ಮೈಸೂರು : ರಾಷ್ಟ್ರೀಯ ಸೇನಾ ದಿನಾಚರಣೆ ಅಂಗವಾಗಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಬ್ಲಡ್ ಆನ್ ಕಾಲ್ ಕ್ಲಬ್ ಹಾಗೂ ಜೀವಾಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ರಕ್ತದಾನ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ನಂತರ ಮಾತನಾಡಿದ ಅವರು, ನಾವು ಹಣ ಸಂಪಾದಿಸಿ ಉಳಿತಾಯ ಮಾಡುವ ಭರದಲ್ಲಿ ಆರೋಗ್ಯವನ್ನು ಕಳೆದುಕೊಳ್ಳಬಾರದು. ರಕ್ತಕ್ಕೆ ಪರ್ಯಾಯ ರಕ್ತವೇ ಆಗಿರುತ್ತದೆ. ರಕ್ತದಾನವೆನ್ನುವುದು ಸಾಮಾಜಿಕ ಕಾರ್ಯದಲ್ಲಿ ಅತ್ಯುತ್ತಮವಾದದ್ದು. ರಕ್ತದಾನ ಶಿಬಿರಗಳಿಗೆ ಯುವಪೀಳಿಗೆ ಹೆಚ್ಚಾಗಿ ಪ್ರೋತ್ಸಾಹಿಸಬೇಕು ಎಂದರು.
ನಮಗೆ ನಮ್ಮ ಕುಟುಂಬಗಳಿಗೆ ಅನಿವಾರ್ಯವಾದಾಗ ಮಾತ್ರ ರಕ್ತದಾನ ಮಾಡಬಾರದು. ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ಮೈಸೂರಿನಲ್ಲಿ ಸ್ವಚ್ಛ ಭಾರತ, ಪರಿಸರ ಜಲ ಸಂರಕ್ಷಣೆ ಅಭಿಯಾನಕ್ಕೆ ಕೈಜೋಡಿಸುತ್ತೇನೆ. ನಾನು ಮೈಸೂರಿನವನಾಗಿ ನನ್ನ ಸಾಮಾಜಿಕ ಕರ್ತವ್ಯ ನಿರ್ವಹಿಸುವ ಖುಷಿಯಿದೆ ಎಂದು ತಿಳಿಸಿದರು.