‘ಜಠರ’ವೆಂದರೆ ಅನ್ನಾಶಯ, ಮೇಲಿನ ಹೊಟ್ಟೆ ‘ಪರಿವರ್ತನ ’= ಸುತ್ತ ಸುತ್ತುವುದು.
ಅಭ್ಯಾಸ ಕ್ರಮ
1. ಮೊದಲು ನೆಲದ ಮೇಲೆ ಅಂದರೆ ಅಂಗಾತಲೆಯಾಗಿ ಬೆನ್ನನ್ನುರಗಿ ಮಲಗಬೇಕು.
2. ಬಳಿಕ,ಎರಡೂ ಕೈಗಳನ್ನು ಹೆಗಲ ಮಟ್ಟಕ್ಕಿರುವಂತೆ, ಎರಡು ಪಕ್ಕಗಳಿಗೂ ನೀಳವಾಗಿ ಚಾಚಿರಬೇಕು ಈ ಭಂಗಿಯು ಏಸುಕ್ರಿಸ್ತನಿಗೆ ಅಳವಡಿಸಿದ ಶಿಲುಬೆಯನ್ನು ಹೋಲುತ್ತದೆ.
3. ಆಮೇಲೆ ಉಸಿರನ್ನು ಹೊರ ಹೋಗಿಸಿ ಕಾಲುಗಳೆರಡನ್ನೂ ಜೊತೆಯಲ್ಲಿಯೇ ಮೇಲೆತ್ತಿ, ಅವುಗಳನ್ನು ನೆಲಕ್ಕೆ ಲಂಬವಾಗಿರುವಂತಿರಬೇಕು. ಕಾಲುಗಳು ಕಬ್ಬಿಣದ ಸಲಾಕಿಯಂತೆ ಬಿಗಿಯಾಗಿಯೂ ನೇರವಾಗಿ ಇರಬೇಕು. ಇದಕ್ಕಾಗಿ ಮಂಡಿಗಳನ್ನು ಎಂದಿಗೂ ಬಗಿಸಬಾರದು.
4. ಈ ಭಂಗಿಯಲ್ಲಿ ಕೆಲವು ಸಲ ಉಸಿರಾಟ ನಡೆಸುತ್ತಾ ನಿಲ್ಲಿಸಬೇಕು. ಬಳಿಕ ಉಸಿರನ್ನು ಹೊರಕ್ಕೆಬಿಟ್ಟು, ಆ ಬಳಿಕ ಎರಡೂ ಕಾಲುಗಳನ್ನು ಜೊತೆಯಲ್ಲಿಯೇ ಎಡಪಕ್ಕಕ್ಕೆ ನೆಲದಡೆಗೆ ಸರಿಸಿ ಎಡಗಾಲ ಹೆಬ್ಬೆರಳುಗಳು ನೀಲವಾಗಿ ಚಾಚ್ಚಿಟ್ಟಿರುವ ಎಡಕೈಬೆರಳುಗಳನ್ನು ಮುಟ್ಟುವವರೆಗೂ ಬಾಗಿಸಿ ಆನಂತರ ನೆಲದ ಮೇಲೆ ಚೆನ್ನಾಗಿ ಬೆನ್ನನ್ನು ಊರಿಡಬೇಕು. ಅಭ್ಯಾಸದ ಮೊದಲ ಹಂತದಲ್ಲಿ ಬಲಬಜವು ನೆಲದಿಂದ ಮೇಲೆತ್ತಿಕೊಂಡೇ ಇರುತ್ತದೆ. ಇದನ್ನು ತಡೆಯಲು ಅಭ್ಯಾಸಕನ್ನು ಅದನ್ನು ನೆಲದ ಮೇಲೆ ಒತ್ತಿಡಲು ಮತ್ತೊಬ್ಬ ನೆರವನ್ನು ಪಡೆಯಬಹುದು. ಇಲ್ಲವೇ, ಕಾಲುಗಳನ್ನು ಎಡಪಕ್ಕಕ್ಕೆ ಹೊರಳಿಸುವಾಗ, ಎಡಗೈಯಿಂದ ಯಾವುದಾದರೂ ಒಂದು ಭಾರವಾದ ಸಾಮಾಗ್ರಿಯನ್ನೂ ಅಥವಾ ಪೀಠೋಪಕರಣವನ್ನೂ ಬಿಗಿಯಾಗಿ ಹಿಡಿದುಕೊಳ್ಳಬೇಕು.
5. ಆಮೇಲೆ ಎರಡೂ ಕಾಲುಗಳನ್ನು ಜೊತೆಯಲ್ಲಿಯೇ ನೆಲಕ್ಕಿಸಬೇಕು.ಆಗ ಮಂಡಿಗಳನ್ನು ಬಿಡದೆ ಬಿಗಿಯಾಗಿಯೇ ಇಟ್ಟಿರಬೇಕಾದುದು ಮುಖ್ಯ. ಅನಂತರ, ಸಾಧ್ಯವಾದಷ್ಟು ಟೊಂಕದ ಭಾಗದಲ್ಲಿ ಬೆನ್ನೆಲುಬಿನ ಭಾಗವನ್ನು ನೆಲದಮೇಲಿರಿಸಿ,ಬಳಿಕ ಟೊಂಕದ ಭಾಗದಿಂದ ಮಾತ್ರ ಕಾಲುಗಳನ್ನು ತಿರುಗಿಸಬೇಕು ಚಾಚಿದ ಎಡಗೈ ಭಾಗವನ್ನು ಕಾಲುಗಳನ್ನು ಸಮೀಪಿಸಿದಾಗ ಕಿಬ್ಬೊಟ್ಟೆಯನ್ನು ಬಲಗಡೆಗೆ ಸರಿಸಬೇಕು.
