ಮೈಸೂರು: ಜಯದೇವ ಹೃದ್ರೋಗ ಆಸ್ಪತ್ರೆ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಆಸ್ಪತ್ರೆಯಾಗಿದ್ದು, ೧೮ ಕ್ಯಾತ್ ಲ್ಯಾಬ್‌ಗಳನ್ನು ಹೊಂದಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ಬೆಂಗಳೂರು, ಮೈಸೂರು ಕಲ್ಬುರ್ಗಿ ಸೇರಿದಂತೆ ೧೬೦೦ ಬೆಡ್‌ಗಳ ಸಾರ್ಮಥ್ಯವಿರುವ ಜಯದೇವ ಆಸ್ಪತೆ ಪ್ರತಿನಿತ್ಯ ಸಾವಿರಾರು ಜನರಿಗೆ ಚಿಕಿತ್ಸೆ ನೀಡುತ್ತಿದೆ, ಮೈಸೂರಿನಲ್ಲಿ ಪ್ರತಿನಿತ್ಯ ೭೦೦ ಜನ ಹೊರರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಇ.ಸಿ.ಜಿ. ೮ ಲಕ್ಞದ ೮೯ ಸಾವಿರ ಜನರಿಗೆ ಮಾಡಿದ್ದೇವೆ. ಎಕೋ ೫ ಲಕ್ಷದ ೮೩ ಸಾವಿರ ಜನರಿಗೆ ಆಗಿದೆ. ಆಂಜಿಯೋಪ್ಲಾಸ್ಟಿ ೩೧.೨೬೫ ಜನರಿಗೆ ಆಗಿದೆ ತೆರೆದ ಹೃದಯ ಶಸ್ತç ಚಿಕಿತ್ಸೆಯನ್ನು ೨೧೪೧ ಜನರಿಗೆ ಮಾಡಿದ್ದೇವೆ ಎಂದರು.
ಈ ಆಸ್ಪತ್ರೆಯಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಭಾಗದ ಜನರಿಗೆ ಅನುಕೂಲವಾಗಿದ್ದು, ಹಣ ಇರಲಿ, ಇಲ್ಲದಿರಲಿ ಮೊದಲು ಮಾನವೀಯತೆಗೆ ಆದ್ಯತೆ ನೀಡಿ ಚಿಕಿತ್ಸೆ ನೀಡುತ್ತೇವೆ. ಆಸ್ಪತ್ರೆಯ ಸಿಬ್ಬಂದಿಗಳು ರೋಗ ಬಂದ ತಕ್ಷಣ ಚಿಕಿತ್ಸೆ ನೀಡಬೇಕು ನಂತರ ದಾಖಲಾತಿಗಳನ್ನು ಕೇಳಬೇಕು ಎಂದ ಅವರು, ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಷಕ ಡಾ|| ಕೆ.ಎಸ್. ಸದಾನಂದ ಡಾ|| ಹರ್ಷಬಸಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಲ್. ಜಗದೀಶ, ಡಾ|| ಸಂತೋಷ, ಡಾ|| ಶ್ರೀನಿಧಿ ಹೆಗ್ಗಡೆ, ಡಾ|| ಶಂಕರ್ ಶಿರಾ, ಡಾ|| ದೇವರಾಜ್, ನರ್ಸಿಂಗ್ ಅಧೀಷಕ ಹರೀಶ್ ಕುಮಾರ್ ಪಿ.ಆರ್.ಓ ಗಳಾದ ವಾಣಿ ಚಂಪಕಮಾಲ, ಶಂಕರ ಹಾಜರಿದ್ದರು.