ಮನೆ ರಾಜ್ಯ ಜೈನಮುನಿ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ: ಸದನಕ್ಕೆ ಸಿಎಂ ಮಾಹಿತಿ

ಜೈನಮುನಿ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ: ಸದನಕ್ಕೆ ಸಿಎಂ ಮಾಹಿತಿ

0

ಬೆಂಗಳೂರು/ಬೆಳಗಾವಿ:  ಬೆಳಗಾವಿಯಲ್ಲಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Join Our Whatsapp Group

ಈ ಬಗ್ಗೆ ಸಿಎಂ ಇಂದು ಸದನಕ್ಕೆ ಮಾಹಿತಿ ನೀಡಿದ ಅವರು, ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ಜೈನಮುನಿ ಹತ್ಯೆ ಪ್ರಕರಣ ಅತೀ ಸೂಕ್ಷ್ಮವಾಗಿರುವುದರಿಂದ ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದು ಸ್ಪಷ್ಟಡಿಸಿದರು.

ಏನಿದು ಪ್ರಕರಣ ?

ಜು.6ರ ಬೆಳಗ್ಗೆಯಿಂದ ಜೈನಮುನಿ ಮಠದಿಂದ ನಾಪತ್ತೆಯಾಗಿರುವ ಕುರಿತು ಶುಕ್ರವಾರ ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಶುಕ್ರವಾರ ರಾತ್ರಿ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.  ಸ್ವಾಮೀಜಿಗೆ ಆಪ್ತನಾಗಿದ್ದ ನಾರಾಯಣ ಮಾಳಿ, ಹಸನ್ ಅಲಿಯಾಸ್ ಹುಸೇನ್ ದಲಾಯತ್‌ ಸೇರಿ ಜೈನಮುನಿಗಳ ಹತ್ಯೆ ಮಾಡಿದ್ದು ತನಿಖೆಯಲ್ಲಿ ಬಯಲಾಗಿತ್ತು.