ಮನೆ ಜ್ಯೋತಿಷ್ಯ ಜನ್ಮ ನಕ್ಷತ್ರ ಮತ್ತು ಜಾತಕ ಫಲ

ಜನ್ಮ ನಕ್ಷತ್ರ ಮತ್ತು ಜಾತಕ ಫಲ

0

 ಅಶ್ವಿನಿ ನಕ್ಷತ್ರ ಮತ್ತು ಜಾತಕ:

ಅಶ್ವಿನಿ ನಕ್ಷತ್ರ ಕ್ಷೇತ್ರ ವ್ಯಾಪ್ತಿ ಶೂನ್ಯ (0) ಅಂಶದಿಂದ 13 ಅಂಶ ಮತ್ತು  20 ಕಲಾವಿದರಿಗೆ.ರಾಶಿ ಮೇಷ, ರಾಶಿಯ ಸ್ವಾಮಿ ಮಂಗಳ, ನಕ್ಷತ್ರದ ಸ್ವಾಮಿ ಕೇತು,ದೇವತೆ ಅಶ್ವಿನಿ ಕುಮಾರರು ತಾರಾಸಮೂಹ 3 ಆಕಾಶ ಭಾಗ ಉತ್ತರ, ಅಶ್ವಯೋನಿ, ಆಧ್ಯ ನಾಡಿ, ದೇವಗಣ, ನಾಮಾಕ್ಷರ ಚೂ, ಚೇ, ಚೋ, ಲಾ, ಅಶ್ವಿನಿ ನಕ್ಷತ್ರದ ಪ್ರತಿನಿಧಿಸುವ ಜಾತಕನ ಶರೀರ ಭಾಗ – ಶಿರ ಮತ್ತು ಪ್ರಮಸ್ತಿಷ್ಕಿಯ ಗೋಲಾರ್ಧ.

Join Our Whatsapp Group

 ಅಶ್ವಿನಿ ಜಾತಕನ ಸ್ವರೂಪ :

       ಲೋಭಿ, ಉತ್ತೇಜಿನಾಗುವವ ಜಮೀನು ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಚಿತ್ತಾಗ್ರಸ್ತ, ಸಹೋದರರಿಗೆ ರೋಗ, ಮಾಟ ಮಂತ್ರ ಅಥವಾ ಚಮತ್ಕಾರಿಕ ವಿದ್ಯೆಗಳನ್ನು ಬಲ್ಲವ, ಭಗವಂತನ ಭಕ್ತ ಸಮತಾವಾದಿ, ಅಸಂಪ್ರದಾಯವಾದಿ,ಆಭರಣ ಮತ್ತು ರತ್ನಗಳ ಪ್ರೇಮಿ ರೂಪವಂತ, ಸರ್ವರಿಂದಲೂ ಪ್ರಶಂಸಿತ, ಚತುರ ಹಾಗೂ ಬುದ್ಧಿವಂತಿಕೆಯ  ಕಾರ್ಯಗಳಿಂದ ಪ್ರತಿಷ್ಠಿತ.

 ಅಶ್ವಿನಿ ಜತಕದ ಉದ್ಯೋಗ :

 ಕಾರ್ಖಾನೆಯಲ್ಲಿ ನೌಕರಿ, ಪೊಲೀಸ್,ಸೇನೆ,ಚಿಕಿತ್ಸೆ, ಶಲ್ಯೋಪಚಾರ, ಕಾರಾಗ್ರಹ, ಅಪರಾಧ, ನ್ಯಾಯಾಲಯ,ರೈಲ್ವೆ, ಯಂತ್ರಗಳು, ಲೋಹ,ಗ್ರಂಥಾಲಯ,ಕುದುರೆಯ ವ್ಯಾಪಾರ,ಉತ್ಖನನದ ಪರಿವೀಕ್ಷಕ, ನೇತೃತ್ವ ಪ್ರಧಾನ, ಸಮ್ಮಾನಿತ ಅಧ್ಯಕ್ಷ.

 ಅಶ್ವಿನಿ ಜಾತಕ ರೋಗ :

     ಶಿರದಲ್ಲಿ ಪೆಟ್ಟು ಮನಸ್ಸಿನಲ್ಲಿ ಊಹಾಪೋಹ, ಮಿದುಳಿನಲ್ಲಿ ರಕ್ತಕ್ಷೀಣತೆ ಆಪಸ್ಮಾರ,ಉಗ್ರತೆ,ಶೀತ್ತಪಿತ್ತ, ಸೆಳೆತ, ಶಿರದ ಯಾವುದೇ ಭಾಗದಲ್ಲಿ ಈ ತೀಕ್ಷ್ಣ ಪೀಡೆ, ನರ ದೌರ್ಬಲ್ಯ,ಗುಲ್ಮರೋಗ,ಮಂಪರು, ಮರೆಗುಳಿತನ, ಪಾಶ್ವವಾಯು, ವಿಷಮಶೀತಜ್ವರ,ಅನಿದ್ರಾರೋಗ, ಸಿಡುಬು, ಶ್ವಾಸವೃದ್ಧಿ, ಘನಾಮ್ರತಾ ಪ್ರಮಸ್ತಕೀಯ  ವಿಷಮತೆ ಗಂಟಲು ಬಾವು.

