ಜಾರ್ಖಂಡ್: ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರ ಬೆಂಗಾವಲು ವಾಹನ ಬುಧವಾರ ಮುಂಜಾನೆ ಅಪಘಾತಕ್ಕೀಡಾಗಿದೆ ಪರಿಣಾಮ ಬೆಂಗಾವಲು ವಾಹನದಲ್ಲಿದ್ದ ಓರ್ವ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟು ನಾಲ್ಕು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಾರ್ಯಕ್ರಮಕ್ಕೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರನ್ನು ಬುಧವಾರ ಮುಂಜಾನೆ ಸುಮಾರು ಎರಡು ಗಂಟೆಯ ಸುಮಾರಿಗೆ ಜಾರ್ಖಂಡ್ ನಲ್ಲಿರುವ ಅವರ ಸ್ವಗ್ರಾಮಕ್ಕೆ ಬಿಟ್ಟು ಬೆಂಗಾವಲು ವಾಹನ ಹಿಂತಿರುಗುತ್ತಿದ್ದ ಸಂದರ್ಭ ಸೆರೈಕೆಲಾ-ಖಾರ್ಸ್ವಾನ್ ಪ್ರದೇಶದಲ್ಲಿ ಬರುತ್ತಿದ್ದಂತೆ ಅಪರಿಚಿತ ವಾಹನಕ್ಕೆ ಬೆಂಗಾವಲು ವಾಹನ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಪರಿಣಾಮ ಓರ್ವ ಪೊಲೀಸ್ ಕಾನ್ಸ್ ಸ್ಟೇಬಲ್ ವಿನಯ್ ಕುಮಾರ್ ಮೃತಪಟ್ಟರೆ ಇತರೆ ನಾಲ್ವರು ಗಾಯಗೊಂಡಿದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Saval TV on YouTube