ಇದು ಕನಸಲ್ಲ ವಾಸ್ತವ. ವಿಶ್ವದ ಮೊದಲ ಹಾರುವ ಬೈಕ್ ಜಪಾನ್‌ನಲ್ಲಿ ಬಿಡುಗಡೆಯಾಗಿದೆ. ನೀವು ಟ್ರಾಫಿಕ್ ಜಾಮ್‌ಗಳ ಬಗ್ಗೆ ಚಿಂತೆ ಮಾಡುತ್ತಿದ್ದರೆ ಮತ್ತು ಒಂದು ನಗರದಿಂದ ಇನ್ನೊಂದು ನಗರಕ್ಕೆ ಹಾರಲು ಬಯಸಿದರೆ, ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.
ಜಪಾನಿನ ಸ್ಟಾರ್ಟ್ಅಪ್ ಕಂಪನಿ AERWINS ಟೆಕ್ನಾಲಜೀಸ್ ಈ ಬೈಕ್ ಅನ್ನು ನಿರ್ಮಿಸಿದೆ. ಇದನ್ನು ಸೆಪ್ಟೆಂಬರ್ 15 ರಂದು ಡೆಟ್ರಾಯಿಟ್ ಆಟೋ ಶೋನಲ್ಲಿ ಪ್ರಾರಂಭಿಸಲಾಯಿತು. ಪ್ರದರ್ಶನದ ವೇಳೆ ಈ ಬೈಕ್ ಅನ್ನು ತಜ್ಞರು ಪ್ರಶಂಸಿಸಿದ್ದಾರೆ. ಈ ಬೈಕಿನ ಹೆಸರು Xturismo. ಡೆಟ್ರಾಯಿಟ್ ಆಟೋ ಶೋ ಸಹ ಅಧ್ಯಕ್ಷ ಥಾಡ್ ಸ್ಜೋಟ್ ಬೈಕ್ ಅನ್ನು ಶ್ಲಾಘಿಸಿದರು.
ಮಾಹಿತಿಯ ಪ್ರಕಾರ, ಅವರೇ ಇದನ್ನು ಪರೀಕ್ಷಿಸಿದ್ದಾರೆ. ಜೊತೆಗೆ ಅನುಭವವನ್ನು ಹಂಚಿಕೊಂಡಿದ್ದಾರೆ, “ಇದು ತುಂಬಾ ರೋಮಾಂಚನಕಾರಿ ಮತ್ತು ಅದ್ಭುತವಾಗಿದೆ” ಎಂದು ಹೇಳಿದ್ದಾರೆ.
ಈ ಬೈಕ್ ಜನರ ಕನಸುಗಳನ್ನು ನನಸಾಗಿಸುತ್ತದೆ. ಆದರೆ ಇದಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕಂಪನಿಯ ಪ್ರಕಾರ, ಈ ಬೈಕಿನ ಬೆಲೆ 7 ಲಕ್ಷ 77 ಸಾವಿರ ಡಾಲರ್. ಹಾಗಾದರೆ ನಾವು ಈ ಹಣವನ್ನು ಭಾರತೀಯ ರೂಪಾಯಿಗಳಲ್ಲಿ ನೋಡಿದರೆ, 6 ಕೋಟಿ 18 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಬೈಕ್‌ನ ತೂಕ 300 ಕೆ.ಜಿ. ಈ ಹಾರುವ ಬೈಕ್ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದಲ್ಲಿ ಹಾರಬಲ್ಲದು. ಇದು ಬ್ಯಾಟರಿಯ ಸಾಮಾರ್ಥ್ಯದಿಂದ ಚಲಿಸುತ್ತದೆ.
ಕಂಪನಿಯ ಪ್ರಕಾರ, ಈ ಬೈಕಿನ ಬೆಲೆ 39,82,525 ರೂಪಾಯಿ. ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಪರಿಚಯಿಸಿರುವ ಈ ಬೈಕ್ ಜಪಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದರ ತಯಾರಕರು 2023 ರಲ್ಲಿ US ನಲ್ಲಿ ಮಾರಾಟವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. AERWINS ತನ್ನ ವೆಬ್‌ಸೈಟ್‌ನಲ್ಲಿ ಬೈಕ್ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ಹಾರುವ ಥ್ರಿಲ್ ಅನ್ನು ಸಂಯೋಜಿಸುತ್ತದೆ ಎಂದು ಹೇಳಿದೆ.
ಈ ಬೈಕ್ ಖರೀದಿಸಬೇಕಾದರೆ ಜಪಾನ್ ಗೆ ಹೋಗಬೇಕು.