 ವಿಶೇಷ: ಈ ನಕ್ಷತ್ರ ಸಂತಾನೋತ್ಪಾದಕವಲ್ಲ.ಆದಾಗ್ಯೂ  ಕೇತು ಯಾವುದೇ ಶುಭ ಗ್ರಹದೊಡನೆ ಯುತಿ ಅಥವಾ ದೃಷ್ಟಿ ಸಂಬಂಧ ಹೊಂದಿದ್ದರೆ ಸಂತಾನ ಪ್ರಾಪ್ತಿಯಾಗುತ್ತದೆ.ಸ್ತ್ರೀಯರಲ್ಲಿ ಗರ್ಭಪಾತದ ಸಂಭವವಿರುತ್ತದೆ. ಶಸ್ತ್ರಚಿಕಿತ್ಸೆ ಅಥವಾ ಅನ್ಯ ಉಪಚಾರಗಳಿಂದಲೂ ಕೂಡ ಯಾವುದೇ ಲಾಭವಾಗುವುದಿಲ್ಲ ಆದ್ದರಿಂದ ಇಂಥ ಅಧಿಕಾಂಶ ಜಾತಕರು ಬಗ್ಗೆ ಅಥವಾ ಯಾವುದಾದರೂ ಕಾರಣದಿಂದ ಸಂತಾನಹೀನರಾಗುತ್ತಾರೆ ಅಥವಾ ಅವರ ಕಾಮ ಶಕ್ತಿ ಕುಂಠಿತವಾಗುತ್ತದೆ.ಆದಾಗ್ಯೂ, ನಕ್ಷತ್ರದ ಮೇಲೆ ಶುಭ ಗ್ರಹದ ದೃಷ್ಟಿ ಯಿದ್ದರೆ ಅಥವಾ ನಕ್ಷತ್ರ ಮೇಲೆ ಶುಭಗ್ರಹದ ಸ್ಥಿತಿಯಲ್ಲಿದ್ದರೆ ಕುಪ್ರಭಾವ ಉಂಟಾಗುವುದಿಲ್ಲ.

     ಕೇತುವಿನ ಈ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ವಿಚಾರಶೀಲ ಅಧ್ಯಯನಶೀಲ, ಅಧ್ಯಾಪನ ಅಥವಾ ಶಿಕ್ಷಾಪ್ರದ  ಕಾರ್ಯ ಮಾಡುವರು, ಜ್ಯೋತಿಷಿ  ವೈದ್ಯಾದಿ ಕ್ಷೇತ್ರಗಳಲ್ಲಿ ಅಭಿರುಚಿಯಿರುವವರು ಲೇಖಕ, ಪ್ರಾಮಾಣಿಕ, ಚಂಚಲ ಪ್ರವೃತ್ತಿಯವರು  ಭ್ರಮಣಪ್ರಿಯರು, ಶರೀರದ ಮೇಲೆ ಗುಳ್ಳೆ ಅಥವಾ ಕರ್ಮ ರೋಗ ವುಳ್ಳವರು, ಮನೆಯಲ್ಲಿ ಕಲಹ ಮಾಡುವವರು ಮಹಾತಕಾಂಕ್ಷಿ ವಿಚಾರವುಳ್ಳವರಾಗುತ್ತಾರೆ.

     ವಿಂಶೋತ್ತರಿಯ ಅನುಸಾರ ಜಾತಕನ ಜನ್ಮದ ಸಮಯಕ ಕೇತುವಿನ ಮಹಾದೆಶೆ ಆರಂಭವಾಗುತ್ತದೆ. ಕೇತುವಿನ ಮಹಾದೇಶೆಯ ಒಟ್ಟು ಅವದಿ ಏಳು ವರ್ಷಗಳು.ಒಂದು ವೇಳೆ ಜಾತಕನಿಗೆ ಕೇತುವಿನಲ್ಲಿ ಮಹಾ ದೆಶೆ ಮತ್ತು ಮಂಗಳನ ಭುಕ್ತಿ ನಡೆಯುತ್ತಿದ್ದರೆ ಅಥವಾ ಮಂಗಳನ ಮಹಾದೆಶೆಯಲ್ಲಿ ಕೇತುವಿನ ಭುಕ್ತಿ ನಡೆಯುತ್ತಿದ್ದರೆ ಅಂಥ ಜಾತಕನು ಕುಂಡಲಿಯಲ್ಲಿ ಇದೇ ಗ್ರಹಗಳ ಭಾವಾನುಸಾರ ಫಲವನ್ನು ಪ್ರಾಪ್ತಿ ಹೊಂದುತ್ತಾರೆ. ಅಲ್ಲದೆ, ನಾಡಿ ಪದ್ದತಿಯ ಅನುಸಾರ ಇವೆರಡು ಗ್ರಹಗಳಲ್ಲಿ ಯಾವುದೇ ಗ್ರಹ ಅಶ್ವಿನಿ ನಕ್ಷತ್ರದ ಮೂಲಕ ಭ್ರಮಣಿಸಿದರೂ ಕೂಡ,ಜಾತಕನು ಇದೇ ಗ್ರಹಗಳ ಭಾವಾನುಸಾರ ಫಲವನ್ನು ಪ್ರಾಪ್ತಿಒಂದುತ್ತಾನೆ.ಸೂರ್ಯನು ಅಶ್ವಿನಿ ನಕ್ಷತ್ರ ಮೇಲೆ ಪ್ರತಿ ವರ್ಷ ವೈಶಾಖದ ಆರಂಭದಲ್ಲಿ ಸುಮಾರು 13 ಕಾಲು ದಿನಗಳವರೆಗೆ ಭ್ರಮಣ ಮಾಡುತ್ತಾನೆ ಮತ್ತು ಚಂದ್ರನು ಪ್ರತಿ 27ನೆಯ ದಿನ ಈ ನಕ್ಷತ್ರ ಮೇಲೆ ವಿದ್ಯಾಮಾನನಾಗಿರುತ್ತಾನೆ.