ಜೇಷ್ಠಾ ನಕ್ಷತ್ರದ ಕ್ಷೇತ್ರವ್ಯಾಪ್ತಿ 16 ಅಂಶ 30 ಕಲಾದಿಂದ 30 ಅಂಶದವರೆಗೆ ವೃಶ್ಚಿಕ ರಾಶಿಯಲ್ಲಿ ರಾಶಿ ಸ್ವಾಮಿ – ಮಂಗಳ, ನಕ್ಷತ್ರ ಸ್ವಾಮಿ- ಬುಧ, ಆದ್ಯನಾಡಿ, ಮೃಗ(ಚಿಗರೆ) ಯೋನಿ, ರಾಕ್ಷಸ ಗಣ, ನಾಮಾಕ್ಷರ- ನೋ, ಯಾ, ಯಿ. ಯಾ. ಆಕಾಶ ಭಾಗ – ದಕ್ಷಿಣ, ತಾರಾಸಮೂಹ – 3. ಈ ನಕ್ಷತ್ರ ಪ್ರತಿನಿಧಿ ಸುವ ಜಾತಕನ ಶರೀರ ಭಾಗ – ಕರುಳುಗಳು, ಮಲದ್ವಾರ, ಗುಪ್ತಾಂಗ ಲಿಂಗ/ಯೋನಿ, ಡಿಂಬಗ್ರಂಥಿ, ಅಂಡಾಶಯ, ಗರ್ಭ.
* ಜೈಷ್ಠಾ ನಕ್ಷತ್ರದ ಜಾತಕನ ಸ್ವರೂಪ :
ಅಧ್ಯಯನಶೀಲ ಕಾರ್ಯತತ್ತರ, ಬೇಗ- ಬೇಗ ಕೆಲಸ ನಿರ್ವಹಿಸುವವ, ನಿಷ್ಠಪಟ, ಸರಳ ಮನಸ್ಸಿನವ, ಹಾಸ್ಯಪ್ರಿಯ ತೀಕ್ಷ್ಣ ಪ್ರವೃತ್ತಿಯವ, ಸ್ಪಷ್ಟವಾದಿ, ವಾಕ್ ಯುದ್ಧದಲ್ಲಿ ಪ್ರವೀಣ, ತರ್ಕಶಾಸ್ತ್ರಿ ಸೋತಶಾಲಿ ವಿದ್ವಾಂಸ, ರಾತ್ರಿ-ಹಗಲು ಕಾರ್ಯ ನಿರ್ವಹಿಸುವವ, ಪ್ರಯೋಗವಾದಿ, ಚಾತುರ್ಯದಿಂದ ತಕ್ಷಣ ಉತ್ತರಿಸುವವ, ತೀಕ್ಷನಷ್ಟಿ ಕ್ರೋಧಿ, ಅತಿರಂಜನವಾದಿ, ಅತಿಶಯೋಕ್ತಿಯ ಪ್ರಯೋಗ ಮಡುವವ ಎಷದ ನಾಲಿಗೆಯವ, ವಿಷೋಕ್ತ ಬಾಯಿಯವ, ವಿಷಕನ್ಯಾ ಸ್ವರೂಪ (ಸ್ತ್ರೀ ಜಾತಕರಿಗಾಗಿ), ಉಚ್ಚ ಕುಟುಂಬಕ್ಕೆ ಸಂಬಂಧಿಸಿದವ, ಶ್ರೀಮಂತ, ಪ್ರಖ್ಯಾತ, ಮೋನಾರ್ಕ್, ವಿಜಯಿ, ಪದವಿಯುಕ್ತ ವಿದ್ಯಾರ್ಥಿ ವೃತ್ತಿ ಗ್ರಹಣ ಮಾಡುವವ, ಧುರೀಣ ನಿಷಿದ್ಧಕಾರ್ಯ ಗಳ ಸಂಚಾಲಕ, ರೌಡಿ (ದುಷ್ಟು), ಜೇಬುಗಳ್ಳ, ಮೋಸಗಾರ, ಚೌರ್ಯದಲ್ಲಿ ಪ್ರವೀಣ, ಅಲ್ಪ ಮಿತ್ರರಿರುವವ, ಅತಿ ಖಿನ್ನನಾಗುವವ, ಸೈನ್ಯ-ದೂತ.
ಗಣಿತ ಅಥವಾ ವಿಜ್ಞಾನದಲ್ಲಿ ಅಭಿರುಚಿಯುಳ್ಳವ, ಅಸ್ಥಿರ ಮಾನ್ಯತೆಯವ.