6. ಈ ಭಂಗಿಯ ಸುಮಾರು 20 ಸೆಕೆಂಡುಗಳ ಕಾಲ ನೆಲೆಸಿ,ಆಗ ಕಾಲುಗಳು ಬಾಗದಂತೆ ಅವನ್ನು ಉದ್ದಕ್ಕೂ ನೇರವಾಗಿ ಸಬೇಕು. ಆ ಬಳಿಕ ಉಸಿರನ್ನು ಹೊರಕ್ಕೆ ಬೀಡುತ್ತ ಸೆಡೆಸಿಟ್ಟಿದ್ದ ಕಾಲುಗಳನ್ನು ಹಿಂದಕ್ಕೆ ಸರಿಸುತ್ತ,ಅವನ್ನು ಲಂಬ ಸ್ಥಿತಿಗೆ ತರಬೇಕು.ಏ
7. ಈ ಭಂಗಿಯ ಸ್ಥಿತಿಯಲ್ಲಿ ಹಲವು ಸಲ ಉಸಿರಾಟ ನಡೆಸಿ, ಬಳಿಕ ಹಿಂದಿನಂತೆ ಚಲನವಲನಗಳನ್ನು ಮತ್ತೆ ಅನುಗೊಳಿಸಬೇಕು. ಅಂದರೆ ಈಗ ಕಾಲುಗಳನ್ನು ಬಲಗಡೆಗೆ ಇಳಿಸಿ, ಕಿಬೊಟ್ಟೆಯನ್ನು ಎಡಗಡೆಗೆ ಹೊರಳಿಸಬೇಕು. ಈ ಭಂಗಿಯಲ್ಲಿಯೂ ಕೂಡ ಹಿಂದಿನಷ್ಟು ಕಾಲವೇ ನೆಲೆಸಿ,ಉಸಿರನ್ನು ಹೊರಹೋಗಿಸುತ್ತ,ಮತ್ತೆ ಲಂಬಸ್ಥಿತಿಗೆ ತಂದು ನಿಲ್ಲಿಸಿ ಆಮೇಲೆ ಕಾಲುಗಳನ್ನು ಮೆಲ್ಲಗೆ ನೆಲಕ್ಕಿಳಿಸಿ ತರುವಾಯ ವಿಶ್ರಾಂತಿ ಪಡೆಯಬೇಕು.
ಪರಿಣಾಮಗಳು
ದೇಹದ ಕೊಬ್ಬು ಹೆಚ್ಚಾಗಿ ಸೇರಿರುವವರಿಗೆ ಅದರ ಭಾಗವನ್ನು ಕಡಿಮೆಮಾಡಲು ಈ ಆಸನವು ತುಂಬಾ ಸಹಕಾರಿ, ಇದು ಪಿತ್ತಕೋಶ, ಗುಲ್ಮ ಮತ್ತು ಮೇದೋಜೀರಕಗಳಲ್ಲಿರುವ ಮಾಂದ್ಯವನ್ನು ದೂಡಿ,ಅವಕ್ಕೆ ಈ ಆಸನವು ಹೊಸ ಹುರುಪನ್ನು ಕಲ್ಪಿಸುತ್ತದೆ. ಅಲ್ಲದೆ,ಜಠರ ಚರ್ಮಗಳ ಊತವನ್ನು ಗುಣಪಡಿಸಿ. ಕರುಳುಗಳನ್ನು ಬಲಗೊಳಿಸುತ್ತದೆ.ಈ ಆಸನವನ್ನು ಕ್ರಮವಾಗಿ ಅಭ್ಯಸಿಸಿವುದರಿಂದ ಕಿಬ್ಬೊಟ್ಟೆಯೊಳಗಿನ ಅಂಗಗಳೆಲ್ಲವನ್ನು ಅತ್ಯುತ್ತಮ ಸ್ಥಿತಿಯಲ್ಲಿಡುವುದಕ್ಕೆ ಅನುಕೂಲಿಸುತ್ತದೆ. ಇದರ ಜೊತೆಗೆ ಈ ಆಸನಾಭ್ಯಾಸವು ನರ ಹೊರಳಿದ್ದರೆ ಅದನ್ನು ಸರಿಪಡಿಸಿ, ಬೆನ್ನಿನ ಕೆಳಭಾಗ ಮತ್ತು ಟೊಂಕಗಳ ಪ್ರದೇಶಗಳಲ್ಲಿ ಹಿಡಿದುಕೊಂಡಿದ್ದರೆ ಅವುಗಳನ್ನು ಸಡಿಲಗೊಳಿಸುತ್ತದೆ.