ರಾಂಚಿ: ಜಾರ್ಖಂಡ್‌ನಲ್ಲಿ ಪ್ರಥಮ ಬಾರಿಗೆ ಸಮುದಾಯ ಆರೋಗ್ಯ ಕೇಂದ್ರದ ಜವಾಬ್ದಾರಿಯನ್ನು ತೃತೀಯಲಿಂಗಿಯೊಬ್ಬರು ವಹಿಸಿಕೊಳ್ಳಲಿದ್ದಾರೆ. ಅದರಂತೆ ಸಿಂಗ್‌ಭೂಮ್‌ನ ಮನೋಹರಪುರದ ನಿವಾಸಿ ಅಮೀರ್ ಮಹತೋ ಅವರನ್ನು ಆರೋಗ್ಯ ಇಲಾಖೆಯು ಸಮುದಾಯ ಆರೋಗ್ಯ ಅಧಿಕಾರಿಯಾಗಿ ನೇಮಿಸಿದೆ.
ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಗುರುವಾರ ಅಮೀರ್ ಮಹತೋ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಸಂಬಲ್ಪುರ ಗ್ರಾಮದಲ್ಲಿ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ಮಹತೋ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ನೇಮಕಗೊಂಡ 365 ಅಭ್ಯರ್ಥಿಗಳಲ್ಲಿ ಒಬ್ಬರು. ನನ್ನ ಅಮ್ಮನಿಗೆ ನಾನು ನರ್ಸ್ ಆಗಬೇಕೆಂದು ಬಯಕೆ ಇತ್ತು ಆದರೆ ಮನೆಯ ಆರ್ಥಿಕ ಸ್ಥಿತಿಗತಿ ಆ ನರ್ಸಿಂಗ್ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೂ ಹೇಗೋ ಧೈರ್ಯ ಮಾಡಿ ಅಮ್ಮನ ಅಸೆ ನೆರವೇರಿಸಿದೆ. ಅದಕ್ಕೆ ತಕ್ಕಂತೆ ಕೆಲಸವೂ ಸಿಕ್ಕಿದೆ ನಿಜವಾಗಿಯೂ ನನಗೆ ಈ ಹುದ್ದೆ ಸಿಗುತ್ತದೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ಈ ಹುದ್ದೆ ನೀಡಿ ನನ್ನ ಜೀವನ ಪಥವನ್ನು ಬದಲಿಸಿದ ಮುಖ್ಯಮಂತ್ರಿ ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.