ಜೈಷ್ಠಾ ಜಾತಕನ ಉದ್ಯೋಗ :
ರಸಾಯನ ಇಂಜಿನಿಯರ್, ಮುದ್ರಣಾಲಯದ ಉದ್ಯೋಗಿ, ಮುದ್ರಕ, ಪ್ರಕಾಶಕ, ಮಸಿ, ಬೆರಳಚ್ಚು ಯಂತ್ರ, ಶೀವು ಲಿಪಿ, ವಸ್ತ್ರ ಉದ್ಯೋಗ, ನೇಕಾರ, ಯಂತ್ರಚಾಲಕ, ಉದ್ಯೋಗ ಸಮೂಹ ಆಣೆಕಟ್ಟು ನಿರ್ಮಾಣ, ಸ್ಥಳ, ಕಾಲುವೆ, ಉಷ್ಣವಿದ್ಯುತ್ ಕೇಂದ್ರ ಜಲಾಶಯ, ಸಂಗೀತಸಾಮಗ್ರಿ, ವೈಲಿನ್, ಜಲತರಂಗ.. ಜೀವವಿಮೆ ಪ್ರತಿನಿಧಿ, ವಿಶೇಷಜ್ಞ ಶಸ್ತ್ರಕ್ರಿಯೆಯ ಪರಿಕರ, ಟಾನಿಕ್, ಸೇನೆ, ನೌಕಾದಳ, ಲೆಕ್ಕ-ಪತ್ರ, ಜಾಹಿರಾತು, ಪಚಾರ, ಬಾಯಿಲರ್, ಪಂಪಿಂಗ್ ಸೆಟ್, ತಂತಿ-ತಂತಿರಹಿತ, ನಾವಿಕ (ಅಂಬಿಗ), ಪತಿನಿಧಿ, ಗುಮಾಸ್ತ ಲೆಕ್ಕಿಗ, ಲೇಖಕ, ಉದ್ಯೋ ಷಕ, ಸೀರಮ್ ಉತ್ಪಾದಕ, ವಿಜ್ಞಾನ ಪ್ರವಕ್ತಾ ಗಣಿತಜ್ಞ, ಅಂಕಿ-ಅಂಶ, ಅಂಕಿ-ಅಂಶಗಳ ವಿಶ್ಲೇಷಕ, ಪತ್ರಕಾರ, ಸಂಪಾದಕ, ನೃತ್ಯ, ಅಭಿನಯ, ಸೋಗುಹಾಕುವನ, ವಿದೂಷಕ.
* ಜೈಷ್ಠಾ ಜಾತಕನ ರೋಗ:
ಲ್ಯುಕೋರಿಯಾ, ರಕ್ತಸ್ರಾವ, ಮೂಲವ್ಯಾಧಿ, ಫಿಸ್ತುಲಾ, ಗುಳ್ಳೆ, ಟ್ಯೂಮರ್, ಜಿಪ್ತಾಂಗಗಳ ರೋಗ, ಕರುಳಿನಲ್ಲಿ ವಿಕಾರ, ತೋಳುಗಳಲ್ಲಿ ನೋವು, ಭುಜಗಳಲ್ಲಿ ಪೀಡನೆ.
ವಿಶೇಷ:
ಮಂಗಳನ ರಾಶಿ ಮತ್ತು ಬುಧನ ನಕ್ಷತ್ರದಲ್ಲಿ ಜನಿಸಿದ ಜೇಷ್ಠಾ ಜಾತಕರು ಶಿಕ್ಷಣದಲ್ಲಿ ವಿಶೇಷ ಪ್ರತಿಭಾಶಾಲಿಯಾಗುತ್ತಾರೆ. ಇಂಥ ಜಾತಕರು ಉತ್ತಮ ಲೇಖಕ, ಪತ್ರಕರ್ತ ಅಥವಾ ವಿಶ್ಲೇಷಕರಾಗುತ್ತಾರೆ. ಗರ್ವಿ, ವಿಲಾಸಪ್ರಿಯ, ತೀವ್ರಮಾತು. ಅಧಿಕಾಂಶ ಜಾತಕರು ಅನಾರೋಗ್ಯಪೀಡಿತ. ಪಶುಗಳ ಕುರಿತು ವಿಶೇಷ ಶ್ರದ್ದೆ ಹೊಂದುವವರು ಅಥವಾ ಪರುಪಾಲನೆಯ ಕ್ಷೇತ್ರದಲ್ಲಿ ಅಭಿರುಚಿಯುಳ್ಳವರು, ಮಿತ್ರರಿಗೆ ಸಹಕಾರಿಗಳು, ಪ್ರಗತಿಯ ಕಾರ್ಯಗಳಲ್ಲಿ ಬಾಧೆಗಳನ್ನು ಎದುರಿಸುವವರು ಮತ್ತು ತಮ್ಮ ಕುಲಕ್ಕೆ ವಿರೋಧಿಗಳಾಗುತ್ತಾರೆ.
ಒಂದು ವೇಳೆ ಜಾತಕನಿಗೆ ಬುಧ ಮಹಾದಶೆ ಮಂಗಳನ ಭುಕ್ತಿ ನಡೆಯುತ್ತಿದ್ದರೆ ಅಥವಾ ಮಂಗಳನ ಮಹಾದೆಶೆ ಮತ್ತು ಬುಧನ ಭುಕ್ತಿ ನಡೆಯುತ್ತಿದ್ದರೆ, ಜಾತಕನು ಜನ್ಮಕುಂಡಲಿಯ ಅನುಸಾರ ಇದೇ ಗ್ರಹಗಳ ಸ್ಥಿತಿಯ ಅನುಸಾರ ಫಲವನ್ನು ಪ್ರಾಪ್ತಿ ಹೊಂದುತ್ತಾನೆ. ಸೂರ್ಯನು ಈ ನಕ್ಷತ್ರದ ಮೇಲೆ ಮಾರ್ಗಶಿರ ಮಾಸದ ಅಂತ್ಯದಲ್ಲಿ ಸುಮಾರು 13 ದಿನಗಳವರೆಗೆ ಇರುತ್ತಾನೆ. ಚಂದ್ರನು ಪ್ರತಿ ಇಪತ್ತೇಳನೆಯ ದಿನ 1 ದಿನದ ಅವಧಿಗೆ ಈ ನಕ್ಷತ್ರದ ಮೇಲೆ ಭ್ರಮಣ ಮಾಡುತ್ತಾನೆ.