Saval TV on YouTube
ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಅಲೆ ಸೃಷ್ಠಿಯಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಜೆಡಿಎಸ್’ಗೆ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೆಚ್.ಡಿ ಕುಮಾರಸ್ವಾಮಿ ಸುಮ್ಮನೆ ಘೋಷಣೆ ಮಾಡ್ತಾನೆ ಅಂತಾರೆ. ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಟೀಕೆ ಮಾಡುತ್ತಾರೆ. ಜೆಡಿಎಸ್ ಗೆ ಹಳ್ಳಿಗಳಲ್ಲಿ ಜನರ ಬೆಂಬಲ ವ್ಯಕ್ತಾಗಿದೆ. ಗೊಂದಲ ಸರಿಪಡಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು.
ಜನರ ರಕ್ತಹೀರುವವರು ಎಂದಿದ್ದ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡಿ, ಯಾರ ಬಗ್ಗೆ ಹೇಳಿದ್ದಾರೆ ಅಂತಾ ಗೊತ್ತಿಲ್ಲ. ನಮಗೆ ಅವರಷ್ಟು ತಿಳುವಳಿಕೆ ಇಲ್ಲ. ರಕ್ತ ಪಿಪಾಸುಗಳು ಅಂತಾ ಹೇಳಿದ್ದಾರೆ. ನಿನ್ನೆ ಬಿಜೆಪಿಯವರು ಯಾರನ್ನೋ ಸೇರಿಸಿಕೊಂಡ್ರಲ್ಲ ಅವರ ಇತಿಹಾಸ ತೆಗೆದು ನೋಡಿದ್ರೆ ಗೊತ್ತಾಗುತ್ತೆ ಯಾರು ರಕ್ತ ಹೀರುತ್ತಾ ಇದ್ದರು ಅಂತಾ ಎಂದು ಟಾಂಗ್ ನೀಡಿದರು.














