ಮಂಡ್ಯ(Mandya): ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮಸೀದಿ ತೆರವುಗೊಳಿಸಿ ಹಿಂದುಗಳ ವಶಕ್ಕೆ ನೀಡುವಂತೆ ಹೈಕೋರ್ಟ್’ಗೆ ಅರ್ಜಿ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ.
ಬೆಂಗಳೂರಿನ ಹೈ ಕೋರ್ಟ್ ವಕೀಲ ರವಿಶಂಕರ್ ಮೂಲಕ ಅರ್ಜಿ ಸಲ್ಲಿಕೆಗೆ ನಿರ್ಧಾರಿಸಲಾಗಿದೆ. ಮೂಡಲಬಾಗೀನ ಆಂಜನೇಯಸ್ವಾಮಿ ಸ್ವತಃ ತಾನೇ ಖುದ್ದು ಪಿರ್ಯಾದುದಾರನಾಗಿದ್ದು, ಆಂಜನೇಯಸ್ವಾಮಿ ಪರವಾಗಿ 108 ಜನ ಭಕ್ತರಿಂದಲೂ ಅರ್ಜಿ ಸಲ್ಲಿಸಲಾಗುತ್ತಿದೆ.
ಈ ಸಂಬಂಧ ಭಜರಂಗ ಸೇನೆ ಅಗತ್ಯ ದಾಖಲೆ ಸಂಗ್ರಹಿಸಿ ವಕೀಲರಿಗೆ ನೀಡುತ್ತಿದೆ.
ಈ ಕುರಿತು ಮಾತನಾಡಿರುವ ಭಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ , ಹಿಂದೂಗಳಿಗೆ 108 ಅನ್ನೋದು ಮಂಗಳಕರ ಹಾಗಾಗಿ 108 ಅರ್ಜಿ ಸಲ್ಲಿಸುತ್ತಿದ್ದೇವೆ. 108 ಹನುಮ ಭಕ್ತರಿಂದ ಹೈಕೋರ್ಟ್ ಗೆ ದಾವೆ ಹೂಡುತ್ತಿದ್ದೇವೆ. ಕಳೆದ ಜೂನ್ ತಿಂಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ಹಿಂದೂ ಪರ ಸಂಘಟನೆಗಳು ಈ ಕಾನೂನಾತ್ಮಕ ಹೋರಾಟಕ್ಕೆ ಇಳಿದಿದ್ದಾರೆ ಎಂದು ತಿಳಿಸಿದ್ದಾರೆ.
ಮಸೀದಿ ಈ ಹಿಂದೆ ಹನುಮ ದೇವಾಲಯ ಆಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಮೈಸೂರು ಗೆಜೆಟ್’ನಲ್ಲೂ ಉಲ್ಲೇಖವಿದೆ. ಜೊತೆಗೆ ಹಲವು ಬ್ರಿಟೀಷ್ ಬರಹಗಾರರು ಬರೆದಿರುವ ದಾಖಲೆಗಳಿವೆ.
ಮಸೀದಿ ಎನ್ನಲಾಗುತ್ತಿರುವ ಸ್ಥಳದಲ್ಲಿ ಹಿಂದೂ ದೇವಾಲಯದ ಕುರುಹು ಇದೆ. ದೇವಾಲಯದ ನಿರ್ಮಾಣದ ಶೈಲಿ, ಅಲ್ಲಿರುವ ಕಲ್ಯಾಣಿ ಸೇರಿದಂತೆ ಹಲವು ದಾಖಲೆಗಳ ಆಧಾರದ ಮೇಲೆ ದಾವೆ ಹೂಡಲಾಗುತ್ತಿದೆ ಎಂದು ತಿಳಿಸಿದ್ದಾರೆ.