ಮಂಡ್ಯ: ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಅಶೋಕ್ ನಗರ ಮೂರನೇ ಕ್ರಾಸ್ ನಲ್ಲಿರುವ ಗೃಹಧಾಕರದ ಮರಗಳನ್ನು ಕಡಿಯಲು ಲಿಖಿತ ಪತ್ರ ನೀಡಿರುವುದು ಸರಿಯಲ್ಲ ಸ್ಥಳಕ್ಕೆ ಬಂದು ಪರಿಶೀಲಿಸಿ ಮರ ಕಡಿಯಲು ಅನುಮತಿ ಕೊಡಬೇಕಾಗಿರುವುದು ನಿಮ್ಮ ಜವಾಬ್ದಾರಿ ನೀವು ಅದನ್ನು ಸರಿಯಾಗಿ ಪರಿಶೀಲಿಸದೆ ಅನುಮತಿ ಕೊಟ್ಟಿರುವುದು ಸರಿ ಇಲ್ಲ ಈ ಮರದಿಂದ ಅಲ್ಲಿ ಯಾರಿಗೂ ಯಾವುದೇ ಮನೆಗೆ ತೊಂದರೆ ಆಗುವುದಿಲ್ಲ ಇದೇ ರೀತಿ ಮುಂದೆ ನಡೆದರೆ ಜೈ ಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪರಿಸರಕ್ಕೆ ಧಕ್ಕೆ ಆಗುವ ರೀತಿ ನಡೆದುಕೊಳ್ಳುವುದು ಸರಿ ಇಲ್ಲ ಇದು ಮತ್ತೊಮ್ಮೆ ಮರುಕಳಿಸಬಾರದು ಎಂದರು
ಪ್ರತಿಭಟನೆಯಲ್ಲಿ ಜಿಲ್ಲಾ ಜೈ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಮುಖಂಡರಾದ ಎನ್ ಚಂದ್ರಶೇಖರ್ ಹರೀಶ್ ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.