿನ ಆದೇಶ ನೀಡಲಾಗುವುದು ಎಂದು ನ್ಯಾಯಪೀಠ ಹೇಳಿದೆ.

ಎನ್‌ಡಿಎಂಸಿ ಮೇಯರ್‌ಗೆ ತಿಳಿಸಿದ್ದರೂ ಆದೇಶದ ನಂತರವೂ ನಿನ್ನೆ ಬುಧವಾರ ಜಹಾಂಗೀರ್ ಪುರಿಯಲ್ಲಿ ಕಟ್ಟಡಗಳ ನೆಲಸಮ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದೆ ಎಂದು ನ್ಯಾಯಪೀಠ ಹೇಳಿದೆ.

ವಾಯುವ್ಯ ದೆಹಲಿ ನೆರೆಹೊರೆಯು ಕೋಮುಗಲಭೆಯಿಂದ ನಲುಗಿದ ದಿನಗಳ ನಂತರ, ಬಿಜೆಪಿ ಆಡಳಿತದ ಮಹಾನಗರ ಆಡಳಿತ ಸಂಸ್ಥೆ ಅತಿಕ್ರಮಣ-ವಿರೋಧಿ ಅಭಿಯಾನದ ಭಾಗವಾಗಿ ಬುಧವಾರ ಜಹಾಂಗೀರ್ಪುರಿಯಲ್ಲಿ ಮಸೀದಿಯ ಸಮೀಪವಿರುವ ಹಲವಾರು ಕಾಂಕ್ರೀಟ್ ಮತ್ತು ತಾತ್ಕಾಲಿಕ ಕಟ್ಟಡಗಳನ್ನು ಬುಲ್ಡೋಜರ್‌ಗಳಿಂದ ಕಿತ್ತುಹಾಕಿವೆ. ಧ್ವಂಸಗೊಳಿಸುವಿಕೆಯ ವಿರುದ್ಧ ಜಮಿಯತ್ ಉಲಮಾ-ಇ-ಹಿಂದ್ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನಂತರ ಸುಪ್ರೀಂ ಕೋರ್ಟ್ ನೆಲಸಮ ಕಾರ್ಯಾಚರಣೆ ನಿಲ್ಲಿಸಲು ಎರಡು ಬಾರಿ ಮಧ್ಯಪ್ರವೇಶಿಸಿತ್ತು.