ಬೆಂಗಳೂರು,:ಕಾಂಗ್ರೆಸ್ ನವರು ಹೃದಯದಲ್ಲಿ ಟಿಪ್ಪು ಇಟ್ಟುಕೊಂಡು ಜೈ ಶ್ರೀರಾಮ್ ಎನ್ನುತ್ತಾರೆ. ಇದೆಲ್ಲಾ ಈಗ ವರ್ಕೌಟ್ ಆಗಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಹಿಂದಿನ ಎಲ್ಲಾ ಯೋಜನೆ ಸ್ಥಗಿತವಾಗಿದೆ. ಲ್ಯಾಪ್ ಟಾಪ್ ಕೂಡ ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ. ಕೇವಲ ಟಾಪ್ಗೆ ಹಣ ಸರಬರಾಜು ಅಷ್ಟೇ. ಇದರ ವಿರುದ್ಧ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ಕೊಟ್ಟ ಹಣಕ್ಕಿಂತ ದುಪ್ಪಟ್ಟು ಹಣ ಮೋದಿ ಕಾಲದಲ್ಲಿ ರಾಜ್ಯಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಂಬಂಧ ಮಧ್ಯಾಹ್ನದ ಮೇಲೆ ಚರ್ಚೆ ನಡೆಯಲಿದೆ. ಮುಸ್ಲಿಂರಿಗೆ 10 ಸಾವಿರ ರೂ. ಕೋಟಿ, ರೈತರಿಗೆ 105 ಕೋಟಿ ರೂ. ನೆರವು ಇದು ರಾಜ್ಯ ಸರ್ಕಾರದ ಧೋರಣೆ ಎಂದು ಕಿಡಿಕಾರಿದ್ದಾರೆ.
ಕಾರ್ಯಕಾರಿಣಿಗೆ ಕೆಲವರ ಗೈರು ವಿಚಾರವಾಗಿ ಮಾತನಾಡಿದ ಅವರು, ಎಲ್ಲರಿಗೂ ಆಹ್ವಾನ ಕಳುಹಿಸಲಾಗಿದೆ. ಕಾರಣಾಂತರಗಳಿಂದ ಕೆಲವರು ಬಂದಿಲ್ಲ. ಅವರ ಜೊತೆ ಮಾತನಾಡುತ್ತೇವೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲವು ಸುಗಮವಾಗಿದೆ. ಎಲ್ಲರಿಗೂ ಆಹ್ವಾನ ಹೋಗಿದೆ ಎಂದಿದ್ದಾರೆ.
ಸಂಸದ ರಾಘವೇಂದ್ರರನ್ನ ಶಾಮನೂರು ಹೊಗಳಿದ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್ ಮನೆಯೊಂದು 3 ಬಾಗಿಲಾಗಿದೆ. ಮುಂದೆ ಕಾಂಗ್ರೆಸ್ ಮನೆ ಒಡೆದು 100 ಚೂರು ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ಮೋದಿ ಬೆಂಬಲಿಸಿ ರಾಘವೇಂದ್ರಗೆ ಮತ ನೀಡಿ ಅಂದಿದ್ದಾರೆ. ಇದು ಏನು ಸಂದೇಶ ನೀಡುತ್ತದೆ ಎಂದು ಗೊತ್ತಲ್ವಾ ಎಂದು ಹೇಳಿದ್ದಾರೆ.