ಮನೆ ಅಪರಾಧ ಜಾರ್ಖಂಡ್‌: ಐಇಡಿ ಸ್ಫೋಟಗೊಂಡು ಮೂವರು ಸಿಆರ್‌ಪಿಎಫ್‌ ಸಿಬ್ಬಂದಿಗೆ ಗಾಯ

ಜಾರ್ಖಂಡ್‌: ಐಇಡಿ ಸ್ಫೋಟಗೊಂಡು ಮೂವರು ಸಿಆರ್‌ಪಿಎಫ್‌ ಸಿಬ್ಬಂದಿಗೆ ಗಾಯ

0

ಚಾಯ್‌ಬಾಸಾ: ಜಾರ್ಖಂಡ್‌ನ ಪಶ್ಚಿಮ ಸಿಂಘಬಮ್‌ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ (ಐಇಡಿ) ಸ್ಫೋಟಗೊಂಡು ಕನಿಷ್ಠ ಮೂವರು ಸಿಆರ್‌ಪಿಎಫ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.

Join Our Whatsapp Group

ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ರಾಂಚಿಗೆ ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮನೋಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸರಂದಾ ಅರಣ್ಯದ ಬಲಿವಾದಲ್ಲಿ ಈ ಘಟನೆ ನಡೆದಿದೆ. ಸಿಆರ್‌ಪಿಎಫ್ 197 ಬೆಟಾಲಿಯನ್ ಸಿಬ್ಬಂದಿ ಶೋಧ ಕಾರ್ಯಾಚರಣೆಗಾಗಿ ಅಲ್ಲಿಗೆ ಹೋದಾಗ ಕಚ್ಚಾ ಬಾಂಬ್‌ ಸ್ಫೋಟಗೊಂಡಿದೆ ಎಂದು ಡಿಐಜಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ.